»   » ಬಿಗ್‌ಬಿ ಗೆ ಜಿಂದಾಬಾದ್ ಕೂಗಿದ 'ಸರ್ಕಾರ್ 3' ಟ್ರೈಲರ್

ಬಿಗ್‌ಬಿ ಗೆ ಜಿಂದಾಬಾದ್ ಕೂಗಿದ 'ಸರ್ಕಾರ್ 3' ಟ್ರೈಲರ್

Posted By:
Subscribe to Filmibeat Kannada

ಸದಾ ಯಡವಟ್ಟು ಹೇಳಿಕೆಗಳನ್ನು ನೀಡುತ್ತಾ ವಿವಾದಾತ್ಮಕ ನಿರ್ದೇಶಕ ಎಂತಲೇ ಕರೆಸಿಕೊಂಡಿರುವ ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಸರ್ಕಾರ್ 3' ಚಿತ್ರದ ಫಸ್ಟ್ ಲುಕ್ ಬಾಲಿವುಡ್ ಸಿನಿ ರಸಿಕರಲ್ಲಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿತ್ತು. ಕಾರಣ ಚಿತ್ರದ ಪೋಸ್ಟರ್ ನಲ್ಲಿ ಅಮಿತಾಬ್ ಬಚ್ಚನ್ ಸರ್ಕಾರ್ ಗೆಟಪ್ ನಲ್ಲಿ ಸಾಸರ್ ಹಿಡಿದು ಟೀ ಕುಡಿಯುತ್ತಿದ್ದ ಲುಕ್ ಅಷ್ಟರ ಮಟ್ಟಿಗೆ ಆಕರ್ಷಕವಾಗಿತ್ತು.

ಅಂದಹಾಗೆ ಈ ಹಿಂದೆ ಎರಡು ಭಾಗಗಳಲ್ಲಿ ಬಂದಿದ್ದ 'ಸರ್ಕಾರ್' ಚಿತ್ರದ ಮುಂದುವರಿದ ಭಾಗ 'ಸರ್ಕಾರ್ 3' ಸಿನಿಮಾದ ಎರಡನೇ ಟ್ರೈಲರ್ ಮೊನ್ನೆಯಷ್ಟೆ ಬಿಡುಗಡೆ ಆಗಿದೆ. ಅಮಿತಾಬ್ ಬಚ್ಚನ್ ಮತ್ತೆ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಪೊಲಿಟಿಕಲ್ ಕ್ರೈಮ್ ಥ್ರಿಲ್ಲರ್ ಸಿನಿಮಾ ಟ್ರೈಲರ್ ನಲ್ಲಿ ಅವರ ಅಭಿನಯದಿಂದಲೇ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ.

Amitabh Bachchan Starrer 'Sarkar 3' trailer

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಕ್ಷನ್ ಕಟ್ ಹೇಳಿರುವ 'ಸರ್ಕಾರ್ 3' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಜಾಕಿ ಶ್ರಾಫ್, ಯಾಮಿ ಗೌತಮ್, ಮನೋಜ್ ಬಾಜ್ ಪೇಯೀ, ಅಮಿತ್ ಶಾಧ್ ಮತ್ತು ರೋನಿತ್ ರಾಯ್ ನಟಿಸಿದ್ದಾರೆ.

ಬಾಲಿವುಡ್ ನಲ್ಲಿ ಸತತ ಸೋಲುಗಳನ್ನು ಕಂಡಿರುವ ವರ್ಮಾ 'ಸರ್ಕಾರ್ 3' ಬಗ್ಗೆ ಹೆಚ್ಚಿನ ವಿಶ್ವಾಸ ಇಟ್ಟುಕೊಂಡಿದ್ದಾರೆ. ರಾಹುಲ್ ಮಿತ್ರಾ, ಆನಂದ್ ಪಂಡಿತ್ ನಿರ್ಮಾಣ ಮಾಡುತ್ತಿದ್ದಾರೆ. ರವಿ ಶಂಕರ್ ಸಂಗೀತ ಸಂಯೋಜನೆ, ಅಮೊಲ್ ರಾಥೋಡ್ ಛಾಯಾಗ್ರಹಣ ಚಿತ್ರಕ್ಕಿದೆ. 'ಸರ್ಕಾರ್ 3' ಮೇ 12 ರಂದು ಭಾರತದಾದ್ಯಂತ ಬಿಡುಗಡೆ ಆಗಲಿದೆ.

Amitabh Bachchan Starrer 'Sarkar 3' trailer

ಅಮಿತಾಬ್ ಬಚ್ಚನ್ ಅಭಿನಯದ 'ಸರ್ಕಾರ್ 3' ಟ್ರೈಲರ್ ನೋಡಲು ಕ್ಲಿಕ್ ಮಾಡಿ.

English summary
Ram Gopal Verma directorial Amitabh Bachchan Starrer 'Sarkar 3' trailer released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada