»   » ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಿಪಾಶಾ ದಂಪತಿಗೆ ಫುಲ್ ಕ್ಲಾಸ್.!

ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಿಪಾಶಾ ದಂಪತಿಗೆ ಫುಲ್ ಕ್ಲಾಸ್.!

Posted By:
Subscribe to Filmibeat Kannada

ಬಾಲಿವುಡ್‌ ನಲ್ಲಿ 'ಮಂಕಿ ಕಪಲ್‌' ಎಂದೇ ಗುರುತಿಸಿಕೊಂಡಿರುವ ಬಿಪಾಶಾ ಬಸು ಹಾಗೂ ಪತಿ ಕರಣ್ ಸಿಂಗ್‌ ಗ್ರೋವರ್ ಈಗ ಟ್ರೋಲ್ ಗೆ ಗುರಿಯಾಗಿದ್ದಾರೆ. ಇತ್ತೀಚೆಗಷ್ಟೇ ಇವರಿಬ್ಬರು ಕಾಂಡೋಮ್ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಹಾಗಾಗಿ, ಸಾಮಾಜಿಕ ಜಾಲತಾಣದಲ್ಲಿ ಈ ದಂಪತಿ ಬಗ್ಗೆ ಟೀಕೆ ಪ್ರಹಾರ ನಡೆಯುತ್ತಿದೆ.

ಆದ್ರೆ, ಇದ್ಯಾವುದಕ್ಕು ತಲೆ ಕಡೆಸಿಕೊಳ್ಳದ ನಟಿ ಬಿಪಾಶಾ ಬಸು ''ನಾನು ತಪ್ಪು ಮಾಡಿಲ್ಲ, ಜಾಗೃತಿ ಮೂಡಿಸಿದ್ದೇನೆ'' ಎಂದು ಸಮರ್ಥಿಸಿಕೊಂಡಿದ್ದಾರೆ.

Bipasha Basu responds to condom ad

ಇನ್ನು ಬಿಪಾಶಾ ದಂಪತಿ ಬಗ್ಗೆ ಟ್ರೋಲ್ ಮಾಡಿರುವವರು ''ಈ ಜೋಡಿಗಳ ಕೈಯಲ್ಲಿ ಯಾವುದೇ ಚಿತ್ರಗಳಲ್ಲಿ ಆದ್ದರಿಂದ ಇಂತಹ ಜಾಹಿರಾತು ಗಳಲ್ಲಿ ನಟಿಸುತ್ತಿದ್ದಾರೆ'' ಎಂದು ಕಾಲೆಳೆದಿದ್ದಾರೆ.

''ನಿಮ್ಮ ಪ್ರತಿಭೆಗೆ ಈ ಜಾಹೀರಾತು ಸೂಕ್ತವಾದುದ್ದಲ್ಲ. ನಿಮಗೊಂದು ಗೌರವವಿದೆ. ಅದನ್ನ ಸಿನಿಮಾಗಳಲ್ಲಿ ಅಭಿನಯಿಸಿ ಬಳಸಿಕೊಳ್ಳಿ'' ಎಂದು ಕಿವಿಮಾತು ಹೇಳಿದ್ದಾರೆ. ಇನ್ನು ಕೆಲವರು ಕಾಂಡೋಮ್ ಕುರಿತು ಜಾಗೃತಿ ಮೂಡಿಸುತ್ತಿರುವ ಬಿಪಾಶಾ ಅವರನ್ನ ಶ್ಲಾಘಿಸಿದ್ದಾರೆ.

Bipasha Basu responds to condom ad

ಇನ್ನು ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಬಿಪಾಶಾ ''ನಮ್ಮದು ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ದೇಶ. ಈ ವಿಷಯದ (ಕಾಂಡೋಮ್) ಜಾಗೃತಿ ಮೂಡಿಸುವುದು ನಮ್ಮ ಜಾಹೀರಾತಿನ ಉದ್ದೇಶ. ನಾವು ಯಾವುದೇ ತಪ್ಪು ಮಾಡಿಲ್ಲ'' ಎಂದು ಟೀಕಕಾರರಿಗೆ ಉತ್ತರ ಕೊಟ್ಟಿದ್ದಾರೆ.

Bipasha Basu responds to condom ad
Bipasha Basu responds to condom ad

English summary
Trolled for her condom ad, Bipasha Basu responds, says 'done no wrong'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X