For Quick Alerts
  ALLOW NOTIFICATIONS  
  For Daily Alerts

  'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಸ್ವೀಕರಿಸಲಾಗುತ್ತಿಲ್ಲ ಎಂದು ಟ್ವೀಟ್ ಮಾಡಿದ ಅಮಿತಾಬ್

  |
  ಫಾಲ್ಕೆ ಪ್ರಶಸ್ತಿ ಸ್ವೀಕರಿಸಲು ಗೈರಾಗಲು ಕಾರಣ ಆನಾರೋಗ್ಯ | AMITABH BACHCHAN | FILMIBEAT KANNADA

  ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಜೀವಮಾನ ಸಾಧನೆಗಾಗಿ ಕೇಂದ್ರ ಸರ್ಕಾರ ನೀಡುವ ಅತ್ಯುನ್ನತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಈ ಬಾರಿ ಅಮಿತಾಬ್ ಬಚ್ಚನ್ ಆಯ್ಕೆ ಯಾಗಿದ್ದಾರೆ. ಇಂದು ದೆಹಲಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತೆ.

  ಆದರೆ ಬಿಗ್ ಬಿ ಈ ಸಮಾರಂಭಕ್ಕೆ ಗೈರಾಗುತ್ತಿದ್ದಾರೆ. ಈ ಬಗ್ಗೆ ಸ್ವತಹ ಅಮಿತಾಬ್ ಟ್ವೀಟ್ ಮಾಡಿ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಅಂದ್ಹಾಗೆ ಬಿಗ್ ಬಿ ದಿಢೀರನೆ ಫಾಲ್ಕೆ ಪ್ರಶಸ್ತಿ ಸ್ವೀಕರಿಸಲು ಗೈರಾಗಲು ಕಾರಣ ಆನಾರೋಗ್ಯ. ಕಳೆದ ಕೆಲವು ದಿನಗಳಿಂದ ಬಿಗ್ ಬಿ ಜ್ವರದಿಂದ ಬಳಲುತ್ತಿದ್ದಾರಂತೆ. ಹಾಗಾಗಿ ರಾಷ್ಟ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಪ್ರಯಾಣ ಮಾಡಲು ಆಗುವುದಿಲ್ಲ. ಇದರಿಂದ ತುಂಬ ಬೇಸರವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

  ಛೇ.. ಸುಧಾ ಮೂರ್ತಿಗೆ ಕೈಕೊಟ್ಟ 'ಈ' ಪ್ರಶ್ನೆ.! ಮನೆಯಲ್ಲಿ ನಂಗೆ ಏಟು ಬೀಳೋದು ಗ್ಯಾರೆಂಟಿ ಎಂದ ಅಮಿತಾಬ್.!ಛೇ.. ಸುಧಾ ಮೂರ್ತಿಗೆ ಕೈಕೊಟ್ಟ 'ಈ' ಪ್ರಶ್ನೆ.! ಮನೆಯಲ್ಲಿ ನಂಗೆ ಏಟು ಬೀಳೋದು ಗ್ಯಾರೆಂಟಿ ಎಂದ ಅಮಿತಾಬ್.!

  ಅಮಿತಾಬ್ 1969ರಲ್ಲಿ 'ಸಾತ್ ಹಿಂದೂಸ್ತಾನಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅಮಿತಾಬ್ ಚಿತ್ರರಂಗದಲ್ಲಿ ಬರೋಬ್ಬರಿ 50 ವರ್ಷಗಳನ್ನು ಪೂರೈಸಿದ್ದಾರೆ. 50 ವರ್ಷದ ಶ್ರಮ, ಸಾಧನೆ, ಚಿತ್ರರಂಗಕ್ಕೆ ಸಲ್ಲಿಸಿದ ಅಪಾರ ಸೇವೆಗೆ ದಾದಾ ಸಾಹೇಬ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

  ಭಾರತೀಯ ಸಿನಿಮಾ ರಂಗದ ಪಿತಾಮಹಾ ದಾದಾ ಸಾಹೇಬ್​ ಫಾಲ್ಕೆ ಅವರ ಹೆಸರಿಲ್ಲಿ ಕೊಡುವ ಈ ಪ್ರಶಸ್ತಿಯು ಸ್ವರ್ಣ ಕಮಲ ಪದಕ, ಶಾಲು ಹಾಗೂ 10 ಲಕ್ಷ ನಗದು ಹೊಂದಿರುತ್ತದೆ.

  English summary
  Bollywood Big B Amitabh Bachchan will not attend national award ceremony. He is suffering from fever.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X