»   » ಅಭಿನೇತೃ ದಿಲೀಪ್ ಕುಮಾರ್ ಬಗೆಗಿನ ಸುದ್ದಿ ನಿಜವೇ?

ಅಭಿನೇತೃ ದಿಲೀಪ್ ಕುಮಾರ್ ಬಗೆಗಿನ ಸುದ್ದಿ ನಿಜವೇ?

Posted By:
Subscribe to Filmibeat Kannada

ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ, ಬಾಲಿವುಡ್ ಚಿತ್ರಜಗತ್ತಿನ ದುರಂತ ನಾಯಕ, ಖ್ಯಾತ ಅಭಿನೇತೃ ದಿಲೀಪ್ ಕುಮಾರ್ (91) ಬಗ್ಗೆ ಕಳೆದ ನಾಲ್ಕು ದಿನಗಳಿಂದ ನಾನಾ ಪುಕಾರುಗಳು ಕೇಳಿಬರುತ್ತಿವೆ. ಅವರ ಆರೋಗ್ಯ ಸ್ಥಿತಿ ವಿಷಮಿಸಿದೆ ಎಂಬ ವದಂತಿ ಎಲ್ಲೆಡೆ ಹರಡಿವೆ.

ಸಲ್ಮಾನ್ ಖಾನ್ ತಂಗಿ ಅರ್ಪಿತಾ ಖಾನ್ ಮದುವೆ ಆರತಕ್ಷತೆ ಕಾರ್ಯಾಕ್ರಮಕ್ಕೆ ಆಗಮಿಸಿದ್ದ ದಿಲೀಪ್ ಕುಮಾರ್ ಲವಲವಿಕೆಯಿಂದಲೇ ಕಾಣಿಸಿಕೊಂಡಿದ್ದರು. ಇಷ್ಟು ಬೇಗ ಅವರಿಗೆ ಏನಾಯಿತು ಎಂದು ಬಾಲಿವುಡ್ ನಟರು, ಅಭಿಮಾನಿಗಳು ಕಂಗಾಲಾಗಿದ್ದರು. ಆದರೆ ಈ ವದಂತಿಗಳನ್ನು ಸ್ವತಃ ದಿಲೀಪ್ ಕುಮಾರ್ ಟ್ವಿಟ್ಟರ್ ನಲ್ಲಿ ಉತ್ತರಿಸಿದ್ದಾರೆ. [ನಟ ದಿಲೀಪ್ ಕುಮಾರ್ ಗೆ ಲಘು ಹೃದಯಾಘಾತ]

Bollywood Legend Dilip Kumar dismiss illness rumours

ಈ ಮೂಲಕ ಅವರ ಅಭಿಮಾನಿ ಬಳಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ತನ್ನ ಆರೋಗ್ಯದ ಬಗ್ಗೆ ಬರುತ್ತಿರುವ ಸುದ್ದಿಗಳನ್ನು ಅವರನ್ನು ಖಂಡಿಸಿದ್ದು, ತಾನು ಸಂಪೂರ್ಣ ಆರೋಗ್ಯದಿಂದ್ದೇನೆ ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ತನ್ನ ಬಗ್ಗೆ ಮುತುವರ್ಜಿ ವಹಿಸಿದ ಎಲ್ಲರಿಗೂ ಕೃತಜ್ಞತೆಗಳನ್ನೂ ತಿಳಿಸಿದ್ದಾರೆ.

"ಅದೆಷ್ಟೋ ಮಂದಿಯಿಂದ ದೂರವಾಣಿ ಕರೆಗಳು ಬಂದವು. ನೀವು ತೋರುತ್ತಿರುವ ಪ್ರೀತಿ, ಸಲ್ಲಿಸುತ್ತಿರುವ ಪ್ರಾರ್ಥನೆ, ಅಲ್ಲಾ ಆಶೀರ್ವಾದಕ್ಕೆ ಕೃತಜ್ಞತೆಗಳನ್ನು ಹೇಳದಿರಲು ಸಾಧ್ಯವೇ" ಎಂದಿದ್ದಾರೆ.

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಅವರು ದಿಲೀಪ್ ಆರೋಗ್ಯದ ಬಗ್ಗೆ ಟ್ವೀಟ್ ಮಾಡಿದ್ದರು. "ದಿಲೀಪ್ ಜೀ ಕ್ಷೇಮವಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಕಂಗಾಲಾಗುವ ಅವಶ್ಯಕತೆ ಇಲ್ಲ. ವದಂತಿಗಳನ್ನು ನಂಬಬೇಡಿ" ಎಂದು ತನ್ನ ಸಾಮಾಜಿಕ ತಾಣದಲ್ಲಿ ಸಂದೇಶ ರವಾನಿಸಿದ್ದರು. (ಏಜೆನ್ಸೀಸ್)

English summary
After a string of online rumours of his ill-health, thespian Dilip Kumar on Tuesday took to Twitter to tell his friends and fans that he was well and healthy. He also thanked everyone for their concern.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada