For Quick Alerts
  ALLOW NOTIFICATIONS  
  For Daily Alerts

  ಕಾಮಿಡಿ ಸ್ಟಾರ್ ರಾಜಪಾಲ್ ಯಾದವ್ ಬಂಧನ

  By Mahesh
  |

  ಹಿಂದಿ ಚಿತ್ರರಂಗದ ಟಾಪ್ ಕಾಮಿಡಿ ಸ್ಟಾರ್ ರಾಜ್ ಪಾಲ್ ಯಾದವ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ರಾಜ್ ಪಾಲ್ ಯಾದವ್ ಹಾಗೂ ಅವರ ಪತ್ನಿ ಇಬ್ಬರು ಫೋರ್ಜರಿ ಕೇಸ್ ನಲ್ಲಿ ಫಿಟ್ ಆಗಿದ್ದಾರೆ. ದೆಹಲಿ ಮೂಲದ ಕಂಪನಿ ಯಾದವ್ ದಂಪತಿ ಮೇಲೆ ಕೇಸ್ ಹಾಕಿದ್ದು, 5 ಕೋಟಿ ರುಗೂ ಅಧಿಕ ನಷ್ಟದ ಬಾಬ್ತು ಕೊಡಿಸುವಂತೆ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದಾರೆ.

  ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ರಾಜಪಾಲ್ ಯಾದವ್ ಅವರನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

  ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಈ ಬಗ್ಗೆ ಮಂಗಳವಾರ (ಡಿ.3) ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ರಾಜಪಾಲ್ ಯಾದವ್ ಅವರನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಜತೆಗೆ ಯಾದವ್ ಅವರ ಪತ್ನಿಯನ್ನು ರಿಜಿಸ್ಟ್ರಾರ್ ಜನರಲ್ ಕಚೇರಿಯಲ್ಲಿ ವಿಚಾರಣೆ ಮುಗಿಯುವ ತನಕ ಹಾಜರಿರುವಂತೆ ನ್ಯಾ. ಎಸ್ ಮುರಳಿಧರ್ ಸೂಚಿಸಿದ್ದಾರೆ.

  ದಂಪತಿಗಳ ಪರ ವಾದಿಸಿದ ಇಬ್ಬರು ವಕೀಲರಿಗೆ ನ್ಯಾ. ಮುರಳಿಧರನ್ ಛೀಮಾರಿ ಹಾಕಿ, ಕೋರ್ಟ್ ಸಮಯ ವ್ಯರ್ಥ ಮಾಡಿದ್ದಕ್ಕೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದ್ದಾರೆ.

  ಈ ಪ್ರಕರಣಕ್ಕೂ ಮುನ್ನ ಇನ್ನೊಬ್ಬ ಅತಿ ಜನಪ್ರಿಯ ಕಾಮಿಡಿಯನ್ ಕಪಿಲ್ ಶರ್ಮ ಕೂಡಾ ಕಾನೂನಿನ ಹಿಡಿತಕ್ಕೆ ಒಳಪಟ್ಟಿದ್ದರು. ತೆರಿಗೆ ವಂಚನೆ ಆರೋಪ ಹೊತ್ತಿದ್ದ ಕಪಿಲ್ ರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

  ಕಲರ್ಸ್ ವಾಹಿನಿಯ 'ಕಾಮಿಡಿ ನೈಟ್ಸ್ ವಿತ್ ಕಪಿಲ್' ಖ್ಯಾತಿಯ ಕಪಿಲ್ ಶರ್ಮ ಅವರು ಸುಮಾರು 65 ಲಕ್ಷ ರು ಸೇವಾ ತೆರಿಗೆ ವಂಚಿಸಿದ ಆರೋಪ ಹೊತ್ತಿದ್ದಾರೆ. ಶೀಘ್ರದಲ್ಲೇ ಸೇವಾ ತೆರಿಗೆ ಕಟ್ಟದಿದ್ದರೆ ಕಪಿಲ್ ಅವರ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.(ಐಎಎನ್ ಎಸ್ ಮೂಲಗಳಿಂದ)

  English summary
  The star comedian of Bollywood -Rajpal Yadav has been arrested in connection with a forgery case. Yadav and his wife have been accused of concealing facts about a Rs 5 crore recovery suit filed against them by a Delhi-based entrepreneur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X