For Quick Alerts
  ALLOW NOTIFICATIONS  
  For Daily Alerts

  ಪಾಕಿಸ್ತಾನ ನಟಿಯೊಂದಿಗೆ ಶಾರುಖ್ ಖಾನ್ ಪುತ್ರನ ಚಿತ್ರ ವೈರಲ್: ನೋರಾ ಕತೆಯೇನು?

  By ಫಿಲ್ಮಿಬೀಟ್ ಡೆಸ್ಕ್
  |

  ಡ್ರಗ್ಸ್ ಪ್ರಕರಣ ಆದಾಗಿನಿಂದಲೂ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮೇಲೆ ಮಾಧ್ಯಮಗಳು ತುಸು ಹೆಚ್ಚಾಗಿಯೇ ಗಮನ ಹರಿಸಲು ಆರಂಭಿಸಿವೆ. ಆರ್ಯನ್ ಖಾನ್ ಈಗ ಎಲ್ಲಿ ಹೋದರು ಏನು ಮಾಡಿದರೂ ಸುದ್ದಿಯೇ.

  ಡ್ರಗ್ಸ್ ಪ್ರಕರಣದಲ್ಲಿ ನ್ಯಾಯಾಲಯದಿಂದ ಖುಲಾಸೆ ಆದ ಬಳಿಕ ಸಿನಿಮಾ, ನವ್ಯೋದ್ಯಮ ಎಂದಿರುವ ಆರ್ಯನ್ ಖಾನ್ ಇದೀಗ ಮತ್ತೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವುದು ನಟಿಯೊಂದಿಗಿನ ಚಿತ್ರಕ್ಕೆ.

  ಆರ್ಯನ್ ಖಾನ್, ಪಾಕಿಸ್ತಾನದ ನಟಿಯೊಂದಿಗೆ ಇರುವ ಚಿತ್ರ ಇದೀಗ ವೈರಲ್ ಆಗಿದೆ. ಆರ್ಯನ್ ಖಾನ್ ದುಬೈಗೆ ಹೋಗಿದ್ದಾಗ ಪಾರ್ಟಿಯೊಂದರಲ್ಲಿ ಪಾಕಿಸ್ತಾನದ ನಟಿ ನದಿಯಾ ಖಾನ್ ಜೊತೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ಫೋಟೊಕ್ಕೆ ಫೋಸು ನೀಡಿದ್ದು, ಆ ಚಿತ್ರವನ್ನು ನದಿಯಾ ಖಾನ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಈ ಚಿತ್ರ ವೈರಲ್ ಆಗುವ ಮುಂಚೆ ಬಾಲಿವುಡ್‌ನ ನಟಿ, ಐಟಂ ಡ್ಯಾನ್ಸರ್‌ ಎಂದೇ ಖ್ಯಾತವಾಗಿರುವ ನೋರಾ ಫತೇಹಿ ಜೊತೆಗೆ ಆರ್ಯನ್ ಖಾನ್ ಚಿತ್ರ ಬಹಳ ವೈರಲ್ ಆಗಿತ್ತು. ನೋರಾ ಫತೇಹಿ ಹಾಗೂ ಆರ್ಯನ್ ಖಾನ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಇದೀಗ ಪಾಕ್ ನಟಿ ನದಿಯಾ ಖಾನ್ ಜೊತೆಗಿನ ಚಿತ್ರಗಳು ವೈರಲ್ ಆದ ಬಳಿಕ ನದಿಯಾ ಜೊತೆಗೆ ಡೇಟಿಂಗ್ ರೂಮರ್ ಕೇಳಿ ಬರುತ್ತಿದೆ.

  ಆರ್ಯನ್ ಖಾನ್, 2021 ರಲ್ಲಿ ಡ್ರಗ್ಸ್ ಪ್ರಕರಣದಿಂದ ಸುದ್ದಿಯಲ್ಲಿದ್ದರು. ಆರ್ಯನ್ ಖಾನ್ ಅನ್ನು ಎನ್‌ಸಿಬಿಯು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿತ್ತು. ಆದರೆ ವಿಚಾರಣೆ ಮತ್ತು ಎನ್‌ಸಿಬಿಯ ಆಂತರಿಕ ತನಿಖೆಯಿಂದ ಉದ್ದೇಶಪೂರ್ವಕವಾಗಿ ಆರ್ಯನ್ ಅನ್ನು ಬಂಧಿಸಲಾಗಿದೆ ಎಂಬ ಸತ್ಯ ಹೊರಬಿತ್ತು. ಪ್ರಕರಣದಲ್ಲಿ ಆರ್ಯನ್ ಅನ್ನು ಖುಲಾಸೆ ಮಾಡಲಾಗಿದೆ.

  English summary
  Shah Rukh Khan's son Aryan Khan seen with Pakistani actress Sadia Khan in Dubai. Rumors spreading they both are dating each other.
  Tuesday, January 10, 2023, 9:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X