»   » ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಲು ಬಂದ ಬೆಡಗಿ

ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಲು ಬಂದ ಬೆಡಗಿ

Posted By: ರವಿಕಿಶೋರ್
Subscribe to Filmibeat Kannada

ಈ ಬೊಂಬಾಟ್ ತಾರೆಯ ಹೆಸರು ಝೋಯಾ ಅಫ್ರೋಜ್. ಶೀಘ್ರದಲ್ಲೇ ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಲು ಬರುತ್ತಿದ್ದಾರೆ. ಈ ಮಾಜಿ ಮಿಸ್ ಇಂಡಿಯಾ 'ದಿ ಎಕ್ಸ್ ಪೋಸ್' ಎಂಬ ಚಿತ್ರದ ಮೂಲಕ ಬಾಲಿವುಡ್ ಗೆ ಅಡಿಯಿಡುತ್ತಿದ್ದಾರೆ.

'ದಿ ಎಕ್ಸ್ ಪೊಸ್' ಚಿತ್ರದಲ್ಲಿ ಬಿಕಿನಿ ಸನ್ನಿವೇಶಗಳಲ್ಲಿ ಝೋಯಾ ಪ್ರೇಕ್ಷಕರ ಕಣ್ಣು ತಂಪು ಮಾಡಲಿದ್ದಾರೆ. ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಬಿಕಿನಿ ತೊಟ್ಟ ಅನುಭವ ಧಾರಾವಾಳವಾಗಿದ್ದು ಈಗ ತೆರೆಯ ಮೇಲೆ ತಮ್ಮ ಅಂದಚೆಂದ, ವೈಯಾರ ಪ್ರದರ್ಶಿಸಲು ಬಂದಿದ್ದಾರೆ.


ಈ ಬಗ್ಗೆ ಮಾತನಾಡಿರುವ ಝೋಯಾ, "ಮಿಸ್ ಇಂಡಿಯಾ ಸ್ಪರ್ಧೆಗಳು ಈ ವಿಷಯದಲ್ಲಿ ನನಗೆ ತುಂಬಾ ಸಹಕಾರಿಯಾದವು. ಸ್ಪರ್ಧೆಯ ಭಾಗವಾಗಿ ನಾವು ನೂರಾರು ಮಂದಿ ಆಡಿಯನ್ಸ್ ಮುಂದೆ ಅನೇಕ ಸುತ್ತುಗಳಲ್ಲಿ ಬಿಕಿನಿಯಲ್ಲಿ ರ್‍ಯಾಂಪ್ ವಾಕ್ ಮಾಡಿದ್ದೇವೆ..."

"ಆ ಸಮಯದಲ್ಲಿ ಗೆಲುವಿನ ಬಗ್ಗೆ ಹೊರತುಪಡಿಸಿ ಇನ್ಯಾವುದರ ಬಗ್ಗೆಯೂ ಗಮನವಿರುತ್ತಿರಲಿಲ್ಲ. ನಮಗೆ ಸುಂದರವಾದ ದೇಹವಿದೆ. ಅದನ್ನು ಅಂದವಾಗಿ ಪ್ರದರ್ಶಿಸಬೇಕೆಂಬ ಆಲೋಚನೆ ಮಾತ್ರ ಇರುತ್ತಿತ್ತು. ಆ ಅನುಭವವೇ ನನಗೆ ಸಿನಿಮಾಗಳಲ್ಲಿ ಸ್ವಲ್ಪವೂ ಭಯವಿಲ್ಲದಂತೆ ಅಭಿನಯಿಸಲು ಸಹಕಾರಿಯಾಗಿದೆ" ಎಂದಿದ್ದಾರೆ.

ಏತನ್ಮಧ್ಯೆ ಶೂಟಿಂಗ್ ಸಮಯದಲ್ಲಿ ತನ್ನ ಸಹ ನಟಿ ಸೋನಾಲಿ ರೌತ್ ಮೇಲೆ ಜೋಯಾ ಕೈಮಾಡಿದರು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಆ ಮಾತುಗಳಲ್ಲಿ ಸತ್ಯಾಂಶವಿಲ್ಲ ಎಂದು ಝೋಯಾ ಸ್ಪಷ್ಟಪಡಿಸಿದ್ದಾರೆ. ಈ ರೀತಿಯ ಸುದ್ದಿಗಳು ಅದೇಗೆ ಹಬ್ಬಿದವೋ ನಾ ಕಾಣೆ. ಸೋನಾಲಿ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ.

Actress Zoya Afroz

ಆದರೆ ತೆರಯ ಮೇಲೆ ಮಾತ್ರ ನಾವಿಬ್ಬರೂ ಕಿತ್ತಾಡುವಂತಹ ಸಾಕಷ್ಟು ಸನ್ನಿವೇಶಗಳಿವೆ. ಬಹುಶಃ ಇದನ್ನೇ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಅನ್ನಿಸುತ್ತದೆ ಎಂದಿದ್ದಾರೆ ಝೋಯಾ. 'ದಿ ಎಕ್ಸ್ ಫೋಸ್' ಚಿತ್ರದಲ್ಲಿ ಝೋಯಾ ಜೊತೆಗೆ ಹಿಮೇಶ್ ರೇಷ್ಮಿಯಾ, ಇರ್ಫಾನ್ ಖಾನ್, ಹನಿ ಸಿಂಗ್, ಸೋನಾಲಿ ರೌತ್ ಮುಂತಾದವರು ಅಭಿನಯಿಸಿದ್ದಾರೆ. ಮೇ 16ರಂದು ಚಿತ್ರ ತೆರೆಕಾಣುತ್ತಿದೆ. ಆನಂದ್ ಮಹದೇವನ್ ಆಕ್ಷನ್ ಕಟ್ ಹೇಳಿರುವ ಚಿತ್ರ.
English summary
Former Miss India, Zoya Afroz who is all set to make her debut in Bollywood as a lead actress in the upcoming movie The Xpose says that she had no problem shooting in a bikini in the film. Thanks to the prior experience she gathered during her Miss Indian pageant.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada