For Quick Alerts
  ALLOW NOTIFICATIONS  
  For Daily Alerts

  ಹಜಾರೆ ಮೇಲೆ ವರ್ಮಾ ಹೊಸ ಚಿತ್ರ ಅಣ್ಣಾ ಗ್ಯಾಂಗ್

  By Rajendra
  |
  ಬಾಲಿವುಡ್ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಗಾಗ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವ ಪ್ರಯತ್ನಗಳನು ಮಾಡುತ್ತಲೇ ಇರುತ್ತಾರೆ. ದೆವ್ವ, ಭೂತ, ಪಿಶಾಚಿಗಳ ಮೇಲೆ ಈಗಾಗಲೆ ಹಲವಾರು ಪ್ರಯೋಗಗಳನ್ನು ಮಾಡಿರುವ ಅವರ ಕಣ್ಣು ಈ ಬಾರಿ ಸಾಮಾಜಿಕ ಹೋರಾಟಗಾರ, ಗಾಂಧಿವಾದಿ ಅಣ್ಣಾ ಹಜಾರೆ ಮೇಲೆ ಬಿದ್ದಿದೆ.

  ಕಣ್ಣು ಬಿದ್ದ ಮೇಲೆ ಸುಮ್ಮನಿರುವ ವ್ಯಕ್ತಿಯಂತೂ ಅಲ್ಲ ಈ ಆಸಾಮಿ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಅಣ್ಣಾ ಹಜಾರೆ ರಾಜಕೀಯ ಪಕ್ಷ ಕಟ್ಟುತ್ತಿರುವ ಬಗ್ಗೆ ರಾಮ್ ಗೋಪಾಲ್ ವರ್ಮಾ ವಕ್ರದೃಷ್ಟಿ ಬೀರಿದ್ದಾರೆ. ಇದನ್ನೇ ಆಧಾರವಾಗಿಟ್ಟುಕೊಂಡು ಸಿನೆಮಾ ಮಾಡುತ್ತೇನೆ ಎಂದಿದ್ದಾರೆ.

  ಶೀಘ್ರದಲ್ಲೇ 'ಅಣ್ಣಾ ಗ್ಯಾಂಗ್' ಚಿತ್ರವನ್ನು ತೆಗೆಯಲಿರುವುದಾಗಿ ಅವರು ಪ್ರಕಟಿಸಿದ್ದಾರೆ. ಗಾಂಧಿವಾದಿ ಎಂದು ಹೇಳಿಕೊಂಡು ಮುನ್ನುಗ್ಗುತ್ತಿರುವ ಒಬ್ಬ ರಾಜಕಾರಣಿ ತೀವ್ರವಾಗಿ ರೋಸಿಹೋಗಿ ಭೂಗತ ಜಗತ್ತನ್ನು ಹೇಗೆ ಸೃಷ್ಟಿಸುತ್ತಾನೆ ಎಂಬುದನ್ನು ತಮ್ಮ ಚಿತ್ರದಲ್ಲಿ ತೋರಿಸುವುದಾಗಿ ಹೇಳಿದ್ದಾರೆ.

  ಈ ಹಿಂದೆ ದಾವೂದ್ ಗ್ಯಾಂಗ್ ಹೇಗೆ ಕುಖ್ಯಾತಿಗೆ ಒಳಗಾಗಿತ್ತೋ ಅದೇ ರೀತಿ 'ಅಣ್ಣಾ ಗ್ಯಾಂಗ್'ನ್ನು ತೋರಿಸುವುದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ಮತ್ತೊಂದು ವಿವಾದಕ್ಕೆ ರಾಮ್ ಗೋಪಾಲ್ ವರ್ಮಾ ಪರದೆ ಸರಿಸಿದ್ದಾರೆ.

  ಅಧಿಕಾರದಲ್ಲಿರುವವರು ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ಲಂಚಾವತಾರಿಗಳಾಗಿದ್ದರೆ, ಅಧಿಕಾರವಿಲ್ಲದವರು ಅವರನ್ನು ನೋಡಿ ಅಸೂಯೆ ಪಡುತ್ತಾ ಈ ರೀತಿಯ ಹೋರಾಟಗಳನ್ನು ಮಾಡುತ್ತಾ ಬರುತ್ತಿರುವುದನ್ನು ನಾವು ಅನಾದಿಕಾಲದಿಂದಲೂ ನೋಡುತ್ತಲೇ ಇದ್ದೇ ಎಂದು ಅಣ್ಣಾ ಹಜಾರೆ ಮೇಲೆ ಈ ಹಿಂದೊಮ್ಮೆ ವರ್ಮಾ ಕಾಮೆಂಟ್ ಮಾಡಿದ್ದರು.

  ಈ ರೀತಿ ವಿವಾದಾತ್ಮಕ ಹೇಳಿಕೆಗಳನ್ನು ಆಗಾಗ ಕೊಡುವುದು ವರ್ಮಾ ಅವರ ಹುಟ್ಟುಗುಣ. ಅವರು ಕೊಟ್ಟ ಹೇಳಿಕೆಗಳೆಲ್ಲಾ ಆಚರಣೆಗೆ ಬಂದಿಲ್ಲ ಎಂಬುದೂ ಅಷ್ಟೇ ಸತ್ಯ. ತಾನು ಏನು ಮಾಡಿದರೂ ಪ್ರಚಾರಕ್ಕಾಗಿ ಮಾಡುತ್ತೇನೆ ಎಂದೂ ಒಮ್ಮೆ ವರ್ಮಾ ಹೇಳಿದ್ದರು. ಈಗ 'ಅಣ್ಣಾ ಗ್ಯಾಂಗ್ ' ಚಿತ್ರದ ಬಗೆಗಿನ ಸುದ್ದಿ ಕೂಡ ಅಷ್ಟೇ ಎಂದು ಭಾವಿಸಬಹುದೇನೋ? (ಏಜೆನ್ಸೀಸ್)

  English summary
  "Since Anna kicked out the team he should get a gang ..Anna gang anyday sounds better than Anna team..it might even make the D gang proud. Since the Gandhi bhai way dint work for Anna bhai the Dawood bhai way might give better shots. Anna gang is the best brand I heard since Dawood gang. I want to make a film called Anna gang..its about a gandhian politician who gets vexed with his team nd forms an underworld gang" Ram Gopal Varma tweeted.
  Wednesday, August 8, 2012, 12:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X