For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್‌ 2' Vs 'ಭೂಲ್ ಭುಲಯ್ಯ 2' 6ನೇ ದಿನದ ಕಲೆಕ್ಷನ್ ಎಷ್ಟು?

  |

  ದಕ್ಷಿಣ ಭಾರತದ ಸಿನಿಮಾಗಳ ಆರ್ಭಟದಿಂದ ಕಂಗಲಾಗಿದ್ದ ಬಾಲಿವುಡ್‌ಗೆ ಈಗ ಹೊಸ ಚೈತನ್ಯ ಸಿಕ್ಕಿದ್ದು, 'ಭೂಲ್ ಭುಲಯ್ಯ 2' ಚಿತ್ರ ಭರ್ಜರಿ ಕಲೆಕ್ಷನ್ ಮಾಡಿಕೊಳ್ಳುವ ಮೂಲಕ ಮುನ್ನಗ್ಗುತ್ತಿರುವುದು ಬೇರೆ ಬಾಲಿವುಡ್ ಸಿನಿಮಾಗಳ ರಿಲೀಸ್‌ಗೆ ಸ್ಟ್ಯಾಂಡರ್ಡ್ ಕ್ರಿಯೇಟ್ ಮಾಡಿಕೊಡುತ್ತಿದೆ.

  ಮೇ 20 ರಿಂದ ರಿಲೀಸ್ ಆದ ಸಿನಿಮಾ ವೀಕೆಂಡ್‌ನಲ್ಲಿ ಭರ್ಜರಿಯಾಗಿಯೇ ಗಳಿಕೆ ಮಾಡಿಕೊಂಡಿತ್ತು. ಇದಾದ ಬಳಿಕ ವಾರದ ದಿನಗಳಲ್ಲಿ ಸಿನಿಮಾ ಇದೇ ರೀತಿ ಮುಂದೆ ಹೋಗುತ್ತಾ ಅಂತ ಹಲವು ಅನುಮಾನಗಳು ಮೂಡಿದ್ದವು. ಸದ್ಯ ಈಗ ಅದೆಲ್ಲಾವನ್ನೂ ದಾಟಿ 'ಭೂಲ್ ಭುಲಯ್ಯ 2' ಚಿತ್ರ ವೀಕ್‌ ಡೇಸ್‌ನಲ್ಲೂ ಭರ್ಜರಿ ಪ್ರದರ್ಶನವಾಗುತ್ತಿದೆ.

  Recommended Video

  'ಕೆಜಿಎಫ್‌2' ಕಲೆಕ್ಷನ್ ಮೀರಿಸುತ್ತಾ 'ಭೂಲ್ ಭುಲಯ್ಯ 2'? | Bhool Bhulaiyaa 2

  'ಭೂಲ್ ಭುಲಯ್ಯ 2' ಚಿತ್ರದ ಸಕ್ಸಸ್ ಕಾರ್ತಿಕ್ ಆರ್ಯನ್‌ಗೆ ಒಳ್ಳೆಯ ಇಮೇಜ್ ತಂದು ಕೊಟ್ಟಿದ್ದು, ತಮ್ಮ ಸಿನಿಮಾ ಕೆರಿಯರ್‌ನಲ್ಲಿ ಈ ಸಿನಿಮಾ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿದೆ. ಸಿನಿಮಾ ರಿಲೀಸ್‌ ಆಗಿ 6ನೇ ದಿನವೂ ಥಿಯೇಟರ್‌ನಲ್ಲಿ ಉತ್ತಮ ಪ್ರದರ್ಶನಗೊಳ್ಳುತ್ತಿದ್ದು, ಪ್ರೇಕ್ಷಕರಿಗೆ ಉತ್ತಮ ಸ್ಪಂದನೆ ಸಿಕ್ಕಿದೆ.

   ನಿಲ್ಲದ 'ಭೂಲ್ ಭುಲಯ್ಯ 2' ಕಲೆಕ್ಷನ್

  ನಿಲ್ಲದ 'ಭೂಲ್ ಭುಲಯ್ಯ 2' ಕಲೆಕ್ಷನ್

  ಮೇ 20 ರಂದು ರಿಲೀಸ್ ಆಗಿದ್ದ 'ಭೂಲ್ ಭುಲಯ್ಯ 2' ಚಿತ್ರ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸಖತ್ ಥ್ರಿಲ್ ಆಗಿದ್ದಾರೆ. ಹೀಗಾಗಿ ಸಿನಿಮಾ ವಾರದ ದಿನಗಳಲ್ಲೂ ಭರ್ಜರಿಯಾಗಿ ಪ್ರದರ್ಶನವಾಗುತ್ತಿದೆ. ಸೋಮವಾರ ₹10.75 ಕೋಟಿ ರೂ ಕಲೆಕ್ಷನ್, ಮಂಗಳವಾರ ₹9.65 ಕೋಟಿ, ಬುಧವಾರ ₹8.51 ಕೋಟಿ ಗಳಿಕೆ ಮಾಡಿಕೊಂಡಿದ್ದು, ಒಟ್ಟಾರೆ ₹84.78 ಕೋಟಿ ಗಲ್ಲಾಪೆಟ್ಟಿಗೆಯನ್ನು ತುಂಬಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

   ಈ ವಾರಾಂತ್ಯದಲ್ಲಿ ₹100 ಕೋಟಿ ಗ್ಯಾರಂಟಿ

  ಈ ವಾರಾಂತ್ಯದಲ್ಲಿ ₹100 ಕೋಟಿ ಗ್ಯಾರಂಟಿ

  ಹಾರರ್ ಅಂಡ್ ಕಾಮಿಡಿ ಟಚ್ ಇರುವ ಸಿನಿಮಾಗೆ ಪ್ರೇಕ್ಷಕರು ಫುಲ್ ಮಾರ್ಕ್ ಕೊಟ್ಟಿದ್ದಾರೆ. ಹೀಗಾಗಿ ಸಿನಿಮಾ ರಿಲೀಸ್ ಆದಗಿನಿಂದ ಈವರೆಗೂ ಭರ್ಜರಿಯಾಗಿ ಪ್ರದರ್ಶಗೊಳ್ಳುತ್ತಿದೆ. 2022 ರಲ್ಲಿ ತೆರೆ ಕಂಡ ಚಿತ್ರಗಳಲ್ಲಿ ಆರನೇ ದಿನದಲ್ಲೇ ಅತಿ ಹೆಚ್ಚು ಗಳಿಸಿದ ಸಿನಿಮಾ ಪಟ್ಟಿಯಲ್ಲಿ 'ಭೂಲ್ ಭುಲಯ್ಯ 2' ಚಿತ್ರ ಎರಡನೇ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಈಗಾಗಲೇ ₹84.78 ಕೋಟಿ ಗಳಿಕೆ ಮಾಡಿರುವ ಚಿತ್ರ ಈ ವಾರಾಂತ್ಯದಲ್ಲಿ ₹100 ಕೋಟಿ ದಾಟಬಹುದು ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಒಂದು ವಾರದ ಅವಧಿಯಲ್ಲೇ ಕಾರ್ತಿಕ್ ಆರ್ಯನ್ ಸಿನಿಮಾ ₹100 ಕೋಟಿ ದಾಟಿದರೆ ಬಾಲಿವುಡ್‌ ಚಿತ್ರೋದ್ಯಮದಲ್ಲಿ ಹೊಸ ದಾಖಲೆ ಸೃಷ್ಟಿಯಾಗಲಿದೆ.

   ಈ ವರ್ಷ ಹೆಚ್ಚು ಸದ್ದು ಮಾಡಲಿಲ್ಲ ಬಾಲಿವುಡ್ ಚಿತ್ರಗಳು

  ಈ ವರ್ಷ ಹೆಚ್ಚು ಸದ್ದು ಮಾಡಲಿಲ್ಲ ಬಾಲಿವುಡ್ ಚಿತ್ರಗಳು

  ಕೊರೊನಾ ಬಳಿಕ ಚೇತರಿಕೆ ಕಂಡಿದ್ದ ಬಾಲಿವುಡ್ ಚಿತ್ರೋದ್ಯಮ ಈ ವರ್ಷದ ಆರಂಭದಲ್ಲಿ ಹಲವು ಸಿನಿಮಾಗಳನ್ನು ತೆರೆ ಮೇಲೆ ತಂದಿತು. ಆದರೆ, ಬಂದ ಸಿನಿಮಾಗಳಲ್ಲಿ ಬೆರಳಣಿಕೆಯಷ್ಟು ಸಿನಿಮಾಗಳು ಮಾತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದವು. ಅದರಲ್ಲಿ ಮೊದಲನೇಯದಾಗಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ 'ದಿ ಕಾಶ್ಮೀರ್ ಫೈಲ್ಸ್', ಇದಾದ ಬಳಿಕ 'ಗಂಗೂಬಾಯಿ ಕಾಠಿಯಾವಾಡಿ' ಈಗ 'ಭೂಲ್ ಭುಲಯ್ಯ 2' ಚಿತ್ರ ಇವುಗಳು ಮಾತ್ರ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿಕೊಳ್ಳುವ ಮೂಲಕ ಸಕ್ಸಸ್ ಕಂಡವು ಉಳಿದಂತೆ 'ಹೀರೊಪಂತಿ 2', 'ರನ್‌ವೇ 34' ಸಿನಿಮಾಗಳು ದಕ್ಷಿಣ ಭಾರತದ ಸಿನಿಮಾಗಳ ಆರ್ಭಟಕ್ಕೆ ಮಕಾಡೆ ಮಲಗಿದ್ದವು. ಹೀಗಾಗಿ ಈ ವರ್ಷದಲ್ಲಿ ಬಾಲಿವುಡ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಅಷ್ಟು ಸೌಂಡ್ ಮಾಡಲಿಲ್ಲ.

   'ಕೆಜಿಎಫ್‌2' ಕಲೆಕ್ಷನ್ ಮೀರಿಸುತ್ತಾ 'ಭೂಲ್ ಭುಲಯ್ಯ 2'?

  'ಕೆಜಿಎಫ್‌2' ಕಲೆಕ್ಷನ್ ಮೀರಿಸುತ್ತಾ 'ಭೂಲ್ ಭುಲಯ್ಯ 2'?


  ಬಾಲಿವುಡ್ ಅಂಗಳದಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಹಬ್ಬ ಮಾಡಿದ್ದವು. 'ಕೆಜಿಎಫ್ 2', 'RRR' ಸಿನಿಮಾಗಳು ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. 'ಕೆಜಿಎಫ್‌ 2' ಹಿಂದಿಯಲ್ಲಿ ರಿಲೀಸ್ ಆದ 6 ದಿನಗಳಲ್ಲೇ ₹16.35 ಕೋಟಿ ಗಳಿಕೆ ಮಾಡಿಕೊಂಡಿತ್ತು. ಇತ್ತ 'RRR' ಕೂಡ ₹13 ಕೋಟಿ ಬಾಚಿಕೊಂಡಿತ್ತು. ಈಗ 'ಭೂಲ್ ಭುಲಯ್ಯ 2' ಬುಧವಾರ ₹8.51 ಕೋಟಿ ಗಳಿಕೆ ಮಾಡಿಕೊಂಡಿದೆ. ಹೀಗೆ ಕಲೆಕ್ಷನ್ ಮುಂದುವರೆದರೆ ವಾರಾಂತ್ಯದಲ್ಲಿ ₹100 ಕೋಟಿ ಗಳಿಕೆ ಗ್ಯಾರಂಟಿ ಎನ್ನಲಾಗುತ್ತಿದೆ. ಈ ಮೂಲಕ 'ಕೆಜಿಎಫ್‌ 2' ದಾಖಲೆಯನ್ನು 'ಭೂಲ್ ಭುಲಯ್ಯ 2' ಮುರಿಯುತ್ತಾ ಕಾದು ನೋಡಬೇಕಿದೆ

  English summary
  Bhool Bhuliyaa 2 Box Office Collection Day 6.
  Thursday, May 26, 2022, 17:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X