»   » ರಿತುಪರ್ಣ ಸೇನ್ 'ಎಕ್ಸ್ ಟ್ರಾಡಿನರಿ' ಸಿನಿಮಾ ತೆರೆಗೆ

ರಿತುಪರ್ಣ ಸೇನ್ 'ಎಕ್ಸ್ ಟ್ರಾಡಿನರಿ' ಸಿನಿಮಾ ತೆರೆಗೆ

Posted By:
Subscribe to Filmibeat Kannada

ಬಂಗಾಳಿ ಚಿತ್ರಗಳ ಮೂಲಕ ರಾಷ್ಟ್ರ ಪ್ರಶಸ್ತಿ ಗಳಿಸಿರುವ ರಿತುಪರ್ಣ ಸೇನ್ ಗುಪ್ತ ಬಾಲಿವುಡ್ ನಲ್ಲೂ ಸಖತ್ ಫೇಮಸ್. ಈಗಾಗಲೇ 7 ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ರಿತುಪರ್ಣ ಸೇನ್ ಗುಪ್ತ ಇದೀಗ 'ಎಕ್ಸ್ ಟ್ರಾಡಿನರಿ' ಚಿತ್ರದ ಮೂಲಕ ಬಿಟೌನ್ ಬೆಳ್ಳಿತೆರೆ ಮೇಲೆ ರಾರಾಜಿಸಲಿದ್ದಾರೆ.

ಇದೇ ವಾರ ಭಾರತದಾದ್ಯಂತ 'ಎಕ್ಸ್ ಟ್ರಾಡಿನರಿ' ಸಿನಿಮಾ ತೆರೆ ಕಾಣಲಿದೆ. ಸಮಾಜದಲ್ಲಿ ಮಹಿಳೆಯರಿಗೆ ಉತ್ತಮ ಅವಕಾಶ ಸಿಕ್ಕರೆ ಸಾಧನೆ ಮಾಡಬಲ್ಲಳು. ಅತ್ಯಂತ ಕೆಳಮಟ್ಟದ ಮಹಿಳೆಯರೂ ಉನ್ನತ ಸ್ಥಾನ ಗಳಿಸಬಲ್ಲಳು ಅನ್ನುವ ವಿಷಯ ಪ್ರಧಾನವಾಗಿಟ್ಟುಕೊಂಡು ನಿರ್ಮಿಸಿರುವ ಹಿಂದಿ ಚಿತ್ರ 'ಎಕ್ಸ್ ಟ್ರಾಡಿನರಿ'.

Bollywood Movie Extraordinary to release this week

ಅತ್ಯಾಚಾರಕ್ಕೊಳಗಾದ, ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟ, ಗಂಡನಿಂದ ಶೋಷಣೆಗೊಳಗಾದ, ಸಮಾಜದಿಂದ ನಿಂದನೆಗೊಳಗಾದ ಹತ್ತು ಮಹಿಳೆಯರನ್ನ ಸೇರಿಸಿಕೊಂಡು ಅವರನ್ನು ಉನ್ನತ ಸ್ಥಾನಕ್ಕೇರಿಸಲು ಪ್ರಯತ್ನಿಸುವ ದಿಟ್ಟ ಮಹಿಳೆಯಾಗಿ ರಿತುಪರ್ಣ ಸೇನ್ ಗುಪ್ತ 'ಎಕ್ಸ್ ಟ್ರಾಡಿನರಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕಳೆದ 20 ವರ್ಷಗಳಿಂದ ಮುಂಬೈನಲ್ಲಿ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ ಸುನಂದಾ ಶ್ಯಾಮಲ ಮಿತ್ರ, ಖುದ್ದು ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸಿರುವ ನಾಲ್ಕನೇ ಚಿತ್ರ 'ಎಕ್ಸ್ ಟ್ರಾಡಿನರಿ'.

Bollywood Movie Extraordinary to release this week

ಕೆ.ಜಿ.ಎನ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ರವಿ ಬಸಂತರ ಸಾಹಿತ್ಯ ಹೃಜುರಾಯ್ ಸಂಗೀತವಿದೆ. ಸತ್ಯಜಿತ್ ಶರ್ಮ, ಶಹಬಾದ್ ಖಾನ್, ಜಯಾಭಟ್ಟಾಚಾರ್ಯ, ಅಭಿಶೇಕ್ ಗುಪ್ತ ತಾರಾಗಣದಲ್ಲಿದ್ದಾರೆ. ಸಮಾಜದಲ್ಲಿ ಮಹಿಳೆಯರನ್ನ ಗೌರವಿಸುವವರು 'ಎಕ್ಸ್ ಟ್ರಾಡಿನರಿ' ಚಿತ್ರವನ್ನ ಮೆಚ್ಚುತ್ತಾರೆ ಅನ್ನುವ ನಂಬಿಕೆ ಚಿತ್ರತಂಡದ್ದು.

English summary
Bengali Actress Rituparna Sengupta acted Bollywood movie 'Extraordinary' to release all over India this week. 'Extraordinary' is directed by Sunandha Shyamala Mitra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada