»   » ಒಂದು ಮಗುವಿನ ತಾಯಿಯಾಗಿ ಹೀಗಾ ಬಟ್ಟೆ ಹಾಕೊಳ್ಳೋದು.? ಟ್ರೋಲ್ ಆದ ಮಲೈಕಾ.!

ಒಂದು ಮಗುವಿನ ತಾಯಿಯಾಗಿ ಹೀಗಾ ಬಟ್ಟೆ ಹಾಕೊಳ್ಳೋದು.? ಟ್ರೋಲ್ ಆದ ಮಲೈಕಾ.!

Posted By:
Subscribe to Filmibeat Kannada
Malaika Arora Gets Trolled On Social Media

ಚೈಯ್ಯ ಚೈಯ್ಯ... ಕಾಲ್ ಧಮಾಲ್... ಮುನ್ನಿ ಬದ್ನಾಮ್... ಸೇರಿದಂತೆ ಅನೇಕ ಸೂಪರ್ ಹಿಟ್ ಡ್ಯಾನ್ಸ್ ನಂಬರ್ ಗಳಲ್ಲಿ ಸೊಂಟ ಬಳುಕಿಸಿ ಸೈ ಎನಿಸಿಕೊಂಡಿರುವ ಬಾಲಿವುಡ್ ನ ಗ್ಲಾಮರಸ್ ನಟಿ ಮಲೈಕಾ ಅರೋರ ಇದೀಗ ಕೆಲ ಸಂಪ್ರದಾಯಸ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮುಂಬೈನ ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರ ಡಿಸೈನ್ ಮಾಡಿರುವ ಸ್ಟೈಲಿಶ್ ಉಡುಗೆ ತೊಟ್ಟು ಪಾರ್ಟಿಯೊಂದಕ್ಕೆ ಮಲೈಕಾ ತೆರಳಿದ್ದರು. ಅದೇ ಪಾರ್ಟಿಯಲ್ಲಿ ತೆಗೆದ ಫೋಟೋ ಒಂದನ್ನ ಸ್ವತಃ ಮಲೈಕಾ ಅರೋರ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದರು. ಈಗ ಅದೇ ಫೋಟೋ ನೋಡಿ ಕೆಲವರು ಕೋಪ ಮಾಡಿಕೊಂಡಿದ್ದಾರೆ.

Bollywood Actress Malaika Arora gets trolled on Instagram

43 ವರ್ಷ ವಯಸ್ಸಿನ ಮಲೈಕಾ ಅರೋರ ಈಗಲೂ ಸೂಪರ್ ಸ್ಟೈಲಿಶ್ ಆಗಿ ಕಾಣುತ್ತಿರುವುದಕ್ಕೆ ಕೆಲವರು ಹೊಗಳಿದರೆ, ಹಲವರು ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ.

ಒಂದು ಮಗುವಿನ ತಾಯಿ ಆಗಿರುವ ಮಲೈಕಾ ಅರೋರ ಸಭ್ಯ ಉಡುಗೆ ತೊಡುವುದನ್ನು ಬಿಟ್ಟು ಹೀಗಾ ಬಟ್ಟೆ ಹಾಕೊಳ್ಳೋದು ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ.

Jus.....coz I ♥️it.... @manishmalhotra05 @mehakoberoi

A post shared by Malaika Arora Khan (@malaikaarorakhanofficial) on Sep 23, 2017 at 10:42pm PDT

ನಟಿ ಮಲೈಕಾ ಅರೋರ ಉಡುಗೆ ವಿಚಾರವಾಗಿ ಇನ್ಸ್ಟಾಗ್ರಾಮ್ ನಲ್ಲಿ ಆಕ್ಷೇಪಾರ್ಹ ಕಾಮೆಂಟ್ ಗಳೇ ಹೆಚ್ಚಾಗಿವೆ. ಆದರೂ ಅದರ ಬಗ್ಗೆ ಮಲೈಕಾ ಕೇರ್ ಮಾಡಿಲ್ಲ. ಯಾರಿಗೂ ಉತ್ತರ ಕೊಡುವ ಗೋಜಿಗೂ ಹೋಗಿಲ್ಲ.

ಅಷ್ಟಕ್ಕೂ, ಬಾಲಿವುಡ್ ನಲ್ಲಿ ಉಡುಗೆ ವಿಚಾರವಾಗಿ ನಟಿಯರು ಹೀಗೆ ಟ್ರೋಲ್ ಆಗುತ್ತಿರುವುದು ಇದೇ ಮೊದಲೇನಲ್ಲ. ನಟಿ ತಾಪ್ಸಿ ಸೇರಿದಂತೆ ಅನೇಕ ನಟಿಯರು ತಮ್ಮ ಡ್ರೆಸ್ಸಿಂಗ್ ಸೆನ್ಸ್ ನಿಂದಾಗಿ ಟ್ರೋಲ್ ಅಗಿದ್ದಾರೆ.

#aboutlastnite .....totally in love😍with this @manishmalhotra05 creation♥️♥️#mua💄 #hair @mehakoberoi 😘@louboutin 👠

A post shared by Malaika Arora Khan (@malaikaarorakhanofficial) on Sep 23, 2017 at 9:50pm PDT

ಅಂದ್ಹಾಗೆ, 2016 ರಲ್ಲಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ನಿಂದ ವಿಚ್ಛೇದನ ಪಡೆದ ಮಲೈಕಾ ಅರೋರಗೆ ಅರ್ಹಾನ್ ಎಂಬ ಪುತ್ರನಿದ್ದಾನೆ.

ಐಟಂ ಸಾಂಗ್ ಗಳಿಂದಲೇ ಖ್ಯಾತಿ ಗಳಿಸಿದ್ದ ಮಲೈಕಾ ಅರೋರ ಹಿಂದಿ ಕಿರುತೆರೆಯ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.

English summary
Bollywood Actress Malaika Arora gets trolled on Instagram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada