For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟ, ಸಂಭಾಷಣೆಕಾರ ಖಾದರ್ ಖಾನ್ ವಿಧಿವಶ

  |

  ಹಿಂದಿ ಚಿತ್ರರಂಗದ ಹಿರಿಯ ನಟ, ಸಂಭಾಷಣೆಕಾರ ಖಾದರ್ ಖಾನ್ ವಿಧಿವಶರಾಗಿದ್ದಾರೆ. 81 ವರ್ಷ ವಯಸ್ಸಾಗಿದ್ದ ಅವರು ಉಸಿರಾಟದ ತೊಂದರೆಯಿಂದ ಬಳಲುತಿದ್ದರು.

  ಕೆನಾಡದ ಟೋರಾಂಟೋದಲ್ಲಿರುವ ಆಸ್ಪತ್ರೆಯೊದರಲ್ಲಿ ಖಾದರ್ ಖಾನ್ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಸಂಜೆ 6 ಗಂಟೆಗೆ ಅವರ ನಿಧನ ಹೊಂದಿದ್ದಾರೆ. ಅವರ ಸಾವಿಗೆ ಕುಟುಂಬದ ಹಾಗೂ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

  ಅಂಕಲ್ ಲೋಕನಾಥ್ ನಿಧನಕ್ಕೆ ಕಂಬನಿ ಮಿಡಿದ ಕನ್ನಡ ತಾರೆಯರು ಅಂಕಲ್ ಲೋಕನಾಥ್ ನಿಧನಕ್ಕೆ ಕಂಬನಿ ಮಿಡಿದ ಕನ್ನಡ ತಾರೆಯರು

  ಖಾದರ್ ಖಾನ್ ನಟನೆ, ಸಂಭಾಷಣೆ ಹಾಗೂ ಚಿತ್ರಕತೆ ಬರೆಯುವ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆಯನ್ನು ಬರೆದಿದ್ದಾರೆ. 1980 - 90ರಲ್ಲಿ ಇವರಿಗೆ ಚಿತ್ರರಂಗದಲ್ಲಿ ಸಖತ್ ಡಿಮ್ಯಾಂಡ್ ಇತ್ತು.

  1973 ರಲ್ಲಿ ಮೊದಲ ಬಾರಿಗೆ ಖಾದರ್ ಖಾನ್ ಸಿನಿಮಾದಲ್ಲಿ ನಟಿಸಿದರು. ರಾಜೇಶ್ ಖನ್ನಾ ಜೊತೆಗಿನ 'ದಾಗ್' ಅವರ ಮೊದಲ ಸಿನಿಮಾವಾಗಿತ್ತು. ಈ ಚಿತ್ರದಿಂದ ಪ್ರಾರಂಭವಾದ ಅವರು ಸಿನಿಮಾ ಜರ್ನಿ ಸುಮಾರು 300 ಚಿತ್ರಗಳಲ್ಲಿ ನಟಿಸುವಂತೆ ಮಾಡಿತ್ತು.

  ಲಾವಾರಿಸ್, ದಾಗ್, ಅಮರ್‌ ಅಕ್ಬರ್‌ ಅಂಥೋನಿ, ಮುಕದ್ದರ್ ಕಾ ಸಿಖಂದರ್, ಸುಹಾಗ್, ಕೂಲಿ, ಶರಾಬಿ ಖಾದರ್ ಖಾನ್ ಅವರ ಪ್ರಮುಖ ಸಿನಿಮಾಗಳಾಗಿವೆ.

  English summary
  Bollywood actor Kader Khan passes away yesterday (31st december 2018) in Canada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X