»   » ಜಾನ್ ಅಬ್ರಹಾಂ ವಿರುದ್ಧ ಬಿಪಾಶಾ ಬಸು ಪ್ರತೀಕಾರ

ಜಾನ್ ಅಬ್ರಹಾಂ ವಿರುದ್ಧ ಬಿಪಾಶಾ ಬಸು ಪ್ರತೀಕಾರ

Posted By:
Subscribe to Filmibeat Kannada

ಬಿಪಾಶಾ ಬಸು ಯಾವಾಗಲೂ ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಸುದ್ದಿಯಾದವರು. ಈ ಮೊದಲು ಜಾನ್ ಹಾಗೂ ಬಿಪಾಶಾ ಜೋಡಿಹಕ್ಕಿಯಂತೆ ಓಡಾಡುತ್ತಿದ್ದವರು. ಕೊನೆಗೊಮ್ಮೆ ಜೋಡಿ ಬೇರೆಯಾಯ್ತು. ಎಲ್ಲಾ ಬೇರೆಯಾದ ಜೋಡಿಗಳಂತೆ ಪರಸ್ಪರ ದೋಷಾರೋಪಣೆ ಮಾಡಿಕೊಂಡು ದೂರವಾದದ್ದೂ ಆಯ್ತು. ನಂತರ ಆಗಾಗ ಸ್ವಲ್ಪ ಸುದ್ದಿ ಮಾಡುತ್ತಿತ್ತು ಈ ಮಾಜಿ ಜೋಡಿ.

ಈ ಮೊದಲೊಮ್ಮೆ ತಮ್ಮ ಬೇರ್ಪಡುವಿಕೆಗೆ ಜಾನ್ ಅಬ್ರಹಾಂ ಮಾಡಿದ ಮೋಸವೇ ಕಾರಣ ಎಂದಿದ್ದರು ಬಿಪಾಶಾ. ಈಗ ಇನ್ನೂ ಬಹಳಷ್ಟು ಮುಂದಕ್ಕೆ ಹೋಗಿದ್ದಾರೆ ಬಿಪಾಶಾ. "ನನ್ನ ಅಮ್ಮನಿಗೆ ಯಾವತ್ತೂ ಕ್ರಿಸ್ಚಿಯನ್ ಬಾಯ್ ಫ್ರೆಂಡ್ (ಜಾನ್ ಅಬ್ರಹಾಂ) ಇಷ್ಟವಾಗಿರಲಿಲ್ಲ. ನಾನು ತುಂಬಾ 'ಲಕ್ಕಿ', ಏಕೆಂದರೆ ಕೆಟ್ಟ ಮನುಷ್ಯರು ಬೇಗ ನನ್ನ ಜೀವನದಿಂದ ಹೊರಹೋಗುತ್ತಾರೆ, ಒಳ್ಳೆಯವರು ಮಾತ್ರ ಉಳಿದುಕೊಳ್ಳುತ್ತಾರೆ" ಎಂದಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಿಪಾಶಾ "ನಾನು ನನ್ನ ಅಮ್ಮ ಹೇಳಿದಂತೆ ಕೇಳುವ ಮುದ್ದಿನ ಮಗಳು. ನನ್ನಮ್ಮನಿಗೆ ನನ್ನ ಮದುವೆಯಾಗುವ ಹುಡುಗ ಹಿಂದುವಾಗಿರಬೇಕು. ಒಳ್ಳೆಯ ಹುಡುಗನಾಗಿಬೇಕು. ಎತ್ತರವಾಗಿದ್ದು ಶ್ರೀಮಂತನಾಗಿರಬೇಕು. ನನ್ನ ಹಳೆಯ ಯಾವ ಬಾಯ್ ಫ್ರೆಂಡ್ ಗಳನ್ನೂ ನನ್ನಮ್ಮ ಇಷ್ಟಪಟ್ಟಿರಲಿಲ್ಲ.

ನನ್ನನ್ನು ಯಾರೂ ಮೋಸಗೊಳಿಸಲಾರರು, ಏಕೆಂದರೆ ನಾನು ಅಷ್ಟು ಒಳ್ಳೆಯ ಹುಡುಗಿ. ಆಶ್ಚರ್ಯವೆಂದರೆ, ಕೊನೆಗೂ ಅಮ್ಮನ ಇಷ್ಟದಂತೆ ಆಯ್ತು, ಕ್ರಿಸ್ಚಿಯನ್ ಬಾಯ್ ಫ್ರೆಂಡ್ ನನ್ನಿಂದ ದೂರವಾದರು. ಇದು ನನ್ನಮ್ಮನಿಗಷ್ಟೇ ಅಲ್ಲ, ನನಗೂ ತುಂಬಾ ಇಷ್ಟದ ಸಂಗತಿ. ಆದದ್ದೆಲ್ಲಾ ಒಳ್ಳೆಯದಕ್ಕೇ ಆಯ್ತು, ನಾನಂತೂ ಈಗ ಸಂಪೂರ್ಣ ಸಂತೋಷದ ಜೀವನ ಸಾಗಿಸುತ್ತಿದ್ದೇನೆ" ಎಂದಿದ್ದಾರೆ.

ಮುಂದುವರಿದ ಬಿಪಾಶಾ, "ಖಂಡಿತವಾಗಿಯೂ ಹೇಳುತ್ತೇನೆ, ನನ್ನ ಜೀವನದಲ್ಲಿ ಒಳ್ಳೆಯವರು ಮಾತ್ರ ಇರುತ್ತಾರೆ, ಕೆಟ್ಟವರು ಹೋಗುತ್ತಾರೆ. ನಾನು ಭಾರೀ ಲಕ್ಕಿ ಹುಡುಗಿ. ಆತನೊಂದಿಗೆ ಕಳೆದ ಆ ಕ್ಷಣ ನನ್ನ ಜೀವನದ ಅತ್ಯಂತ ಕೆಟ್ಟ ಘಳಿಗೆ. ಅದನ್ನು ಮರೆಯುವಂತೆ ನಾನು ನನ್ನ ಅಭಿಮಾನಿಗಳಿಗೂ ಈ ಮೂಲಕ ಹೇಳುತ್ತಿದ್ದೇನೆ. ಈಗ ನಾನು ಸಂತೋಷದಿಂದಿದ್ದೇನೆ, ಅದಕ್ಕೇ ವೃತ್ತಿಯಲ್ಲಿ ಮಿಂಚುತ್ತಿದ್ದೇನೆ" ಎಂದಿದ್ದಾರೆ. (ಏಜೆನ್ಸೀಸ್)

English summary
Bipasha Basu has taken a dig at John Abraham by saying that her mother never liked her Christian boyfriend and that boys today are the biggest losers.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada