»   » ಬಾಲಿವುಡ್ ನಲ್ಲಿ ಕರಾವಳಿ ನಕ್ಷತ್ರಗಳ ಹೊಳಪು

ಬಾಲಿವುಡ್ ನಲ್ಲಿ ಕರಾವಳಿ ನಕ್ಷತ್ರಗಳ ಹೊಳಪು

By: ಜೀವನರಸಿಕ
Subscribe to Filmibeat Kannada

ಬಾಲಿವುಡ್ ಅನ್ನೋದು ಬಡಾ ದುನಿಯಾ. ಅದೊಂದು ಸಾಗರ, ಅಲ್ಲಿ ಕಾಲಿಟ್ಟವರು ಅಷ್ಟೇ ಬೇಗ ಮಾಯವಾಗ್ತಾರೆ. ಇಲ್ಲಿ ಗೆದ್ದವರೆಷ್ಟೋ, ಸೋತವರೆಷ್ಟೋ, ಆದರೆ ಎಲ್ಲ ಸವಾಲುಗಳನ್ನ ಮೆಟ್ಟಿನಿಂತು ಉಳಿಯುವವರು ವಿರಳ ಹಾಗೂ ಅಪರೂಪ.

ಆದರೆ ನಮ್ಮ ಕರಾವಳಿಗೂ ಮುಂಬೈನ ಬಾಲಿವುಡ್ ಗೂ ಇನ್ನಿಲ್ಲದ ನಂಟು. ಕರಾವಳಿಯ ಪ್ರತಿಭೆಗಳು ಬಾಲಿವುಡ್ ಬಾಗಿಲು ತಟ್ಟಿ ಬೇಗ ಫೇಮಸ್ಸಾಗಿ ಬಿಡ್ತಾರೆ. ಗೆಲುವಿನ ಗಂಟೆ ಬಾರಿಸ್ತಾರೆ. ಸೋಲಿಗೆ ತತ್ತರಿಸದೆ ಎದ್ದು ನಿಂತು ಬಿಡ್ತಾರೆ.

ಕನ್ನಡದ ಕರಾವಳಿಯ ಹೆಮ್ಮಯನ್ನ ಬಾಲಿವುಡ್ ನಲ್ಲಿ ಸಾರಿದ ತಾರೆಗಳು ದೊಡ್ಡ ಸಂಖ್ಯೆಯಿದೆ. ಬಾಲಿವುಡ್ ಅನ್ನೋ ತಾರೆಗಳ ತೋಟದಲ್ಲಿ ಕನ್ನಡದ ಹೂವುಗಳೆಷ್ಟು? ಆ ನಕ್ಷತ್ರ ಲೋಕದಲ್ಲಿ ಕರಾವಳಿಯ ಹೊಳಪೆಷ್ಟಿದೆ? ನಿಮಗಾಗಿ ಒಂದು ಚೆಂದದ ತಾರೆಯರ ಪಟ್ಟಿ ಇಲ್ಲಿದೆ.

ಉಡುಪಿಯ ಬಾಲೆ ದೀಪಿಕಾ ಪಡುಕೋಣೆ

ಉಡುಪಿಯ ಪಡುಕೋಣೆಯ ಚೆಂದದ ಚೆಲುವೆ ದೀಪಿಕಾ ಪಡುಕೋಣೆ ಬಾಲಿವುಡ್ ಬಹುಬೇಡಿಕೆಯ ನಟಿ. ಕನ್ನಡದ ಐಶ್ವರ್ಯಾ ಸಿನಿಮಾ ಮೂಲಕ ಸಿನಿಜರ್ನಿ ಆರಂಭಿಸಿ ಬಾಲಿವುಡ್ ಗೆ ಎಂಟ್ರಿಕೊಟ್ಟ ದೀಪಿಕಾ ಈಗ ಕನ್ನಡಕ್ಕೆ ನಿಲುಕದ ತಾರೆ.

ಕರಾವಳಿಯ ವಿಶ್ವಸುಂದರಿ

ಐಶ್ವರ್ಯಾ ಅನ್ನೋ ಅದ್ಭುತ ಸುಂದರಿಯ ಬಗ್ಗೆ ಹೇಳಬೇಕೆ. ಕರಾವಳಿಯಲ್ಲಿ ಹುಟ್ಟಿ ಬಾಲಿವುಡ್ ಆಳಿದ ಸೌಂದರ್ಯ ದೇವತೆ. ಐಶ್ ಸೌಂದರ್ಯಕ್ಕೆ ಮೋಡಿಯಾಗದವರು ಯಾರಿದ್ದಾರೆ ಹೇಳಿ.

ಶಾರುಖ್ ಖಾನ್ ಊರು ಮಂಗಳೂರು

ಸ್ವತಃ ಶಾರುಖ್ ಖಾನ್ ಹೇಳಿಕೊಂಡ ಹಾಗೆ ಅವರು ಹುಟ್ಟಿದ್ದು ಮಂಗಳೂರಲ್ಲಿ. ಬಾಲಿವುಡ್ ಬಾದ್ ಶಾ ಅಜ್ಜಂದಿರು ಮಂಗಳೂರಲ್ಲಿದ್ರು. ಶಾರುಖ್ ಕೂಡ ಕರಾವಳಿ ನಾಡು ನನ್ನ ಹುಟ್ಟೂರು ಅನ್ನೋ ಪ್ರೀತಿಯಿದೆ.

ಪರ್ಫೆಕ್ಟ್ ಫಿಗರ್ ಶಿಲ್ಪಾ ಶೆಟ್ಟಿ

ಚಿತ್ರರಂಗಕ್ಕೆ ಝಿರೋ ಸೈಜ್ ಕಾನ್ಸೆಪ್ಟ್ ಬರೋ ಮೊದಲೇ ಪರ್ಫೆಕ್ಟ್ ಫಿಗರ್ ಅನ್ನಿಸಿಕೊಂಡಿದ್ದ ಶಿಲ್ಪಾ ಶೆಟ್ಟಿ ಕರಾವಳಿಯ ಚೆಲುವೆ. ಕನ್ನಡದಲ್ಲೂ ಮಿಂಚಿದ ಈ ಚೆಲುವೆ ಬಾಲಿವುಡ್ ಫೇವರೀಟ್ ಫಿಗರ್.

ಶೆಟ್ಟಿ ಖಾಂದಾನ್ನ ಸುನೀಲ್ ಶೆಟ್ಟಿ

ಬಾಲಿವುಡ್ ನಲ್ಲೂ ಶೆಟ್ಟಿ ಖಾಂದಾನ್ ಇದೆ. ಈ ಖಾಂದಾನ್ ನಟ ಸುನೀಲ್ ಶೆಟ್ಟಿ. ಮೊದಲ ಸಿನಿಮಾದಿಂದ್ಲೇ ಮೋಡಿ ಮಾಡಿದ ಸುನೀಲ್ ಶೆಟ್ಟಿ ಕಂಚಿನ ಕಂಠ ಎಲ್ಲರ ಫೇವರೀಟ್.

ಮಿಲಿಯನೇರ್ ಬ್ಯೂಟಿ ಫ್ರೀಡಾ ಪಿಂಟೋ

'ಸ್ಲಂ ಡಾಗ್ ಮಿಲಿಯನೇರ್' ಅನ್ನೋ ಆಸ್ಕರ್ ಅವಾರ್ಡ್ ಸಿನಿಮಾ ಮೂಲಕ ವರ್ಲ್ಡ್ ವೈಡ್ ಮಿಂಚಿದ ಫ್ರೀಡಾ ಪಿಂಟೋ ಅನ್ನೋ ಕೃಷ್ಣ ಸುಂದರಿ ಕೂಡ ಕರಾವಳಿಯ ಕನ್ಯೆ. ಈಗ ಈ ಚೆಲುವೆ ಹಾಲಿವುಡ್ ಬೆಡಗಿ.

ಉಳ್ಳಾಲದ ಹುಡುಗಿಗೆ ಬಾಲಿವುಡ್ ಸ್ನೇಹ

ಮಂಗಳೂರಿನ ಉಳ್ಳಾಲದ ಹುಡುಗಿ ಸ್ನೇಹಾ ಜೂನಿಯರ್ ಐಶ್ವರ್ಯಾ ಅಂತಾನೇ ಫೇಮಸ್. ಈ ಸ್ನೇಹ ಬಾಲಿವುಡ್ ಬ್ಯಾಡ್ ಬಾಯ್ ಸಲ್ಲೂಗೆ ಜೋಡಿಯಾದ ಚೆಲುವೆ. ಅಷ್ಟಾಗಿ ಯಶಸ್ಸು ಕಾಣದಿದ್ರೂ ಕರಾವಳಿಯ ಮತ್ತೊಂದು ಕೊಡುಗೆ.

English summary
Here is the list of actresses from Coastal Karnataka who glitters in Bollywood. Aishwarya Rai Bachchan, Deepika Padukone, Shilpa Shetty, Sneha Ullal are some of the notable actress from the coastal area of Karnataka. 
Please Wait while comments are loading...