»   » ದೇಶಪ್ರೇಮ ಮೆರೆವ ಟಾಪ್ 10 ಚಿತ್ರಗಳು

ದೇಶಪ್ರೇಮ ಮೆರೆವ ಟಾಪ್ 10 ಚಿತ್ರಗಳು

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಆಗಸ್ಟ್ 15 ಬಂದರೆ ಸಾಕು ಶಾಲಾ ಮಕ್ಕಳಂತೆ ಚಿತ್ರರಂಗದ ಕೆಲವು ಗಣ್ಯರು ಕೂಡಾ ಸಂಭ್ರಮದಿಂದ ಆಚರಣೆಗಿಳಿಯುತ್ತಾರೆ. ದೇಶ ಪ್ರೇಮದ ಚಿತ್ರಗಳನ್ನೇ ನೀಡಿದ ಮನೋಜ್ ಕುಮಾರ್, ಪ್ರತಿ ಚಿತ್ರದಲ್ಲೂ ದೇಶ ಪ್ರೇಮ, ಸದ್ಭಾವನೆಯ ಸಣ್ಣ ಎಳೆಯನ್ನು ನೀಡುವ ಜೆಪಿ ದತ್ತಾ, ಪ್ರಕಾಶ್ ಝಾ, ಮಣಿರತ್ನಂ ರಂಥ ನಿರ್ದೇಶಕರ ಜತೆಗೆ ಎ.ಆರ್ ರೆಹಮಾನ್, ಇಳೆಯರಾಜರಂಥ ಸಂಗೀತ ಮಾಂತ್ರಿಕರು ಚಿತ್ರಗಳಲ್ಲಿ ದೇಶಪ್ರೇಮದ ರಾಗ ರಂಗು ಮೂಡಿಸಿದ್ದಾರೆ.

ವಿಶ್ವದಲ್ಲೇ ಅತಿ ಹೆಚ್ಚು ಚಿತ್ರಗಳನ್ನು ಉತ್ಪತ್ತಿ ಮಾಡುವ ಭಾರತೀಯ ಚಿತ್ರರಂಗದಲ್ಲಿ ಹಿಂದಿ ಚಿತ್ರ ಅತಿದೊಡ್ಡ ಮಾರುಕಟ್ಟೆ ಹೊಂದಿದೆ. ಚಲನಚಿತ್ರ ಹೀರೋಗಳನ್ನು ದೇಶದ ಮಹಾನ್ ನಾಯಕರು, ರೋಲ್ ಮಾಡೆಲ್ ಗಳಂತೆ ಅಭಿಮಾನಿಗಳು ಪೂಜಿಸುತ್ತಾರೆ.

ಸ್ವಾತಂತ್ರ್ಯ ಸಂಗ್ರಾಮ ಕುರಿತ ಐತಿಹಾಸಿಕ ಚಿತ್ರಗಳು, ಸ್ಥಳೀಯ ಹೋರಾಟಗಾರರ ಬಗ್ಗೆ ಬಂದ ಚಿತ್ರಗಳು ಸೋತಿದ್ದು ಕಡಿಮೆ, ಇತ್ತೀಚೆಗೆ ಸೀಮಿತ ಮಾರುಕಟ್ಟೆ ಹೊಂದಿರುವ ಕನ್ನಡ ಚಿತ್ರರಂಗದಲ್ಲೂ ಭಾರಿ ಬಜೆಟ್ ನಲ್ಲಿ ಕಮರ್ಷಿಯಲ್ ರಂಗದಲ್ಲಿ ಯಶಸ್ವಿ ನಾಯಕರಾಗಿದ್ದ ದರ್ಶನ್ ತೂಗುದೀಪ ಅವರನ್ನು ಮುಂದಿಟ್ಟುಕೊಂಡು ಸಂಗೊಳ್ಳಿ ರಾಯಣ್ಣ ಚಿತ್ರ ನಿರ್ಮಿಸಿ ಗೆಲುವು ಸಾಧಿಸಲಾಗಿದೆ.

ಹಿಂದಿಯಲ್ಲಿ ಲಗಾನ್, ಬಾರ್ಡರ್, ಕಾರ್ಗಿಲ್, ರಂಗ್ ದೇ ಬಸಂತಿ, ಹಮ್ ಹಿಂದೂಸ್ತಾನಿ, ರೋಜಾ ಸೇರಿದಂತೆ ಹಲವು ಚಿತ್ರಗಳು ಬಾಕ್ಸಾಫೀಸ್ ನಲ್ಲೂ ಸದ್ದು ಮಾಡಿವೆ. ಶಾರುಖ್ ಖಾನ್, ಅಜಯ್ ದೇವಗನ್, ಅಮೀರ್ ಖಾನ್, ಸನ್ನಿ ಡಿಯೋಲ್, ಹೃತಿಕ್ ರೋಷನ್ ಮುಂತಾದವರು ಐತಿಹಾಸಿಕ ಹಾಗೂ ದೇಶಪ್ರೇಮದ ಥೀಮ್ ಇರುವ ಚಿತ್ರಗಳಲ್ಲಿ ನಟಿಸಿ ಗೆದ್ದಿದ್ದಾರೆ.

ಚಿತ್ರಗಳ ಮೂಲಕ ಕೂಡಾ ದೇಶ ಪ್ರೇಮ ಉಕ್ಕಿಸಬಹುದು ಎಂದು ತೋರಿಸಿಕೊಟ್ಟ ಸರ್ವಕಾಲಿಕ 10 ಶ್ರೇಷ್ಠ ಹಿಂದಿ ಚಿತ್ರಗಳನ್ನು ಇಲ್ಲಿ ಆಯ್ದು ನೀಡಲಾಗಿದೆ.. ನಿಮ್ಮ ಆಯ್ಕೆಯನ್ನು ತಿಳಿಸಿ....

ಬಾರ್ಡರ್

1971ರ ಭಾರತ-ಪಾಕಿಸ್ತಾನ ಯುದ್ಧದ ಸುತ್ತ ಹೆಣೆಯಲಾದ ಕಥೆ ಹೊಂದಿರುವ ಬಾರ್ಡರ್ ಚಿತ್ರ ಬಹು ಸ್ಟಾರ್ ತಾರಾಗಣ ಹಾಗೂ ಸುಶ್ರಾವ್ಯ ಸಂಗೀತಭರಿತವಾಗಿ ಯಶಸ್ವಿಯಾಗಿದೆ.

ಕ್ರಾಂತಿ

ಬ್ರಿಟಿಷ್ ದಬ್ಬಾಳಿಕೆ ವಿರುದ್ಧ ಭಾರತದ ಸೆಣೆಸಾಟ 1825 ರಿಂದ 1875ರ ತನಕ ಭಾರತದ ಪರಿಸ್ಥಿತಿಯನ್ನು ಎತ್ತಿ ತೋರಿಸಿದ ಮನೋಜ್ ಕುಮಾರ್ ಅವರು ನೀಡಿದ ಚಿತ್ರ

ಗದಾರ್

ಪಾಕಿಸ್ತಾನದಲ್ಲಿರುವ ತನ್ನ ಪಾಕಿಸ್ತಾನಿ ಪತ್ನಿ(ಅಮೀಷಾ ಪಟೇಲ್ ) ಯನ್ನು ಕರೆತರಲು ಭಾರತೀಯ(ಸನ್ನಿ ಡಿಯೋಲ್) ನೊಬ್ಬನು ಪಡುವ ಪಾಡು ಇಲ್ಲಿ ಭಾವನಾತ್ಮಕವಾಗಿ ಚಿತ್ರಿತವಾಗಿದೆ.

ದಿ ಲೆಜೆಂಡ್ ಆಫ್ ಭಗತ್ ಸಿಂಗ್

ಅಜಯ್ ದೇವಗನ್ ಅಭಿನಯಿಸಿದ ಶ್ರೇಷ್ಠ ಚಿತ್ರ. ಭಗತ್ ಸಿಂಗ್ ಪಾತ್ರಧಾರಿ ಅಜಯ್ ಗೆ ರಾಷ್ಟ್ರಪ್ರಶಸ್ತಿ ತಂದು ಕೊಟ್ಟ ಚಿತ್ರ

ಲಗಾನ್

ಬ್ರಿಟಿಷರು ಆಡುತ್ತಿದ್ದ ಕ್ರಿಕೆಟ್ ಆಟದ ಮೂಲಕವೇ ಅವರನ್ನು ಸೋಲಿಸಿ ಸುಂಕ ತಪ್ಪಿಸಲು ಹಳ್ಳಿ ಹೈದ ಭುವನ್ ಹಾಗೂ ಅವನ ತಂಡ ಪಂದ್ಯ ಕಟ್ಟುವ ಕಥೆ ಇಲ್ಲಿದೆ. ಅಂತಿಮವಾಗಿ ಆಟದಲ್ಲಿ ಭಾರತ ತಂಡಕ್ಕೆ ಜಯ ಸಿಗುತ್ತದೆ.

ಲಕ್ಷ್ಯ

ಹೃತಿಕ್ ರೋಷನ್ ಹಾಗೂ ಪ್ರೀತಿ ಜಿಂಟಾ ಅಭಿನಯದ ಈ ಚಿತ್ರ ಕಾರ್ಗಿಲ್ ಬಳಿಯ ದೊಡ್ಡ ಪರ್ವತ ಹತ್ತುವ ನಾಯಕ ಜೀವನದಲ್ಲಿ ತನ್ನ ಗುರಿಯನ್ನು ಕಂಡುಕೊಳ್ಳುವ ಜತೆಗೆ ದೇಶಕ್ಕಾಗಿ ಹೋರಾಟಕ್ಕೆ ಮುಂದಾಗುವ ಕಥೆ ಹೊಂದಿದೆ.

ಶಹೀದ್

ವೀರ ಯೋಧ ಭಗತ್ ಸಿಂಗ್ ಅವರ ಹೋರಾಟದ ಬದುಕಿನ ಬಗ್ಗೆ ಬಂದ ಉತ್ತಮ ಚಿತ್ರಗಳಲ್ಲಿ ಇದು ಕೂಡಾ ಒಂದು

ಸ್ವದೇಶ್

ದೇಶದ ಯುವ ಜನಾಂಗಕ್ಕೆ ಸ್ಪೂರ್ತಿ ತುಂಬುವ ಪರ ದೇಶಕ್ಕೆ ಪಲಾಯನ ಮಾಡುವ ವಿದ್ಯಾವಂತರಲ್ಲಿ ದೇಶದ ಬಗ್ಗೆ ಅಭಿಮಾನ ಮೂಡಿಸುವ ಚಿತ್ರ. ಶಾರುಖ್ ಖಾನ್ ಇದರಲ್ಲಿ ನಾಸಾ ವಿಜ್ಞಾನಿಯಾಗಿ ಕಾಣಿಸಿಕೊಂಡಿದ್ದು ತನ್ನೂರಿಗೆ ಬಂದು ಹೊಸ ಕ್ರಾಂತಿ ಹುಟ್ಟುಹಾಕುತ್ತಾನೆ.

ಮಂಗಲ್ ಪಾಂಡೆ

ಸ್ವಾತಂತ್ರ್ಯ ಹೋರಾಟಗಾರ ಮಂಗಲ್ ಪಾಂಡೆ ಜೀವನ ಕುರಿತ ಚಿತ್ರದಲ್ಲಿ ಅಮೀರ್ ಖಾನ್ ಅವರು ಮಂಗಲ್ ಪಾಂಡೆ ಪಾತ್ರ ನಿರ್ವಹಿಸಿದ್ದರು.

ರಂಗ್ ದೇ ಬಸಂತಿ

ಇಂದಿನ ಯುವ ಪೀಳಿಗೆ ಭಾರತದ ಹಿಂದಿನ ಇತಿಹಾಸದತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರ, ಆಮೀರ್ ಖಾನ್, ಸಿದ್ದಾರ್ಥ್, ಶರ್ಮಾನ್ ಜೋಶಿ, ಕುನಾಲ್ ಕಪೂರ್ ಪ್ರಮುಖ ಪಾತ್ರದಲ್ಲಿದ್ದರು.

English summary
Bollywood has many patriotic movies for the Indian Independence Day. See the top 10 best patriotic hindi movies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada