»   » ಐಡಿಯಾ ಫಿಲಂಫೇರ್ ನಲ್ಲಿ ಮಿಲ್ಕಾಗೆ ಹಾಲು ಸಕ್ಕರೆ

ಐಡಿಯಾ ಫಿಲಂಫೇರ್ ನಲ್ಲಿ ಮಿಲ್ಕಾಗೆ ಹಾಲು ಸಕ್ಕರೆ

Posted By:
Subscribe to Filmibeat Kannada

ಹಾರುವ ಸಿಖ್ ಎಂದೇ ಖ್ಯಾತಿ ಗಳಿಸಿರುವ ಜೀವಂತ ದಂತಕಥೆ ಮಿಲ್ಕಾ ಸಿಂಗ್ ಅವರ ಜೀವನ ಓಟದ ಕಥೆ ಬಿಚ್ಚಿಡುವ 'ಭಾಗ್ ಮಿಲ್ಕಾ ಭಾಗ್' ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಗೊತ್ತೇ ಇದೆ. ಈಗ ಈ ಚಿತ್ರ 59ನೇ ಫಿಲಂಫೇರ್ ಪ್ರಶಸ್ತಿಯಲ್ಲೂ ಹಲವಾರು ಪ್ರಶಸ್ತಿಗಲನ್ನು ಬಾಚಿಕೊಂಡಿದೆ.

ಒಟ್ಟು ಆರು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಭಾಗ್ ಮಿಲ್ಕಾ ಭಾಗ್ ಚಿತ್ರ ಗೆದ್ದಿರುವುದು ವಿಶೇಷ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಹಾಗೂ ಅತ್ಯುತ್ತಮ ನಟ (ಫರ್ಹಾನ್ ಅಖ್ತರ್) ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದರ ಜೊತೆಗೆ ಅತ್ಯುತ್ತಮ ವಸ್ತ್ರಾಲಂಕಾರ ಹಾಗೂ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿಗಳೂ ಮಿಲ್ಕಾ ಪಾಲಾಗಿವೆ. [ಭಾಗ್ ಮಿಲ್ಕಾ ಭಾಗ್ ಚಿತ್ರವಿಮರ್ಶೆ]

ಒಂಭತ್ತು ವಿಭಾಗಗಳಲ್ಲಿ ನಾಮಿನೇಟ್ ಆಗಿದ್ದ ಹೇ ಜವಾನಿ ಹೈ ದಿವಾನಿ ಚಿತ್ರಕ್ಕೆ ಒಂದೇ ಒಂದು ಪ್ರಶಸ್ತಿಯೂ ಬರದೆ ಇರುವುದು ರಣಬೀರ್ ಕಪೂರ್ ಅಭಿಮಾನಿಗಳನ್ನು ನಿರಾಸೆಪಡಿಸಿದೆ. ಆದರೆ 'ಗೋಲಿಯೋಂಕಿ ರಾಸ್ ಲೀಲಾ ರಾಮ್ ಲೀಲಾ' ಚಿತ್ರದಲ್ಲಿ ಅಭಿನಯಕ್ಕಾಗಿ ದೀಪಿಕಾ ಪಡುಕೋಣೆ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದಕ್ಕಿದೆ.

ಸುಪ್ರಿಯಾ ಪಾಠಕ್ ಅತ್ಯುತ್ತಮ ಪೋಷಕ ನಟಿ

'ರಾಮ್ ಲೀಲಾ' ಚಿತ್ರದಲ್ಲಿ ದೀಪಿಕಾ ಅವರ ತಾಯಿ ಪಾತ್ರವನ್ನು ಪೋಷಿಸಿದ್ದ ಸುಪ್ರಿಯಾ ಪಾಠಕ್ ಕಪೂರ್ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಪಾರ ಮನ್ನಣೆಗೆ ಪಾತ್ರವಾಗಿದ್ದ 'ದಿ ಲಂಚ್ ಬಾಕ್ಸ್' ಚಿತ್ರ ಮೂರು ಪ್ರಶಸ್ತಿಗಳನ್ನು ಪಡೆದಿದೆ.

ದಿ ಲಂಚ್ ಬಾಕ್ಸ್ ಚಿತ್ರಕ್ಕೆ ಮೂರು ಪ್ರಶಸ್ತಿಗಳು

ಇರ್ಫಾನ್ ಖಾನ್ ಅಭಿನಯದ 'ಲಂಚ್ ಬಾಕ್ಸ್' ಚಿತ್ರಕ್ಕೆ ಅತ್ಯುತ್ತಮ ಚೊಚ್ಚಲ ನಿರ್ದೇಶಕ (ರಿತೇಶ್ ಬಾತ್ರಾ), ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ಪೋಷಕ ನಟ (ನವಾಜುದ್ದೀನ್ ಸಿದ್ಧಿಕಿ) ಪ್ರಶಸ್ತಿಗಳನ್ನು ಪಡೆದಿದೆ.

ಸಂಗೀತ ವಿಭಾಗದಲ್ಲಿ ಗಮನಸೆಳೆದ ಆಶಿಕಿ 2

ಎಲ್ಲರ ನಿರೀಕ್ಷೆಯಂತೆ 'ಆಶಿಕಿ 2' ಚಿತ್ರ ಸಂಗೀತ ವಿಭಾಗದಲ್ಲಿ ಹಿಡಿತ ಸಾಧಿಸಿದೆ. ಭಾರತೀಯ ಚಲನಚಿತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಹಿರಿಯ ಅಭಿನೇತ್ರಿ ತನುಜಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ರಣಬೀರ್ ಕಪೂರ್, ಪ್ರಿಯಾಂಕಾ ಚೋಪ್ರಾ ನಿರೂಪಣೆ

ರಣಬೀರ್ ಕಪೂರ್ ಹಾಗೂ ಪ್ರಿಯಾಂಕಾ ಚೋಪ್ರಾ ಅವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಹಲವಾರು ತಾರೆಗಳು ಹೆಜ್ಜೆ ಹಾಕಿದ್ದಾರೆ. ಈ ವರ್ಣರಂಜಿತ ಕಾರ್ಯಕ್ರಮಕ್ಕೆ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ರೇಖಾ, ಸೋಹಾ ಅಲಿ ಖಾನ್ ಸೇರಿದಂತೆ ಬಹುತೇಕ ಕಲಾವಿದರು ಇನ್ನಷ್ಟು ರಂಗು ತುಂಬಿದರು. ಇದೇ ಭಾನುವಾರ (ಜ.26) ರಾತ್ರಿ ಪ್ರಶಸ್ತಿ ಸಂಭ್ರಮವನ್ನು ಸೋನಿ ಎಂಟರ್ ಟೈನ್ ಮೆಂಟ್ ವಾಹಿನಿಯಲ್ಲಿ ಕಣ್ತುಂಬಿಕೊಳ್ಳಬಹುದು.

ಅತ್ಯುತ್ತಮ ಚೊಚ್ಚಲ ನಟ ಧನುಷ್

ಈ ಬಾರಿ ದಕ್ಷಿಣದ ನಟ ಧನುಷ್ ಅವರಿಗೆ ಅತ್ಯುತ್ತಮ ಚೊಚ್ಚಲ ನಟ (ರಾನ್ ಜಾನಾ) ಪ್ರಶಸ್ತಿ ನೀಡಲಾಗಿದೆ. ಆರ್ ಡಿ ಬರ್ಮನ್ ಪ್ರಶಸ್ತಿಗೆ ಸಿದ್ಧಾರ್ಥ್ ಮಹದೇವನ್ ಪಾತ್ರರಾಗಿದ್ದಾರೆ. ಒಟ್ಟು 29 ವಿಭಾಗಗಳ ಪ್ರಶಸ್ತಿಯನ್ನು ಶುಕ್ರವಾರ (ಜ.24) ಘೋಷಿಸಲಾಯಿತು.

ಉಳಿದ ಪ್ರಶಸ್ತಿಗಳ ವಿವರಗಳು ಹೀಗಿವೆ

ಅತ್ಯುತ್ತಮ ಚೊಚ್ಚಲ ನಟಿ ವಾಣಿ ಕಪೂರ್ (ಶುದ್ಧ್ ದೇಸಿ ರೊಮ್ಯಾನ್ಸ್), ಅತ್ಯುತ್ತಮ ಸಂಗೀತ ಮಿಥೂನ್, ಅಂಕಿತ್ ತಿವಾರಿ, ಜೀತ್ ಗಂಗೂಲಿ (ಆಶಿಕಿ 2), ಅತ್ಯುತ್ತಮ ಹಿನ್ನೆಲೆ ಗಾಯಕ ಅಜಿತ್ ಸಿಂಗ್ (ಆಶಿಕಿ 2, ಹಾಡು ತುಂ ಹಿ ಹೋ), ಅತ್ಯುತ್ತಮ ಹಿನ್ನೆಲೆ ಗಾಯಕಿ ಮೋನಾಲಿ ಥಾಕುರ್ (ಲೋಟೇರಾ, ಹಾಡು ಸವಾರ್), ವಿಮರ್ಶಕರ ಅತ್ಯುತ್ತಮ ನಟ ರಾಜ್ ಕುಮಾರ್ ರಾವ್ (ಶಾಹಿದ್), ವಿಮರ್ಶಕರ ಅತ್ಯುತ್ತಮ ನಟಿ ಶಿಲ್ಪಾ ಶಿಕ್ಲ (ಬಿಎ ಪಾಸ್), ಅತ್ಯುತ್ತಮ ಸಂಕಲನ (ಡಿ-ಡೇ), ಅತ್ಯುತ್ತಮ ಛಾಯಾಗ್ರಹಣ ಕಮಲ್ ಜಿತ್ ನೆಗಿ (ಮದ್ರಾಸ್ ಕೆಫೆ).

English summary
Rakeysh Omprakash Mehra's sports biopic Bhaag Milkha Bhaag scored six wins at the 59th Filmfare Awards including best film, best director and best actor for Farhan Akhtar. The film based on the life of athlete Milkha Singh, won an award for lyricist Prasoon Joshi for penning hit inspirational number 'Zinda' and Dolly Ahluwalia for best costume.
Please Wait while comments are loading...