»   » ಮಗಳ ಬಗ್ಗೆ ಬಿಗ್ ಬಿ ಅಮಿತಾಬ್ ಬಚ್ಚನ್ ತಳಮಳ

ಮಗಳ ಬಗ್ಗೆ ಬಿಗ್ ಬಿ ಅಮಿತಾಬ್ ಬಚ್ಚನ್ ತಳಮಳ

Posted By:
Subscribe to Filmibeat Kannada

ತಮ್ಮ ಮಕ್ಕಳ ಬಗ್ಗೆ ತಂದೆ ತಾಯಿಗೆ ಪ್ರೀತಿ, ಅನುರಾಗ, ಆಪ್ಯಾಯತೆಯಗಳು ಒಂದು ಹಿಡಿ ಜಾಸ್ತಿಯಾಗಿಯೇ ಇರುತ್ತದೆ. ಇದು ಶ್ರೀಸಾಮಾನ್ಯನಾದರೂ ಆಷ್ಟೇ, ಸಿನಿಮಾ ಸೆಲೆಬ್ರಿಟಿ ಆದರೂ ಅಷ್ಟೆ. ಮಕ್ಕಳ ಬಗೆಗಿನ ಪ್ರೀತಿ, ಆಪ್ಯಾಯತೆ ವಿಚಾರದಲ್ಲಿ ಧನಿಕನಾದರೂ, ಸಿರಿವಂತನಾದರೂ ಮಕ್ಕಳ ಬಗ್ಗೆ ತೋರುವ ಪ್ರೀತಿಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. [ಅಮ್ಮ ಹೇಳಿದ ಎಂಟು ಸುಳ್ಳುಗಳು]

ಇಷ್ಟೆಲ್ಲಾ ಪೀಠಿಕೆಗೆ ಕಾರಣ, ಅಮಿತಾಬ್ ಬಚ್ಚನ್ ಅವರೂ ಒಂದು ಕ್ಷಣ ತಮ್ಮ ಮಗಳ ಕುರಿತು ಆತಂಕಕ್ಕೊಳಗಾಗಿದ್ದು. ಅಮಿತಾಬ್ ಮಗಳು ಶ್ವೇತಾ ದೆಹಲಿಯ ಉದ್ಯಮಿ ನಿಖಿಲ್ ನಂದಾ ಅವರನ್ನು ಕೈಹಿಡಿದ ಬಳಿಕ ಸದ್ಯಕ್ಕೆ ತಮ್ಮ ಇಬ್ಬರು ಮಕ್ಕಳಾದ ನವ್ಯಾ ನವೇಲಿ, ಅಗಸ್ತ್ಯಾರೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದಾರೆ.


ಇತ್ತೀಚೆಗೆ ದೆಹಲಿಯಲ್ಲಿ ಲಘು ಭೂಕಂಪ ಸಂಭವಿಸಿತು. ಇದರಿಂದ ದೆಹಲಿಯಲ್ಲಿದ್ದವರಷ್ಟೇ ಅಲ್ಲ, ಅವರ ಬಂಧು ಬಳಗವೂ ಆತಂಕಕ್ಕೊಳಗಾಗಿತ್ತು. ತಮ್ಮ ಮಗಳಿಗೂ ಏನಾದರೂ ಆಯಿತೇ ಎಂದು ಅಮಿತಾಬ್ ಸಹ ಆತಂಕಕ್ಕೊಳಗಾಗಿದ್ದರು. ಬಳಿಕ ಅಂತಹದ್ದೇನು ಸಂಭವಿಸಿಲ್ಲ ಎಂದು ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ.

ದೆಹಲಿಯಲ್ಲಿ ಭೂಮಿ ಕಂಪನಿಸಿದ ಪರಿಮಾಣ ರಿಕ್ಟರ್ ಮಾಪಕದಲ್ಲಿ 3.1 ಎಂದು ದಾಖಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಅಮಿತಾಬ್ ಅವರು ತಮ್ಮ ಪುತ್ರಿಗೆ ಕರೆ ಮಾಡಿ ಕ್ಷೇಮವಾಗಿರುವುದನ್ನು ತಿಳಿದುಕೊಂಡಿದ್ದಾರೆ. ಆ ಬಳಿಕವಷ್ಟೇ ಅಮಿತಾಬ್ ನಿರಾಳವಾಗಿದ್ದಾರೆ.

ಎಲ್ಲರಿಗೂ ಇಷ್ಟವಾಗುವ ಅಮಿತಾಬ್ ಅವರ ಒಂದು ಗುಣ ಎಂದರೆ, ಅವರು ಈ ರೀತಿಯ ತೀರಾ ವೈಯಕ್ತಿಕ ವಿಷಯಗಳನ್ನೂ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುವುದು. ಈ ಬಗ್ಗೆ ಟ್ವೀಟಿಸಿ ತಮ್ಮ ಮನಸ್ಸಿನ ತಳಮಳ ತೋಡಿಕೊಂಡಿದ್ದಾರೆ. ಈ ಮೂಲಕ ವಸುದೈವ ಕುಟುಂಬಂ ಎಂಬ ಮಾತಿಗೆ ಅವರು ಸದಾಬದ್ಧ. (ಏಜೆನ್ಸೀಸ್)

English summary
Bollywood star Amitabh Bachchan wrote on his twitter page, "Four earthquake tremors in Delhi! Horrid! There is a huge rumbling sound of the earth below...terrifying. Shweta alone there." However, Amitabh was normal soon after realizing that Shweta was fine. Big B further wrote, "Spoke to Shweta and she is scared but okay. Lord have mercy."

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada