For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ಕಾಮಿಡಿಯನ್ ಭಾರತಿ ಸಿಂಗ್ ಮತ್ತು ಪತಿ ಹರ್ಷ್ ಲಿಂಬಾಚಿಯಾಗೆ ಜಾಮೀನು

  |

  ಕಿರುತೆರೆಯ ಖ್ಯಾತ ಕಾಮಿಡಿಯನ್ ಭಾರತಿ ಸಿಂಗ್ ಮತ್ತು ಪತಿ ಹರ್ಷ್ ಲಿಂಬಾಚಿಯಾಗೆ ಇಂದು ಸೋಮವಾರ (ನವೆಂಬರ್ 23) ಮುಂಬೈ ಕೋರ್ಟ್ ನಿಂದ ಜಾಮೀನು ಸಿಕ್ಕಿದೆ. ಡ್ರಗ್ಸ್ ಪ್ರಕರಣ ಸಂಬಂಧ ಇಬ್ಬರನ್ನು ಶನಿವಾರ ಎನ್ ಸಿ ಬಿ ಅಧಿಕಾರಿಗಳು ಬಂಧಿಸಿದ್ದರು. ಮುಂಬೈನಲ್ಲಿರುವ ಅವರ ಮನೆ ಮತ್ತು ಕಚೇರಿ ಮೇಲೆ ಎನ್ ಸಿ ಬಿ ಅಧಿಕಾರಿಗಳು ದಾಳಿ ಮಾಡಿದ್ದ ಸಂದರ್ಭದಲ್ಲಿ ಗಾಂಜಾ ಪತ್ತೆಯಾಗಿತ್ತು.

  ಮನೆಯಲ್ಲಿ ಮಾದಕ ವಸ್ತು ಪತ್ತೆಯಾದ ಹಿನ್ನಲೆ ಭಾರತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ ಅವರನ್ನು ಬಂಧಿಸಿ ಸುಮಾರು 15 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಮಾದಕ ವಸ್ತು ಸೇವಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ...

  ಕಮಿಡಿಯನ್ ಭಾರತಿ ಸಿಂಗ್ ಮನೆ ಮೇಲೆ ಎನ್‌ಸಿಬಿ ದಾಳಿ

  ಮತ್ತಷ್ಟು ಜನರ ವಿಚಾರಣೆ ಸಾಧ್ಯತೆ

  ಮತ್ತಷ್ಟು ಜನರ ವಿಚಾರಣೆ ಸಾಧ್ಯತೆ

  ಎನ್ ಸಿ ಬಿ ವಿಚಾರಣೆಯಿಂದ ಭಾರತಿ ಸಿಂಗ್ ಮತ್ತು ಪತಿ ಹರ್ಷ್ ಬಾಲಿವುಡ್ ನ ಮತ್ತಷ್ಟು ಸೆಲೆಬ್ರಿಟಿಗಳ ಹೆಸರು ಹೊರ ಬರುವ ಸಾದ್ಯತೆ ಇದೆ. ಹಾಗಾಗಿ ಮತ್ತಷ್ಟು ಜನರಿಗೆ ಆತಂಕ ಶುರುವಾಗಿದೆ. ಭಾರತಿ ಸಿಂಗ್ ಹಿಂದಿಯಲ್ಲಿ ಜನಪ್ರಿಯ ಶೋಗಳನ್ನು ಹೋಸ್ಟ್ ಮಾಡುತ್ತಾರೆ. ದಿ ಕಪಿಲ್ ಶರ್ಮಾ ಶೋನಲ್ಲಿ ಕಾಮಿಡಿಯನ್ ಆಗಿ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದಾರೆ.

  ಜನಪ್ರಿಯ ಹಾಸ್ಯ ನಟಿ ಭಾರತಿ ಸಿಂಗ್

  ಜನಪ್ರಿಯ ಹಾಸ್ಯ ನಟಿ ಭಾರತಿ ಸಿಂಗ್

  ಸರ್ಕಸ್ ಎನ್ನುವ ಕಾಮಿಡಿ ರಿಯಾಲಿಟಿ ಶೋ ಅನ್ನು ಹಲವು ವರ್ಷ ನಡೆಸಿಕೊಟ್ಟಿದ್ದರು. ಈ ಶೋ ಭಾರತಿ ಸಿಂಗ್ ಮತ್ತಷ್ಟು ಖ್ಯಾತಿ ತಂದುಕೊಟ್ಟಿದೆ. ಕಿರುತೆರೆಯಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ಭಾರತಿ ಸಿಂಗ್ ಸ್ಕ್ರಿಪ್ಟ್ ರೈಟರ್ ಹಾಗೂ ನಿರೂಪಕ ಹರ್ಷ್ ಲಿಂಬಾಚಿಯಾ ಅವರನ್ನು ಮದುವೆಯಾಗಿದ್ದಾರೆ. ಕಿರುತೆರೆ ಜೊತೆಗೆ ಭಾರತಿ ಸಿಂಗ್ ಸಿನಿಮಾದಲ್ಲೂ ನಟಿಸಿದ್ದಾರೆ.

  ಘಟಾನುಘಟಿಗಳ ವಿಚಾರಣೆ

  ಘಟಾನುಘಟಿಗಳ ವಿಚಾರಣೆ

  ಸುಶಾಂತ್ ಸಿಂಗ್ ಸಾವಿನ ತನಿಖೆ ವೇಳೆ ಬಾಲಿವುಡ್‌ನ ಡ್ರಗ್ಸ್ ಕರ್ಮಕಾಂಡ ಹೊರಬಿದ್ದಿದ್ದು, ಎನ್‌ಸಿಬಿ ಈ ವರೆಗೆ ಹಲವರನ್ನು ಬಂಧಿಸಿದ್ದು, ಖ್ಯಾತ ನಟ-ನಟಿಯರನ್ನು ವಿಚಾರಣೆಗೆ ಒಳಪಡಿಸಿದೆ. ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಅನೇಕರನ್ನು ವಿಚಾರಣೆಗೆ ಒಳಪಡಿಸಿದೆ.

  Rajinikanth ಅಭಿಮಾನಿಗಳಿಗೆ ಆತಂಕ | Filmibeat Kannada
  ಅರ್ಜುನ್ ರಾಂಪಲ್ ವಿಚಾರಣೆ

  ಅರ್ಜುನ್ ರಾಂಪಲ್ ವಿಚಾರಣೆ

  ಕೆಲವು ದಿನಗಳ ಹಿಂದಷ್ಟೆ ನಟ ಅರ್ಜುನ್ ರಾಮ್‌ಪಾಲ್ ಹಾಗೂ ನಿರ್ಮಾಪಕ ಫಿರೋಜ್ ನಾಡಿಯಾವಾಲಾ ಮನೆಯ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅರ್ಜುನ್ ರಾಮ್‌ಪಾಲ್ ಗೆಳತಿಯ ಸಹೋದರನನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

  English summary
  Comedian Bharti Singh and husband Haarsh Limbachiyaa granted bail from by a Mumbai court.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X