For Quick Alerts
  ALLOW NOTIFICATIONS  
  For Daily Alerts

  Alia Bhatt: ರಾಜಮೌಳಿ ವಿರುದ್ಧ ಮುನಿಸು? RRR ಪೋಸ್ಟ್ ಡಿಲೀಟ್ ಮಾಡಿದ್ದಕ್ಕೆ ಕಾರಣ ಕೊಟ್ಟ ಆಲಿಯಾ

  |

  ನಟಿ ಆಲಿಯಾ ಭಟ್ 'RRR' ಚಿತ್ರತಂಡದ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿ ಬಹುವಾಗಿ ಹರಿದಾಡಿತ್ತು. ಇದಕ್ಕೆ ಕಾರಣವೂ ಇತ್ತು.

  'RRR' ಸಿನಿಮಾ ಬಹುದೊಡ್ಡ ಹಿಟ್ ಆಗಿದೆ. ಆದರೆ ಸಿನಿಮಾ ಹಿಟ್ ಆದ ಬಗೆಗಿನ ಕ್ರೆಡಿಟ್ ಹೋಗುತ್ತಿರುವುದು ಜೂ ಎನ್‌ಟಿಆರ್, ರಾಮ್ ಚರಣ್ ಹಾಗೂ ರಾಜಮೌಳಿಗೆ ಮಾತ್ರ. ಸಿನಿಮಾದ ನಾಯಕಿ ಆಗಿದ್ದ ಆಲಿಯಾ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಕಾರಣ ಆಕೆಯ ಪಾತ್ರ ಸಿನಿಮಾದಲ್ಲಿ ಬಹಳ ಸಣ್ಣದು.

  ಮುಂಬೈನಲ್ಲಿ 'RRR' ಟಿಕೆಟ್ ಸಿಗಲಿಲ್ಲ, ಬೆಂಗಳೂರಲ್ಲಿ ನೋಡುವೆ ಎಂದ ನಟಿ ಶ್ರಿಯಾಮುಂಬೈನಲ್ಲಿ 'RRR' ಟಿಕೆಟ್ ಸಿಗಲಿಲ್ಲ, ಬೆಂಗಳೂರಲ್ಲಿ ನೋಡುವೆ ಎಂದ ನಟಿ ಶ್ರಿಯಾ

  ಕೆಲವೇ ನಿಮಿಷಗಳಷ್ಟು ಸಮಯ ಮಾತ್ರ ಆಲಿಯಾ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಆಲಿಯಾ ನಟಿಸಿದ್ದ ಹಲವು ದೃಶ್ಯಗಳನ್ನು ರಾಜಮೌಳಿ ಚಿತ್ರೀಕರಿಸಿದ್ದರಂತೆ ಆದರೆ ಸಿನಿಮಾದ ಅವಧಿ ಉದ್ದವಾದ ಕಾರಣ ಅವಕ್ಕೆ ಕತ್ತರಿ ಹಾಕಿದ್ದಾರೆ. ಇದು ಆಲಿಯಾಗೆ ಬೇಸರ ತಂದ ಕಾರಣ, ರಾಜಮೌಳಿಯನ್ನು ಸಾಮಾಜಿಕ ಜಾಲತಾಣದಿಂದ ಅನ್‌ಫಾಲೋ ಮಾಡಿದ್ದಾರೆ. 'RRR' ಸಿನಿಮಾದ ಬಗ್ಗೆ ಇನ್‌ಸ್ಟಾನಲ್ಲಿ ಹಾಕಿಕೊಂಡಿದ್ದ ಪೋಸ್ಟ್‌ಗಳನ್ನೆಲ್ಲ ಡಿಲೀಟ್ ಮಾಡಿದ್ದಾರೆ ಎನ್ನಲಾಗಿತ್ತು.

  ಅಸಮಾಧಾನದಿಂದ ಡಿಲೀಟ್ ಮಾಡಿಲ್ಲ: ಆಲಿಯಾ

  ಅಸಮಾಧಾನದಿಂದ ಡಿಲೀಟ್ ಮಾಡಿಲ್ಲ: ಆಲಿಯಾ

  ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಟಿ ಆಲಿಯಾ, ''ನಾನು 'RRR' ಚಿತ್ರತಂಡದ ಬಗ್ಗೆ ಬೇಸರಗೊಂಡಿದ್ದೇನೆ ಹಾಗಾಗಿ ಸಿನಿಮಾದ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದೇನೆ ಎಂಬ ಸುದ್ದಿಗಳನ್ನು ಕೇಳಲ್ಪಟ್ಟೆ. ಇನ್‌ಸ್ಟಾಗ್ರಾಂ ರೀಲ್‌ಗಳನ್ನು ನಂಬಿ ಏನೇನೋ ಊಹಿಸುವುದು, ನಂಬುವುದು ಮಾಡಬೇಡಿ. ನನ್ನ ಇನ್‌ಸ್ಟಾಗ್ರಾಂ ಫ್ರೊಫೈಲ್ ಅನ್ನು ಆಗಾಗ್ಗೆ ನಾನು ಮರು ಹೊಂದಿಸುತ್ತಿರುತ್ತೇನೆ ಹಾಗಾಗಿ 'RRR' ನ ಕೆಲವು ಪೋಸ್ಟ್ ಬಿಟ್ಟು ಎಲ್ಲವನ್ನೂ ಡಿಲೀಟ್ ಮಾಡಿದ್ದೇನೆ'' ಎಂದಿದ್ದಾರೆ.

  ''ಕಷ್ಟಪಟ್ಟು ಮಾಡಿರುವ ಸಿನಿಮಾದ ಬಗ್ಗೆ ತಪ್ಪು ಮಾಹಿತಿ ಹರಡಿಸಬೇಡಿ''

  ''ಕಷ್ಟಪಟ್ಟು ಮಾಡಿರುವ ಸಿನಿಮಾದ ಬಗ್ಗೆ ತಪ್ಪು ಮಾಹಿತಿ ಹರಡಿಸಬೇಡಿ''

  ''ನಾನು RRR ಪ್ರಪಂಚದ ಭಾಗವಾಗಿರುವುದಕ್ಕೆ ಕೃತಜ್ಞನಾಗಿದ್ದೇನೆ. ಸೀತೆಯ ಪಾತ್ರ ನನಗೆ ತುಂಬಾ ಇಷ್ಟವಾಯಿತು. ರಾಜಮೌಳಿ ಅವರ ನಿರ್ದೇಶನದಲ್ಲಿ ನಟಿಸಿದ್ದು ನನಗೆ ಖುಷಿಯಾಯಿತು, ತಾರಕ್ (ಜೂನಿಯರ್ ಎನ್‌ಟಿಆರ್) ಮತ್ತು ರಾಮ್ ಚರಣ್ ಅವರೊಂದಿಗೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. 'RRR' ಸಿನಿಮಾದ ಸೆಟ್‌ನಲ್ಲಿ ಪ್ರತಿಯೊಂದು ಅನುಭವವೂ ನನಗೆ ಇಷ್ಟವಾಯಿತು. ಈ ಸುಂದರ ಕತೆಗೆ ಜೀವ ತುಂಬಲು ರಾಜಮೌಳಿ ಮತ್ತು ತಂಡದವರು ಹಲವು ವರ್ಷಗಳು ಪ್ರಯತ್ನ ಮತ್ತು ಶಕ್ತಿಯನ್ನು ವ್ಯಯಿಸಿದ್ದಾರೆ. ಬಹಳ ಶ್ರಮಪಟ್ಟು ಮಾಡಿದ ಈ ಸಿನಿಮಾದ ಬಗ್ಗೆ ಅಥವಾ ಸಿನಿಮಾದ ಸುತ್ತ ತಪ್ಪು ಮಾಹಿತಿಗಳು ಹರಿದಾಡುವುದನ್ನು ನಾನು ಸಹಿಸುವುದಿಲ್ಲ ಹಾಗಾಗಿ ಈ ಸ್ಪಷ್ಟನೆಯನ್ನು ನಾನು ನೀಡುತ್ತಿದ್ದೇನೆ'' ಎಂದಿದ್ದಾರೆ ಆಲಿಯಾ ಭಟ್.

  'RRR' ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದ ಆಲಿಯಾ

  'RRR' ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದ ಆಲಿಯಾ

  'RRR' ಸಿನಿಮಾದ ಹಲವು ವಿಡಿಯೋ, ಚಿತ್ರಗಳನ್ನು ಆಲಿಯಾ ಭಟ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ, ಸಿನಿಮಾದಲ್ಲಿ ಆಲಿಯಾ ಭಟ್‌ರ ಪಾತ್ರಕ್ಕೆ ಮಹತ್ವ ಇಲ್ಲದ ಬಗ್ಗೆ ಚರ್ಚೆಗಳೆದ್ದವು, ಆಲಿಯಾ ಭಟ್‌ರ ಅಭಿಮಾನಿಗಳು ಸಹ ಅಸಮಾಧಾನ ವ್ಯಕ್ತಪಡಿಸಿದರು. ಅದೇ ಸಮಯಕ್ಕೆ ಆಲಿಯಾ ಭಟ್ 'RRR' ಸಿನಿಮಾದ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದರು. ಹೀಗಾಗಿ ಆಲಿಯಾ ಭಟ್, ರಾಜಮೌಳಿ ಹಾಗೂ 'RRR' ತಂಡದೊಂದಿಗೆ ಮುನಿಸಿಕೊಂಡು ಹೀಗೆ ಮಾಡಿದ್ದಾರೆ ಎನ್ನಲಾಗಿತ್ತು.

  ಹಲವು ಸಿನಿಮಾಗಳಲ್ಲಿ ಆಲಿಯಾ ಭಟ್ ಬ್ಯುಸಿ

  ಹಲವು ಸಿನಿಮಾಗಳಲ್ಲಿ ಆಲಿಯಾ ಭಟ್ ಬ್ಯುಸಿ

  'RRR' ಸಿನಿಮಾದಲ್ಲಿ ಆಲಿಯಾ ಭಟ್ 'ಸೀತೆ' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅವರು ರಾಮ್‌ ಚರಣ್‌ನ ಪ್ರೇಯಸಿ ಆದರೆ ಇಡೀ ಸಿನಿಮಾದಲ್ಲಿ ಅವರು ಮೂರು ಅಥವಾ ನಾಲ್ಕು ಬಾರಿ ಮಾತ್ರವೇ ಕಾಣಿಸಿಕೊಳ್ಳುತ್ತಾರೆ. ಅವರಿಗೆ ಕೇವಲ ಒಂದಷ್ಟೆ ಮುಖ್ಯವಾದ ದೃಶ್ಯವಿದೆ. 'RRR' ಹೊರತುಪಡಿಸಿ ಆಲಿಯಾ ನಟಿಸಿರುವ 'ಬ್ರಹ್ಮಾಸ್ತ್ರ' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. 'ಜೀ ಲೇ ಝರಾ', ಸಲ್ಮಾನ್ ಜೊತೆ 'ಇನ್‌ಶಾ ಅಲ್ಲಾಹ್', 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ', 'ತಕ್ತ್', 'ಆಶಿಕಿ 3' ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಜೊತೆಗೆ ಇದೇ ವರ್ಷ ಬಾಯ್‌ಫ್ರೆಂಡ್ ರಣ್ಬೀರ್ ಕಪೂರ್ ಜೊತೆ ವಿವಾಹ ಸಹ ಆಗಲಿದ್ದಾರೆ.

  English summary
  Alia Bhatt gives clarification about why she delete RRR movie update from her Instagram account. She said she is very happy for being part of 'RRR' movie.
  Thursday, March 31, 2022, 19:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X