»   » ಅಮೀಷಾ ಪಟೇಲ್ ಊಹ್ ಆಹ್ ಔಚ್ ಚಿತ್ರಗಳು!

ಅಮೀಷಾ ಪಟೇಲ್ ಊಹ್ ಆಹ್ ಔಚ್ ಚಿತ್ರಗಳು!

By: ರವಿಕಿಶೋರ್
Subscribe to Filmibeat Kannada

ಊರಿಗೆ ಬಂದವಳು ನೀರಿಗೆ ಬರುವುದಿಲ್ಲವೇ? ಹಾಗೆಯೇ ಬಾಲಿವುಡ್ ಚಿತ್ರರಂಗಕ್ಕೆ ಅಡಿಯಿಟ್ಟವರು ಮಾಕ್ಸಿಮ್ ನಿಯತಕಾಲಿಗೆ ಒಂದಲ್ಲ ಒಂದು ದಿನ ಬರಲೇಬೇಕು. ಇಲ್ಲಿ ತಮ್ಮ ಅಂದಚೆಂದವನ್ನು ಬಿಚ್ಚಿಡಲೇಬೇಕು.

ಬಾಲಿವುಡ್ ಬೆಡಗಿ ಅಮೀಷಾ ಪಟೇಲ್ ಮತ್ತೊಮ್ಮೆ ಪಡ್ಡೆಗಳ ಮೈಯಲ್ಲಿ ಕರೆಂಟ್ ಹರಿಸಿದ್ದಾರೆ. ಈ ಬಾರಿ ಅವರು ಮಾಕ್ಸಿಮ್ ನಿಯತಕಾಲಿಕೆಯಲ್ಲಿ ತಮ್ಮ ಸೌಂದರ್ಯವನ್ನು ತೆರೆದಿಟ್ಟಿದ್ದಾರೆ. ಆ ಫೋಟೋಗಳ ಝಲಕ್ ಇಲ್ಲಿದೆ.

ಮಾಕ್ಸಿಮ್ ನಿಯತಕಾಲಿಕೆಯ ಕವರ್ ಪೇಜ್ ಅಲಂಕರಿಸಿದ ತಾರೆಗಳ ಪಟ್ಟಿಗೆ ಅಮೀಷಾ ಪಟೇಲ್ ಸೇರ್ಪಡೆಯಾಗಿದ್ದಾರೆ. ಮಾಕ್ಸಿಮ್ ನಲ್ಲಿ ತಮ್ಮ ಸೌಂದರ್ಯವನ್ನು ಅಮೀಷಾ ತೆರೆದಿಡುತ್ತಿರುವುದು ಇದು ಮೂರನೇ ಬಾರಿ.

ಬ್ಲ್ಯಾಕ್ ಗೌನ್ ನಲ್ಲಿ ಕಂಗೊಳಿಸಿದ ಅಮೀಷಾ

ಈ ಫೋಟೋಗಳನ್ನು ಕ್ಲಿಕ್ಕಿಸಿದರು ದಾಬೂ ರತ್ನಾನಿ. ಬ್ಲ್ಯಾಕ್ ಗೌನ್ ನಲ್ಲಿ ಕಂಗೊಳಿಸುತ್ತಿರುವ ಅಮೀಷಾರ ವಿವಿಧ ಭಾವ ಭಂಗಿಗಳು ಮಾಕ್ಸಿಮ್ ನಲ್ಲಿ ಅನಾವರಣಗೊಂಡಿವೆ. ಈಜುಡುಗೆ ಆ ಉಡುಗೆ ಈ ಉಡುಗೆ ಎಂದು ತಮ್ಮ ತರಹೇವಾರಿ ಹಾವಭಾವಗಳನ್ನು ಪ್ರದರ್ಶಿಸಿದ್ದಾರೆ.

ಮ್ಯಾಕ್ಸಿಮ್ ಪತ್ರಿಕೆ ಮತ್ತೊಮ್ಮೆ ಮನೀಷಾಗೆ ಮಣೆ

ಬಾಲಿವುಡ್ ನಲ್ಲಿ ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಮಾಕ್ಸಿಮ್ ನಿಯತಕಾಲಿಗೆ ಎಡತಾಕುವುದು ತಾರೆಗಳಿಗೆ ಹೊಸದೇನಲ್ಲ. ಅಲ್ಲಿ ಬೇಡಿಕೆ ಇಲ್ಲ ಎಂದರೆ ಇಲ್ಲಿ ಬೇಡಿಕೆ ಇದ್ದೇ ಇರುತ್ತದೆ. ಹಾಗಾಗಿ ಮ್ಯಾಕ್ಸಿಮ್ ಪತ್ರಿಕೆ ಮತ್ತೊಮ್ಮೆ ಮನೀಷಾಗೆ ಮಣೆ ಹಾಕಿದೆ.

ಫೋಟೋ ಶೂಟ್ ವೇಳೆ ಒಳ್ಳೆಯ ಅನುಭವ ಸಿಕ್ಕಿತು

ತಾನು ಮೂರನೇ ಬಾರಿ ಮ್ಯಾಕ್ಸಿಮ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹಾಗಾಗಿ ತಮ್ಮ ಅಭಿಮಾನಿಗಳಿಗೆ ನಿರೀಕ್ಷೆ ಎಂದಿಗಿಂತಲೂ ಹೆಚ್ಚಾಗಿಯೇ ಇದೆ. ಈ ಫೋಟೋ ಶೂಟ್ ವೇಳೆ ಒಳ್ಳೆಯ ಅನುಭವ ಸಿಕ್ಕಿತು ಎಂದಿದ್ದಾರೆ ಅಮೀಷಾ.

ಮೂರರಿಂದ ನಾಲ್ಕು ಗಂಟೆಗಳ ಕಾಲ ಫೋಟೋ ಶೂಟ್

ಸರಿಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾಲ ಫೋಟೋ ಶೂಟ್ ನಡೆಯಿತು. ಕೊನೆಗೆ ನಮ್ಮ ನಿರೀಕ್ಷೆಗೂ ಮೀರಿ ಸುಂದರವಾಗಿ ನಯನ ಮನೋಹರವಾಗಿ ಫೋಟೋಗಳು ಮೂಡಿ ಬಂದಿವೆ ಎನ್ನುತ್ತಾರೆ ಅಮೀಷಾ.

ಕಹೋ ನಾ ಪ್ಯಾರ್ ಹೈ ಚಿತ್ರದ ಮೂಲಕ ಬಾಲಿವುಡ್ ಎಂಟ್ರಿ

ಅಮೀಷಾ ಪಟೇಲ್ ಹುಟ್ಟಿದ್ದು ಮುಂಬೈನಲ್ಲಿ, ಜೂನ್ 9, 1975ರಲ್ಲಿ ಅವರು ಜನಿಸಿದರು. 2000ರಲ್ಲಿ ಬಿಡುಗಡೆಯಾದ ಕಹೋ ನಾ ಪ್ಯಾರ್ ಹೈ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಅಡಿಯಿಟ್ಟರು. ಹೃತಿಕ್ ರೋಷನ್ ಚಿತ್ರದ ಹೀರೋ.

'ಅಂಕಹೀ' ಚಿತ್ರವೂ ಒಳ್ಳೆಯ ಹೆಸರು ತಂದುಕೊಟ್ಟಿದ

ಗದರ್ ಏಕ್ ಪ್ರೇಮ್ ಕಹಾನಿ ಚಿತ್ರ ಅಮೀಷಾ ಪಟೇಲ್ ಅವರಿಗೆ ಹೆಸರು ತಂದುಕೊಟ್ಟಂತಹ ಸಿನಿಮಾ. ಈ ಚಿತ್ರದಲ್ಲಿ ಗ್ಲಾಮರ್ ಗಿಂತಲೂ ಹೆಚ್ಚಾಗಿ ಅಭಿನಯಕ್ಕೆ ಅವಕಾಶ ಇತ್ತು. ಬಳಿಕ ಅಭಿನಯಿಸಿದ 'ಅಂಕಹೀ' ಚಿತ್ರವೂ ಒಳ್ಳೆಯ ಹೆಸರು ತಂದುಕೊಟ್ಟಿದ.

ಸ್ವಂತ ನಿರ್ಮಾಣ ಸಂಸ್ಥೆ ಆರಂಭಿಸಿದ ಅಮೀಷಾ

ಅದಾದ ಬಳಿಕ ಅಮೀಷಾ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದರು. ಆದರೆ ಅವರನ್ನು ಜನ ಯಾವೊಂದು ಚಿತ್ರದಲ್ಲೂ ಗುರುತಿಸಲಿಲ್ಲ. ತಮ್ಮ ಬಿಜಿನೆಸ್ ಪಾರ್ಟನರ್ ಕೂನಾಲ್ ಗೂಮರ್ ಜೊತೆ ತನ್ನದೇ ಸ್ವಂತ ನಿರ್ಮಾಣ ಸಂಸ್ಥೆಯನ್ನು ಹೊರತಂದರು.

ಇಬ್ಬರು ನಿರ್ದೇಶಕರಿಗೆ ಅವಕಾಶ

ಅದಕ್ಕೆ ಅಮೀಷಾ ಪಟೇಲ್ ಪ್ರೊಡಕ್ಷನ್ಸ್ ಎಂದು ಹೆಸರಿಟ್ಟರು. ಡೇವಿಡ್ ಧವನ್ ಹಾಗೂ ಪ್ರಿಯದರ್ಶನ್ ಇಬ್ಬರೂ ಅಮೀಷಾ ಪ್ರೊಡಕ್ಷನ್ ಚಿತ್ರಗಳಿಗೆ ಸಹಿ ಹಾಕಿದರು.

ಏಕ್ ದೋ ತೀನ್ ಹಾಡಿನ ಬಳಕೆ

ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯ ದೇಸಿ ಮ್ಯಾಜಿಕ್ ಚಿತ್ರದಲ್ಲಿ ಅಮೀಷಾ ಅಭಿನಯಿಸಿದರು. ಈ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಅವರ ತೇಜಬ್ ಚಿತ್ರದ ಏಕ್ ದೋ ತೀನ್ ಸೂಪರ್ ಹಿಟ್ ಹಾಡನ್ನು ಬಳಸಿಕೊಳ್ಳಲಾಗಿದೆ.

ದೇಸಿ ಮ್ಯಾಜಿ ನಿರೀಕ್ಷೆ ಮೂಡಿಸಿರುವ ಚಿತ್ರ

ದೇಸಿ ಮ್ಯಾಜಿಕ್ ಚಿತ್ರದಲ್ಲಿ ದ್ವಿಪಾತ್ರಾಭಿನಯ ಮಾಡಿರುವ ಅಮೀಷಾ ಈ ಚಿತ್ರದ ಮೂಲಕ ಭಾರಿ ನಿರೀಕ್ಷೆ ಮೂಡಿಸಿದ್ದಾರೆ. ಜಯೇದ್ ಖಾನ್, ರವಿ ಕಿಶನ್, ರಣಧೀರ್ ಕಪೂರ್, ಶಹಿಲ್ ಶ್ರಾಫ್ ಈ ಚಿತ್ರದ ಪಾತ್ರವರ್ಗದಲ್ಲಿದ್ದಾರೆ.

English summary
Actress Ameesha Patel was featured on the cover page of men’s entertainment magazine ‘Maxim’ for third time. The actress sizzled in a corset swim suit dress. She looked confident and beautiful. She was featured for the third time in this magazine on popular demand.
Please Wait while comments are loading...