»   » ಅಬ್ದುಲ್ ಕಲಾಂ ಹೆಸರನ್ನು ತಪ್ಪಾಗಿ ಟ್ವೀಟಿಸಿ ಪೆಚ್ಚಾದ ಬಾಲಿವುಡ್ ನಟಿ

ಅಬ್ದುಲ್ ಕಲಾಂ ಹೆಸರನ್ನು ತಪ್ಪಾಗಿ ಟ್ವೀಟಿಸಿ ಪೆಚ್ಚಾದ ಬಾಲಿವುಡ್ ನಟಿ

Posted By:
Subscribe to Filmibeat Kannada

ಇತ್ತೀಚೆಗೆ ಮದುವೆಯಾದ ಮೇಲೂ ಲಿಪ್ ಲಾಕ್, ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತೇನೆಂದು ಬಿಂದಾಸ್ ಹೇಳಿಕೆ ನೀಡಿ ಸುದ್ದಿಯಾಗಿದ್ದ ಅನುಷ್ಕಾ ಶರ್ಮಾ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. (ಲಿಪ್ ಲಾಕ್: ಅನುಷ್ಕಾ ಹೇಳಿಕೆ)

ಸೋಮವಾರ (ಜು27) ನಿಧನರಾದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರಿಗೆ ಸಂತಾಪ ಸೂಚಿಸಲು ಮುಂದಾಗಿ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ನಗೆಪಟಾಲಿಗೆ ಗುರಿಯಾಗಿದ್ದಾರೆ.

ಶ್ರದ್ದಾಂಜಲಿ ಸಲ್ಲಿಸುವ ಟ್ವೀಟ್ ಅನ್ನು ತಪ್ಪುತಪ್ಪಾಗಿ ಟೈಪ್ ಮಾಡಿ ನೆಟಿಜನ್ ಗಳ ತೀವ್ರ ಆಕ್ರೋಶಕ್ಕೆ ತುತ್ತಾದ ಅನುಷ್ಕಾ, ಕೂಡಲೇ ಟ್ವೀಟ್ ಅನ್ನು ಡಿಲಿಟ್ ಮಾಡಿ ಮತ್ತೆ ಟ್ವೀಟ್ ಮಾಡಿದ್ದಾರೆ.

ಸೋಜಿಗದ ವಿಚಾರವೆಂದರೆ ಇನ್ನೊಂದು ಟ್ವೀಟ್ ನಲ್ಲೂ ಅನುಷ್ಕಾ, ಕಲಾಂ ಹೆಸರನ್ನು ತಪ್ಪಾಗಿ ಟೈಪ್ ಮಾಡಿ, ಸಾಮಾಜಿಕ ತಾಣದಲ್ಲಿ ಅಪಹಾಸ್ಯಕ್ಕೀಡಾಗಿದ್ದಾರೆ.

ಆದರೆ, ಲಾಸ್ಟ್ ಬಟ್ ನಾಟ್ ಲೀಸ್ಟ್ ಅನ್ನೋ ಹಾಗೇ ಮೂರನೇ ಬಾರಿ ಹೆಸರನ್ನು ಸರಿಯಾಗಿ ಟೈಪ್ ಮಾಡಿ ಅನುಷ್ಕಾ ನಿಟ್ಟುಸಿರು ಬಿಟ್ಟಿದ್ದಾರೆ.

ಮೊದಲು ಟ್ವೀಟ್ ಮಾಡಿದ್ದು ಹೀಗೆ

ಎಬಿಜೆ ಅಬ್ದುಲ್ ಕಲಾಂ ಆಜಾದ್ ನಿಧನರಾದ ಸುದ್ದಿ ಕೇಳಿ ತೀವ್ರ ನೋವಾಗಿದೆ ಎಂದು ಕಲಾಂ ಹೆಸರನ್ನು ತಪ್ಪಾಗಿ ಅನುಷ್ಕಾ ಟೈಪ್ ಮಾಡಿ ಟ್ವೀಟ್ ಮಾಡಿದ್ದರು.

ಮತ್ತೆ ಟ್ವೀಟ್ ನಲ್ಲೂ ಎಡವಟ್ಟು

ನಂತರ ಟ್ವೀಟ್ ಮಾಡಿದ ಅನುಷ್ಕಾ, ಎಬಿಜೆ ಅಬ್ದುಲ್ ಕಲಾಂ ಆಜಾದ್ ಎಂದು ಎಡವಟ್ಟಾಗಿ ಟ್ವೀಟ್ ಮಾಡಿದ್ದಾರೆ.

ಮೂರನೇ ಪ್ರಯತ್ನ ಯಶಸ್ವಿ

ಎರಡೂ ತಪ್ಪು ಟೈಪ್ ಮಾಡಿದ ಟ್ವೀಟಿಗೆ ವ್ಯಾಪಕ ಟೀಕೆ ವ್ಯಕ್ತವಾದ ನಂತರ ಎರಡೂ ಟ್ವೀಟನ್ನು ಡಿಲಿಟ್ ಮಾಡಿದ ಅನುಷ್ಕಾ, ಮೂರನೇ ಬಾರಿಗೆ ಕಲಾಂ ಸರ್ ಅವರ ಹೆಸರನ್ನು ಸರಿಯಾಗಿ ಟೈಪ್ ಮಾಡಿ ಟ್ವೀಟ್ ಮಾಡಿದ್ದಾರೆ.

ಕ್ಷಮೆ ಕೇಳಬೇಕು

ನೀನು, ದೇಶದ, ಜೊತೆಗೆ ನಿಮ್ಮ ಪೋಷಕರ ಮತ್ತು ವಿರಾಟ್ ಕೊಹ್ಲಿ ಮತ್ತು ಕೊಹ್ಲಿ ಅಭಿಮಾನಿಗಳ ಕ್ಷಮೆ ಕೇಳಬೇಕು ಎನ್ನುವ ಟ್ವೀಟ್.

ಸುನಿಲ್ ಗವಾಸ್ಕರ್ ಹೆಸರಲ್ಲಿನ ಟ್ವೀಟ್

ಮೇಡಂ ಕಲಾಂ ಅವರ ಹೆಸರು ಅವಲ್ ಪಾಕೀರ್ ಜೈನಾಲಾಬ್ದೀನ್ ಅಬ್ದುಲ್ ಕಲಾಂ. ಈ ಟ್ವೀಟ್ ಅನ್ನು ಡಿಲಿಟ್ ಮಾಡುವ ಹಾಗಿದ್ದರೆ ಮಾಡಿ..

English summary
Bollywood actress Anushka Sharma tweeted out her respects and expressed her sadness on Former President of India Dr. APJ Abdul Kalam. But she had to do it three times as she got the former president's name wrong, twice.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada