For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್‌ ಖ್ಯಾತ ನಟರ ನಿಜವಾದ ಹೆಸರುಗಳು ಇಲ್ಲಿವೆ ನೋಡಿ

  |

  ಸಿನಿಮಾದಲ್ಲಿ ಖ್ಯಾತರಾಗಲು ಪ್ರತಿಭೆಯ ಜೊತೆಗೆ ಚೆಂದದ ಹೆಸರೂ ಸಹ ಬೇಕು! ಹೌದು, ಈಗಿರುವ ಬಹುತೇಕ ನಟ-ನಟಿಯರ ಆನ್‌ ಸ್ಕ್ರೀನ್ ಹೆಸರು ನಕಲಿ, ಅವರ ಸ್ವಂತ ಹೆಸರುಗಳು ಬೇರೆಯೇ ಇದೆ.

  ಮಾಸ್ಕ ಇಲ್ಲದಿದ್ದರೆ ಸೃಜನ್ ಲೋಕೇಶ್ ಹೇಳಿದ ಹಾಗೆ ಮಾಡಿ | Srujan Lokesh | Mask | filmibeat Kannada

  ಆಕರ್ಷಕವಾಗಿರಲೆಂದು, ಸಂಖ್ಯಾಶಾಸ್ತ್ರದ ಪ್ರಕಾರ, ಈಗಾಗಲೇ ತಮ್ಮದೇ ಹೆಸರಿನ ನಟ-ನಟಿಯರು ಉದ್ಯಮದಲ್ಲಿದ್ದರೆ ಹೀಗೆ ಹಲವು ಕಾರಣಗಳಿಗೆ ಸಿನಿಮಾ ಮಂದಿ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ.

  ಈ ಹೆಸರು ಬದಲಾಯಿಸಿಕೊಳ್ಳುವ ಸಂಪ್ರದಾಯ ಇಂದು ನಿನ್ನೆಯದಲ್ಲ, ಬಹುವರ್ಷಗಳಿಂದಲೂ ಸಿನಿಮಾಕ್ಕಾಗಿ ಹೆಸರು ಬದಲಾಯಿಸಿಕೊಳ್ಳುವ ಸಂಪ್ರದಾಯ ನಡೆಯುತ್ತಲೇ ಬಂದಿದೆ. ಬಾಲಿವುಡ್‌ ನ ಕೆಲವು ಖ್ಯಾತ ನಟ-ನಟಿಯರ ನಿಜವಾದ ಹೆಸರುಗಳ ಪಟ್ಟಿ ಇಲ್ಲಿ ಕೊಡಲಾಗಿದೆ.

  ಅಮಿತಾಬ್ ಬಚ್ಚನ್ ನಿಜವಾದ ಹೆಸರೇನು?

  ಅಮಿತಾಬ್ ಬಚ್ಚನ್ ನಿಜವಾದ ಹೆಸರೇನು?

  ಭಾರತೀಯ ಸಿನಿ ರಂಗದ ದೊಡ್ಡ ನಟರಲ್ಲೊಬ್ಬರಾದ ಅಮಿತಾಬ್ ಬಚ್ಚನ್ ಅವರ ನಿಜವಾದ ಹೆಸರು ಇನ್‌ಕ್ವಿಲಾಬ್ ಶ್ರೀವತ್ಸ. ಅಮಿತಾಬ್ ತಂದೆ ಕವಿಯಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರು ಸಹ ಹಾಗಾಗಿ ಮಗನಿಗೆ ಇನ್‌ಕ್ವಿಲಾಬ್ ಎಂದು ಹೆಸರಿಟ್ಟಿದ್ದರು.

  ಸಲ್ಮಾನ್ ಖಾನ್ ನಿಜವಾದ ಹೆಸರು ಇದೇ ನೋಡಿ

  ಸಲ್ಮಾನ್ ಖಾನ್ ನಿಜವಾದ ಹೆಸರು ಇದೇ ನೋಡಿ

  ಖ್ಯಾತ ನಟ ಸಲ್ಮಾನ್ ಖಾನ್ ನಿಜ ನಾಮಧೇಯ ಅಬ್ದುಲ್ ರಷೀದ್, ಪೂರ್ತಿ ಹೆಸರು ಅಬ್ದುಲ್ ರಷೀದ್ ಸಲೀಂ ಖಾನ್. ಆದರೆ ಸಿನಿಮಾಕ್ಕಾಗಿ ಅಬ್ದುಲ್ ರಷೀದ್ ಸಲ್ಮಾನ್ ಖಾನ್ ಆದರು.

  ಅಕ್ಷಯ್ ಕುಮಾರ್ ಗೆ ಇತ್ತು ಉದ್ದದ ಹೆಸರು

  ಅಕ್ಷಯ್ ಕುಮಾರ್ ಗೆ ಇತ್ತು ಉದ್ದದ ಹೆಸರು

  ನಟ ಅಕ್ಷಯ್ ಕುಮಾರ್ ನಿಜವಾದ ಹೆಸರು ರಾಜೀವ್ ಹರಿ ಓಂ ಭಾಟಿಯಾ. ಅವರು ಸಿನಿಮಾ ಪ್ರವೇಶ ಮಾಡಿದ ಮೇಲೆ ಹೆಸರನ್ನು ಬದಲಾಯಿಸಿಕೊಂಡರು. ಎಷ್ಟುದ್ದ ಹೆಸರು ಹೊಂದಿದ್ದಾರಲ್ಲವೇ ಅಕ್ಷಯ್ ಕುಮಾರ್.

  ಸನ್ನಿ ಲಿಯೋನಿ ನಿಜವಾದ ಹೆಸರೇನು?

  ಸನ್ನಿ ಲಿಯೋನಿ ನಿಜವಾದ ಹೆಸರೇನು?

  ನಟಿ ಸನ್ನಿ ಲಿಯೋನಿ ಭಾರತೀಯ ಮೂಲದವರು ಎಂಬುದು ಬಹುತೇಕರಿಗೆ ಗೊತ್ತಿದೆ. ಆದರೆ ಅವರ ನಿಜವಾದ ಹೆಸರು ಕರನ್‌ಜೀತ್ ಕೌರ್ ವೊಹ್ರಾ ಎಂದು. ಕೆನಡಾದ ನಾಗರೀಕರಾಗಿದ್ದ ಅವರು ಈಗ ಭಾರತೀಯ ಪೌರತ್ವ ಪಡೆದು ಇಲ್ಲಿಯೇ ವಾಸಿಸುತ್ತಿದ್ದಾರೆ.

  ಹೆಸರಿನಿಂದ ಸಮಸ್ಯೆಗೆ ಸಿಲುಕಿದ್ದ ಸನ್ನಿ ಡಿಯೋಲ್

  ಹೆಸರಿನಿಂದ ಸಮಸ್ಯೆಗೆ ಸಿಲುಕಿದ್ದ ಸನ್ನಿ ಡಿಯೋಲ್

  ನಟ ಸನ್ನಿ ಡಿಯೋಲ್ ತಮ್ಮ ನಿಜ ಹೆಸರಿನಿಂದ ಸಮಸ್ಯೆಗೆ ಸಿಲುಕಿದ್ದರು. ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮತಯಂತ್ರದಲ್ಲಿ ಅವರ ನಿಜನಾಮಧೇಯ ಅಜಯ್ ಸಿಂಗ್ ಡಿಯೋಲ್ ಎಂದು ಮುದ್ರಿಸಲಾಗಿತ್ತು. ಸನ್ನಿ ಡಿಯೋಲ್ ಎಂದೇ ಪರಿಚಿತವಾಗಿರುವ ಅವರಿಗೆ ಇದು ಆತಂಕ ತಂದಿತ್ತು, ಆದರೆ ಜನ ಗೊಂದಲಕ್ಕೀಡಾಗಲಿಲ್ಲ. ಸನ್ನಿ ಡಿಯೋಲ್ ಚುನಾವಣೆ ಗೆದ್ದರು.

  ಮಲ್ಲಿಕಾ ಶೆರಾವತ್ ನಿಜವಾದ ಹೆಸರಿದು

  ಮಲ್ಲಿಕಾ ಶೆರಾವತ್ ನಿಜವಾದ ಹೆಸರಿದು

  ಬಾಲಿವುಡ್‌ ನ ಮತ್ತೊಬ್ಬ ಮಾದಕ ನಟಿ ಮಲ್ಲಿಕಾ ಶೆರಾವತ್ ನಿಜವಾದ ಹೆಸರು ರೀಮಾ ಲಂಬಾ. ಹರಿಯಾಣಾದ ಹಿಸರ್ ಜಿಲ್ಲೆಯ ಸಣ್ಣ ಹಳ್ಳಿಯೊಂದರಲ್ಲಿ ಜನಿಸಿದ ಇವರು, ನಂತರ ಹಾಲಿವುಡ್ ಸಿನಿಮಾಗಳಲ್ಲಿ ಸಹ ನಟಿಸಿದರು.

  ಕತ್ರಿನಾ ಕೈಫ್ ನಿಜ ಹೆಸುರ ಉಚ್ಛಾರಣೆಯೇ ಕಷ್ಟ

  ಕತ್ರಿನಾ ಕೈಫ್ ನಿಜ ಹೆಸುರ ಉಚ್ಛಾರಣೆಯೇ ಕಷ್ಟ

  ನಟಿ ಕತ್ರೀನಾ ಕೈಫ್ ತಮ್ಮ ಹೆಸರು ಬದಲಾಯಿಸಿಕೊಂಡು ಒಳ್ಳೆಯದು ಮಾಡಿದರು. ಅವರ ಹೆಸರಿನ ಉಚ್ಛಾರಣೆಯೇ ಕಷ್ಟ. ಸಾವರ ನಿಜವಾದ ಹೆಸರು ಕೇಟ್ ಟುರ್ಕೌಟ್ಟೆ. ಅರ್ಧ ಭಾರತೀಯ ಅರ್ಧ ಬ್ರಟೀಶ್ ಆಗಿರುವ ಈ ನಟಿ ಬಹು ವರ್ಷದಿಂದ ಭಾರತದಲ್ಲಿಯೇ ನೆಲಸಿದ್ದಾರೆ.

  ದಿಲೀಪ್ ಕುಮಾರ್ ನಿಜ ಹೆಸರು ಯೂಸಫ್ ಖಾನ್!

  ದಿಲೀಪ್ ಕುಮಾರ್ ನಿಜ ಹೆಸರು ಯೂಸಫ್ ಖಾನ್!

  ಬಾಲಿವುಡ್ ದಂತಕತೆ ದಿಲೀಪ್ ಕುಮಾರ್ ಅವರ ನಿಜವಾದ ಹೆಸರು ಯೂಸಫ್ ಖಾನ್. ಬಾಲಿವುಡ್‌ನ ಮೊದಲ ಖಾನ್ ಸಹ ಅವರೇ. ಬಹಳ ಆಕಸ್ಮಿಕವಾಗಿ ಚಿತ್ರರಂಗ ಪ್ರವೇಶಿಸಿದ ಅವರು ಗೆಳೆಯರ ಒತ್ತಾಯದ ಮೇರೆಗೆ ದಿಲೀಪ್ ಕುಮಾರ್ ಎಂದು ಹೆಸರು ಬದಲಿಸಿಕೊಂಡರು.

  ಪ್ರೀತಿ ಜಿಂಟಾ ನಿಜವಾದ ಹೆಸರಿದು

  ಪ್ರೀತಿ ಜಿಂಟಾ ನಿಜವಾದ ಹೆಸರಿದು

  ಖ್ಯಾತ ನಟಿ ಪ್ರೀತಿ ಜಿಂಟಾ ತಮ್ಮ ಮುದ್ದು-ಮುದ್ದು ಮುಖ ನಟನೆಯಿಂದ ಖ್ಯಾತರು. ಅವರ ನಿಜವಾದ ಹೆಸರು ಪ್ರಿತಂ ಜಿಂಟಾ ಸಿಂಗ್. ಸಿನಿಮಾಕ್ಕಾಗಿ ಅವರು ಹೆಸರು ಬದಲಾಯಿಸಿಕೊಂಡರು.

  English summary
  Many Bollywood stars different from their screen names. Here is the list of famous actors and actress who changed their name for movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X