For Quick Alerts
  ALLOW NOTIFICATIONS  
  For Daily Alerts

  ವಿಕ್ಕಿ ಕೌಶಲ್ ಜೊತೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ಕತ್ರಿನಾ?, ಕ್ಷಮಿಸಿ ಸಲ್ಮಾನ್ ಎನ್ನುತ್ತಿರುವ ನೆಟ್ಟಿಗರು

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಮದುವೆ ವಿಚಾರ ಆಗಾಗ ಸುದ್ದಿಯಲ್ಲಿರುತ್ತದೆ. ಆದರೆ ಕಳೆದ ಕೆಲವು ತಿಂಗಳಿಂದ ಕತ್ರಿನಾ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಅಂದಹಾಗೆ ಬಾಲಿವುಡ್ ಬ್ಯೂಟಿಯನ್ನು ವರಿಸುತ್ತಿರುವ ಹುಡುಗ ಯಾರು ಎನ್ನುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಕತ್ರಿನಾ ಬಾಲಿವುಡ್ ಖ್ಯಾತ ನಟ ವಿಕ್ಕಿ ಕೌಶಲ್ ಜೊತೆ ಡೇಟಿಂಗ್ ನಲ್ಲಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿರುವ ಈ ಜೋಡಿ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ.

  ರಾಜಮೌಳಿ ಚಿತ್ರದಲ್ಲಿ ಸೀತೆ ಪಾತ್ರ ಮಾಡಲು ಕರೀನಾ ಕಪೂರ್ ಗೆ ಇಷ್ಟು ಕೋಟಿ ಕೊಡ್ಬೇಕಾ

  ಕತ್ರಿನಾ ಮತ್ತು ವಿಕ್ಕಿ ಕೌಶಲ್ ಇತ್ತೀಚಿಗೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಇಬ್ಬರ ಎಂಗೇಜ್ ಮೆಂಟ್ ಸುದ್ದಿ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ. ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ಸೈಲೆಂಟ್ ಆಗೇ ಹಸೆಮಣೆ ಏರುವ ತಯಾರಿ ನಡೆಸಿದ್ದಾರೆ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಇಬ್ಬರೂ ಆಗಾಗ ಒಟ್ಟಿಗೆ ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿರುತ್ತಾರೆ, ಅಲ್ಲದೆ ಇಬ್ಬರ ಪ್ರೀತಿ, ಪ್ರೇಮದ ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದರೂ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಈ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಮಾತನಾಡಿಲ್ಲ. ತಮ್ಮ ಪ್ರೀತಿಯ ವಿಚಾರವನ್ನು ಇಬ್ಬರೂ ಸ್ಟಾರ್ಸ್ ಒಪ್ಪಿಕೊಂಡಿಲ್ಲ. ಮುಂದೆ ಓದಿ...

  ವದಂತಿ ಅಷ್ಟೆ ಎಂದ ಆಪ್ತ ಮೂಲಗಳು

  ವದಂತಿ ಅಷ್ಟೆ ಎಂದ ಆಪ್ತ ಮೂಲಗಳು

  ನಿಶ್ಚಿತಾರ್ಥದ ವಿಚಾರ ವೈರಲ್ ಆಗುತ್ತಿದ್ದಂತೆ ಕತ್ರಿನಾ ಆಪ್ತ ಮೂಲಗಳು ಇದನ್ನು ತಳ್ಳಿ ಹಾಕಿದೆ. ಮೂಲಗಳ ಪ್ರಕಾರ ಇದು ಕೇವಲ ವದಂತಿ ಅಷ್ಟೆ ಎನ್ನಲಾಗುತ್ತಿದೆ. ಇಬ್ಬರೂ ಇನ್ನೂ ನಿಶ್ಚಿತಾರ್ಥ ಮಾಡಿಕೊಂಡಿಲ್ಲ ಎಂದು ಕತ್ರಿನಾ ಆಪ್ತ ಮೂಲ ಮಾಹಿತಿ ನೀಡಿದೆಆದರೆ ಇಬ್ಬರ ನಿಶ್ಚಿತಾರ್ಥದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಸಲ್ಮಾನ್ ಖಾನ್ ಗೆ ಕ್ಷಮಿಸಿ ಎನ್ನುತ್ತಿರುವ ನೆಟ್ಟಿಗರು

  ಸಲ್ಮಾನ್ ಖಾನ್ ಗೆ ಕ್ಷಮಿಸಿ ಎನ್ನುತ್ತಿರುವ ನೆಟ್ಟಿಗರು

  ಅಂದಹಾಗೆ ಕತ್ರಿನಾ ಮತ್ತು ವಿಕ್ಕಿ ಎಂಗೇಜ್ಮೆಂಟ್ ಸುದ್ದಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇನ್ನು ಅನೇಕರು ಕಾಮೆಂಟ್ ಮಾಡಿ ಸಲ್ಮಾನ್ ಖಾನ್ ಮೇಲೆ ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ಕ್ಷಮಿಸಿ ಸಲ್ಮಾನ್ ಎಂದು ಹೇಳಿದ್ದಾರೆ.

  ಕತ್ರಿನಾ ಮದುವೆ ಬಗ್ಗೆ ಸುಳಿವು ನೀಡಿದ್ದರು ಡಿಸೈನರ್

  ಕತ್ರಿನಾ ಮದುವೆ ಬಗ್ಗೆ ಸುಳಿವು ನೀಡಿದ್ದರು ಡಿಸೈನರ್

  ಇಬ್ಬರೂ ನಿಜಕ್ಕೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಾ ಅಥವಾ ಇದು ಕೇವಲ ವದಂತಿ ಎನ್ನುವುದು ಸದ್ಯದಲ್ಲೇ ಬಹಿರಂಗವಾಗಲಿದೆ. ಇತ್ತೀಚಿಗಷ್ಟೆ ಕತ್ರಿನಾ ಹುಟ್ಟುಹಬ್ಬದ ದಿನ ಸಲ್ಮಾನ್ ಖಾನ್ ಡಿಸೈನರ್ ಆಶ್ಲೆ ರೆಬೆಲ್ ಕತ್ರಿನಾ ಮದುವೆಯ ಸುಳಿವು ನೀಡಿದ್ದರು. ಮದುಮಗಳ ಹಾಗ ಡ್ರೆಸ್ ಮಾಡಿಕೊಂಡಿದ್ದ ಕತ್ರಿನಾ ಫೋಟೋ ಶೇರ್ ಮಾಡಿ ಆದಷ್ಟು ನಡೆಯಲಿ ಎಂದು ಹೇಳಿದ್ದರು.

  ಅನಿಲ್ ಕಪೂರ್ ಪುತ್ರನ ಹೇಳಿಕೆಗೆ ಗರಂ ಆಗಿದ್ದ ಕತ್ರಿನಾ

  ಅನಿಲ್ ಕಪೂರ್ ಪುತ್ರನ ಹೇಳಿಕೆಗೆ ಗರಂ ಆಗಿದ್ದ ಕತ್ರಿನಾ

  ಇತ್ತೀಚಿಗೆ ಸಂದರ್ಶನವೊಂದರಲ್ಲಿ ಬಾಲಿವುಡ್ ನ ಖ್ಯಾತ ನಟ ಅನಿಲ್ ಕಪೂರ್ ಪುತ್ರ ಹರ್ಷವರ್ಧನ್ ಕಪೂರ್, ಕತ್ರಿನಾ ಮತ್ತು ವಿಕ್ಕಿ ಕೌಶಲ್ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸುವ ಮೂಲಕ ಇಬ್ಬರ ಸಂಬಂಧವನ್ನು ಖಚಿತ ಪಡಿಸಿದ್ದರು. ಆದರೆ ಈ ಬಗ್ಗೆ ಕತ್ರಿನಾ ಫುಲ್ ಗರಂ ಆಗಿದ್ದರು. ತನ್ನ ಖಾಸಗಿ ವಿಚಾರವನ್ನು ಬೇರೊಬ್ಬರು ಬಹಿರಂಗ ಪಡಿಸಿದ ಬಗ್ಗೆ ಕತ್ರಿನಾ ಅಸಮಾಧಾನಗೊಂಡಿದ್ದರಂತೆ ಈ ಬಗ್ಗೆ ಕತ್ರಿನಾ ಆಪ್ತರೊಬ್ಬರು ಮಾಹಿತಿ ಬಹಿರಂಗ ಪಡಿಸಿದ್ದರು.

  ಪ್ರೀತಿ ವಿಚಾರ ಗೌಪ್ಯವಾಗಿಟ್ಟಿದ್ದೇಕೆ ನಟಿ?

  ಪ್ರೀತಿ ವಿಚಾರ ಗೌಪ್ಯವಾಗಿಟ್ಟಿದ್ದೇಕೆ ನಟಿ?

  'ಕತ್ರಿನಾ ತನ್ನ ವೈಯಕ್ತಿಕ ಜೀವನದ ಬಗ್ಗೆ ಜಾಗರೂಕರಾಗಿದ್ದಾರೆ. ತನ್ನ ಹಳೆಯ ಸಂಬಂಧದಿಂದ (ರಣಬೀರ್ ಜೊತೆಗಿನ ಸಂಬಂಧ) ಕತ್ರಿನಾ ತುಂಬಾ ಹರ್ಟ್ ಆಗಿದ್ದರು. ಹಾಗಾಗಿ ಪ್ರಸ್ತುತ ಸಂಬಂಧವನ್ನು ಗೌಪ್ಯವಾಗಿ ಮತ್ತು ಶಾಂತವಾಗಿಡಲು ಬಯಸುತ್ತಾರೆ' ಎಂದು ಕತ್ರಿನಾ ಆಪ್ತರು ಆಂಗ್ಲ ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು.

  ಹರ್ಷವರ್ಧನ್ ಕಪೂರ್ ಹೇಳಿದ್ದೇನು?

  ಹರ್ಷವರ್ಧನ್ ಕಪೂರ್ ಹೇಳಿದ್ದೇನು?

  ಆಂಗ್ಲ ವೆಬ್ ಪೋರ್ಟಲ್ ಗೆ ನೀಡಿದ ಸಂದರಶನದಲ್ಲಿ ಹರ್ಷವರ್ಧನ್ ಕಪೂರ್, ಬಿಟೌನ್ ಲವ್‌ಬರ್ಡ್ಸ್ ಗಳ ಸಂಬಂಧದ ಬಗ್ಗೆ ಬಹಿರಂಗ ಪಡಿಸಿದ್ದರು. 'ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಒಟ್ಟಿರುವುದು ನಿಜ, ಬಹುಶಃ ನನ್ನ ಹೇಳಿಕೆ ಅವರಿಗೆ ತೊಂದರೆ ಉಂಟು ಮಾಡಬಹುದು' ಎಂದಿದ್ದರು. ಹರ್ಷವರ್ಧನ್ ಈ ಹೇಳಇಕೆ ಕತ್ರಿನಾ ಕೋಪಕ್ಕೆ ಕಾರಣವಾಗಿತ್ತು.

  English summary
  Bollywood actors Vicky Kaushal and Katrina Kaif secretly engaged.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X