»   » ಸ್ಯಾಂಡಲ್ ವುಡ್ ತಂತ್ರಜ್ಞರ ಬಾಲಿವುಡ್ ಸಿನಿಮಾ

ಸ್ಯಾಂಡಲ್ ವುಡ್ ತಂತ್ರಜ್ಞರ ಬಾಲಿವುಡ್ ಸಿನಿಮಾ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ತಂತ್ರಜ್ಞರೆಲ್ಲಾ ಸೇರಿ ಬಾಲಿವುಡ್ ಸಿನಿಮಾವೊಂದನ್ನ ನಿರ್ಮಿಸಿದ್ದಾರೆ. ಆ ಚಿತ್ರದ ಹೆಸರು 'ವಿದ್ಯಾರ್ಥಿ'. ವಿದ್ಯಾಭ್ಯಾಸಕ್ಕೆಂದು ಉತ್ತರ ಭಾರತದಿಂದ ಬೆಂಗಳೂರಿಗೆ ಬರುವ ವಿದ್ಯಾರ್ಥಿಗಳು, ಇಲ್ಲಿ ಪಡುವ ಪಾಡು, ತುಳಿಯುವ ಅಡ್ಡದಾರಿ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ 'ವಿದ್ಯಾರ್ಥಿ'.

ಅಸಲಿಗೆ 'ವಿದ್ಯಾರ್ಥಿ' ನೈಜ ಘಟನೆ ಆಧಾರಿತ ಚಿತ್ರ. ನಿರ್ದೇಶಕ ಎಸ್.ಎಸ್.ಚಂದ್ರು ಡಿಪ್ಲೊಮೋ ಓದುವಾಗ, ಅವರ ಜೊತೆಗಿದ್ದ ನಾಲ್ವರು ಹುಡುಗರ ಜೀವನದಲ್ಲಿ ನಡೆದ ಘಟನೆಯೇ 'ವಿದ್ಯಾರ್ಥಿ'. ಸ್ನೇಹಿತರ ಬದುಕ್ಕಲ್ಲಾದ ಕೆಲ ಸನ್ನಿವೇಶಗಳನ್ನೇ ಇಟ್ಟುಕೊಂಡು ಕಥೆ ರೆಡಿ ಮಾಡಿ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ ಎಸ್.ಎಸ್.ಚಂದ್ರು.

Bollywood Movie Vidyarthi ready to release

ಮರ್ಡರ್ ಮಿಸ್ಟ್ರಿಯಾಗಿರುವ 'ವಿದ್ಯಾರ್ಥಿ' ಸಿನಿಮಾ ಬೆಂಗಳೂರು, ತುಮಕೂರು ಹಾಗು ಶಿರಾ ಸುತ್ತಮುತ್ತ 20 ದಿನಗಳ ಚಿತ್ರೀಕರಣ ನಡೆಸಿದೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಈ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಮುಂಬೈ ಮೂಲದ ರಂಗಭೂಮಿ ಕಲಾವಿದರಾದ ಗೌರವ್, ಪುಷ್ಕರ್, ಮನೋಜ್, ನಾಗೇಶ್ ಮತ್ತು ಕನ್ನಡಿಗರಾದ ಪ್ರಸಾದ್, ಕವಿತಾ 'ವಿದ್ಯಾರ್ಥಿ'ಗಳಾಗಿದ್ದಾರೆ. 'ಯಾರೇ ಕೂಗಾಡಲಿ' ಮತ್ತು 'ವೀರ' ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದ ಎಸ್.ಎಸ್.ಚಂದ್ರು, 'ವಿದ್ಯಾರ್ಥಿ' ಮೂಲಕ ಸ್ವತಂತ್ರ ನಿರ್ದೇಶಕರಾಗುವ ಜೊತೆಗೆ ಬಾಲಿವುಡ್ ಗೂ ಪದಾರ್ಪಣೆ ಮಾಡುತ್ತಿದ್ದಾರೆ.

ಎಲ್ಲಾ ಕರ್ಮಿಶಿಯಲ್ ಅಂಶಗಳಿರುವ 'ವಿದ್ಯಾರ್ಥಿ' ಐಪಿಎಲ್ ಮುಗಿದ ನಂತ್ರ, ಚಿತ್ರಮಂದಿರ ಸಿಕ್ಕ ತಕ್ಷಣ ತೆರೆಗೆ ಬರಲಿದೆ. (ಫಿಲ್ಮಿಬೀಟ್ ಕನ್ನಡ)

English summary
Kannadiga SS Chandru directorial Bollywood flick 'Vidyarthi' is all set to release shortly. The movie is all about the students who face various problems after coming to Bangalore from North India.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada