»   » 'ಜಿದ್' ಟ್ರೇಲರ್ ರಿಲೀಸ್, ವಯಸ್ಕರಿಗೆ ಮಾತ್ರ!

'ಜಿದ್' ಟ್ರೇಲರ್ ರಿಲೀಸ್, ವಯಸ್ಕರಿಗೆ ಮಾತ್ರ!

Posted By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ಬಣ್ಣದ ಜಗತ್ತು ಸದಾ ಈ ರೀತಿಯ ಹೊಸ ಹೊಸ ಪ್ರಯೋಗಳನ್ನು ಮಾಡುತ್ತಲೇ ಬರುತ್ತಿದೆ. ಇದೀಗ 'ಜಿದ್' ಚಿತ್ರವೂ ಅದೇ ರೀತಿ ಸದ್ದು ಮಾಡುತ್ತಿರುವ ಚಿತ್ರ. ತನ್ನ ವಿಭಿನ್ನ ಪೋಸ್ಟರ್ ಗಳು, ಪ್ರ‌ಚಾರದಿಂದ ಎಲ್ಲರ ಗಮನಸೆಳೆಯುತ್ತಿದೆ ಈ ಚಿತ್ರ.

ಇದೀಗ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ತನ್ನ ಮೊದಲ ಚಿತ್ರದಲ್ಲೇ ಬೋಲ್ಡ್ ಅಭಿನಯ ನೀಡಿ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದಿದ್ದಾರೆ ನಟಿ ಮನ್ನಾರ ಯಾನೆ ಬಾರ್ಬಿ ಹಂಡಾ. ಚಿತ್ರವೊಂದರ ಟ್ರೇಲರ್ ಕೇವಲ ಸಿನಿ ಅಭಿಮಾನಿಗಳನ್ನಷ್ಟೇ ಅಲ್ಲದೆ ಚಿತ್ರೋದ್ಯಮ ಮಾರುಕಟ್ಟೆ ದೃಷ್ಟಿಯನ್ನು ಸೆಳೆಯುವುದೂ ಆಗಿದೆ. [ಬಾಲಿವುಡ್ ಗೆ ಅಡಿಯಿಟ್ಟ ಮತ್ತೊಬ್ಬ ನಗ್ನ ಸುಂದರಿ]


ಈ ಚಿತ್ರದ ಮೂಲಕ ಪ್ರಿಯಾಂಕಾ ಚೋಪ್ರಾ ಸೋದರ ಸಂಬಂಧಿ ಬಾರ್ಬಿ ಹಂಡಾ ನಾಯಕಿಯಾಗಿ ಬಾಲಿವುಡ್ ಗೆ ಪರಿಚಯವಾಗುತ್ತಿದ್ದಾರೆ. ಪೋಸ್ಟರ್ ನಲ್ಲಿ ತುಟಿಗೆ ತುಟಿ ಬೆರೆಸಿರುವ ದೃಶ್ಯ ಪಡ್ಡೆಗಳನ್ನು ಕೆಣಕುತ್ತಿದೆ.
Zid trailer

ಚಿತ್ರದಲ್ಲಿ ತಾನು ನಗ್ನವಾಗಿ ಅಭಿನಯಿಸುತ್ತಿರುವ ಬಗ್ಗೆ ಮನ್ನಾರ ಸಮರ್ಥಿಸಿಕೊಂಡಿದ್ದಾರೆ. ನಾವೀಗ 2014ರಲ್ಲಿದ್ದೇವೆ. ಗರತಿ ಗೌರಮ್ಮನ ತರಹ ಅಭಿನಯಿಸಲಾರೆ. ನನ್ನ ದೇಹ ಸಖತ್ ಹಾಟ್ ಅಂಡ್ ಸೆಕ್ಸಿಯಾಗಿದೆ. ಅವಶ್ಯಕತೆಗೆ ಅನುಗುಣವಾಗಿ ಅಂದವನ್ನು ಪ್ರದರ್ಶಿಸುವುದರಲ್ಲಿ ತಪ್ಪೇನು ಇಲ್ಲ ಎನ್ನುವ ಈ ಬೆಡಗಿ, ನಗ್ನ ಸನ್ನಿವೇಶಗಳಲ್ಲಿ ನಟಿಸಲು ಅಕ್ಕ ಪ್ರಿಯಾಂಕಾ ಚೋಪ್ರಾ ಅನುಮತಿ ಇದೆ ಎಂದಿದ್ದಾರೆ.

ನ್ಯೂಡ್ ಫೊಟೋಶೂಟ್ ಗೆ ಹೊರಡುವ ಮುನ್ನ ಅಕ್ಕನ ಅನುಮತಿ ಕೇಳಿದ್ದೆ. ಆಗ ಆಕೆ ಶೂಟಿಂಗ್ ಗಾಗಿ ಬಾರ್ಸಿಲೋನಾದಲ್ಲಿದ್ದರು. ಅಲ್ಲಿಂದಲೇ ನನಗೆ ಉತ್ತೇಜನ ನೀಡಿದರು. ಆದರೆ ಅಶ್ಲೀಲವಾಗಿ ಅಲ್ಲದೆ ಕಲಾತ್ಮಕ ಚೌಕಟ್ಟಿನಲ್ಲಿ ಇರುವಂತೆ ನೋಡಿಕೊಳ್ಳಲು ಸಲಹೆ ನೀಡಿದ್ದರು ಎನ್ನುತ್ತಾರೆ ಮನ್ನಾರ.

English summary
Trailer of Zid starring Barbie Handa, Karanveer Sharma and Shraddha Das is out. Priyanka Chopra's first cousin Barbie Handa who was rechristened as Mannara has gone very bold for this film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada