»   » ಹೊಸ ಟ್ರೆಂಡ್ : ರಿಯಲ್ ಸ್ಟೋರಿ ರೀಲ್ ಆದಾಗ

ಹೊಸ ಟ್ರೆಂಡ್ : ರಿಯಲ್ ಸ್ಟೋರಿ ರೀಲ್ ಆದಾಗ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನಲ್ಲಿ ಈಗ ಹೊಸ ಟ್ರೆಂಡ್ ಹುಟ್ಟುಕೊಂಡಿದೆ. ಭಾರತದ ಹೆಮ್ಮೆಯ ಅಥ್ಲೀಟ್ ಮಿಲ್ಕಾ ಸಿಂಗ್ ಅವರ ಜೀವನ ಚರಿತ್ರೆ ಚಲನಚಿತ್ರವಾಗಿ ಯಶಸ್ಸು ಗಳಿಸಿದೆ. ಬಾಕ್ಸರ್ ಮೇರಿ ಕೋಮ್ ಜೀವನವನ್ನು ಪ್ರಿಯಾಂಕಾ ಛೋಪ್ರಾ ಅವರ ಪ್ರಮುಖ ಭೂಮಿಕೆಯಲ್ಲಿ ತೆರೆಗೆ ತರಲಾಗುತ್ತಿದೆ. ಈಗ ಈ ಪಟ್ಟಿಗೆ ಹೊಸದಾಗಿ ಟೀಂ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹಮ್ಮದ್ ಅಜರುದ್ದೀನ್ ಅವರ ಹೆಸರು ಸೇರಿಕೊಂಡಿರುವ ಸುದ್ದಿ ಓದಿರುತ್ತೀರಿ

ರಿಯಲ್ ಸ್ಟೋರಿಗಳನ್ನು ರೀಲ್ ಸ್ಟೋರಿ ಮಾಡಿ ತರುವುದು ಹೊಸ ವಿಷಯವೇನಲ್ಲ. ಆದರೆ, ಹಿಂದಿ ಚಿತ್ರರಂಗದಲ್ಲಿ ಈ ಹಿಂದೆ ಬಂದ ಚಿತ್ರರಂಗದಲ್ಲಿ ಬಂದ ಜೀವನ ಚರಿತ್ರೆ ಆಧರಿಸಿದ ಚಿತ್ರಗಳು ಸೋತಾಗ ವಿಮರ್ಶಕರು ಕಟು ಶಬ್ದಗಳಿಂದ ಟೀಕಿಸಿದ್ದರು. ಆದರೆ, ಈ ರೀತಿ ಚಿತ್ರಗಳು ಸೆಟ್ಟೇರುವುದು ಕಡಿಮೆಯಾಗಿಲ್ಲ, ಅಥ್ಲೀಟ್ ಮಿಲ್ಕಾಸಿಂಗ್ ಜೀವನ ಕುರಿತ ಚಿತ್ರ ಕ್ಲಿಕ್ ಆಗಿದ್ದೇ ಅನೇಕ ಚಿತ್ರಗಳು ನಿರ್ಮಾಣಕ್ಕೆ ಸಿದ್ಧವಾಗುತ್ತಿವೆ. ಈ ರೀತಿ ಈ ಹಿಂದೆ ಬಂದ ಪ್ರಮುಖ ಚಿತ್ರಗಳ ಝಲಕ್ ಇಲ್ಲಿದೆ...

ಬ್ಯಾಂಡೀಟ್ ಕ್ವೀನ್

ಸೀಮಾ ಬಿಸ್ವಾಸ್ ಅಭಿನಯದ 1994ರಲ್ಲಿ ತೆರೆ ಕಂಡ ಬ್ಯಾಂಡೀಟ್ ಕ್ವೀನ್ ಚಿತ್ರ ಚಂಬಲ್ ಕಣಿವೆಯ ಪೂಲನ್ ದೇವಿ ಜೀವನ ಕಥೆ ಆಧರಿಸಿದೆ.

ಪಾನ್ ಸಿಂಗ್ ತೋಮರ್

2010ರಲ್ಲಿ ತೆರೆ ಕಂಡ ಪಾನ್ ಸಿಂಗ್ ತೋಮಾರ್ ಚಿತ್ರ ಅಥ್ಲೀಟ್ ಪಾನ್ ಸಿಂಗ್ ಅವರ ಜೀವನ ಆಧರಿಸಿದೆ. ಓಟದಲ್ಲಿ ಚಿನ್ನ ಗೆದ್ದ ಅಥ್ಲೀಟ್ ನಂತರ ನಕ್ಸಲ್ ಕ್ರೈಂ ಹಾದಿ ಹಿಡಿದ ಕಥೆಯನ್ನು ಟಿಗ್ಮಂಷು ಧುಲಿಯಾ ನಿರ್ದೇಶಿಸಿದ್ದರು.

ಡರ್ಟಿ ಪಿಕ್ಚರ್

ದಕ್ಷಿಣ ಭಾರತದ ಹಾಟ್ ತಾರೆ ಸಿಲ್ಕ್ ಸ್ಮಿತಾ ಅವರ ಜೀವನ ಆಧರಿಸಿ ತೆರೆಗೆ ಬಂದ ಏಕ್ತಾ ಕಪೂರ್ ನಿರ್ಮಾಣದ ಡರ್ಟಿ ಪಿಕ್ಚರ್ ಚಿತ್ರ ಭರ್ಜರಿ ಹಿಟ್ ಆಯಿತು. ವಿದ್ಯಾಬಾಲನ್ ಹೊಸ ಸ್ಟಾರ್ ಆಗಿ ಬೆಳೆದರು.

ಚಕ್ ದೇ ಇಂಡಿಯಾ

ಕ್ರೀಡಾಭಿಮಾನಿಗಳ ಹೊಸ ಮಂತ್ರವಾಗಿ 'ಚಕ್ ದೇ ಇಂಡಿಯಾ' ಯಶಸ್ವಿಯಾಯಿತು. ಯಶ್ ರಾಜ್ ಬ್ಯಾನರ್ ನಲ್ಲಿ ತೆರೆ ಕಂಡ 2007ರ ಚಿತ್ರದಲ್ಲಿ ಶಾರುಖ್ ಖಾನ್ ಅವರು ಮಹಿಳಾ ಹಾಕಿ ತಂಡದ ಕೋಚ್ ಆಗಿ ಕಾಣಿಸಿಕೊಂಡಿದ್ದು ವಿಶೇಷ

ಅಂಬಾನಿ-ಗುರು

ಮಣಿರತ್ನಂ ನಿರ್ದೇಶನದ ಧೀರೂಬಾಯಿ ಅಂಬಾನಿ ಜೀವನ ಕುರಿತ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಉತ್ತಮ ಅಭಿನಯದ ನಡುವೆ ಚಿತ್ರ ಹೆಚ್ಚುಗಳಿಕೆ ಮಾಡಲಿಲ್ಲ. ವಿಮರ್ಶಕರಿಂದ ಹೊಗಳಿಕೆ ಪಡೆಯಿತು.

ಮಂಗಲ್ ಪಾಂಡೆ

ಮಂಗಲ್ ಪಾಂಡೆ ದಿ ರೈಸಿಂಗ್ ಚಿತ್ರ 1857ರ ಸ್ವಾತಂತ್ರ್ಯ ಸಂಗ್ರಾಮದ ಕುರಿತ ಚಿತ್ರವಾದರೂ ಮಂಗಲ್ ಪಾಂಡೆ ಜೀವನದ ಕಥೆಯನ್ನು ಆಧರಿಸಿತ್ತು. ಆಮೀರ್ ಖಾನ್ ಉತ್ತಮ ಅಭಿನಯದ ನಡುವೆಯೂ ಚಿತ್ರ ಬಾಕ್ಸಾಫೀಸ್ ನಲ್ಲಿ ಸೋತಿತ್ತು.

ರಂಗ್ ದೇ ಬಸಂತಿ

ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಅವರಿಗೆ ಸ್ಟಾರ್ ಪಟ್ಟ ತಂದು ಕೊಟ್ಟ ಮೊದಲ ಚಿತ್ರ ರಂಗ್ ದೇ ಬಸಂತಿ, ಭಗತ್ ಸಿಂಗ್, ಚಂದ್ರಶೇಖರ್ ಅಜಾದ್ ಮುಂತಾದ ಕ್ರಾಂತಿಕಾರರ ಜೀವನದ ಘಟನೆಗಳನ್ನು ಆಧರಿಸಿ ಬಂದ ಸುಂದರ ಚಿತ್ರವಾಗಿದೆ. ಇನ್ನಷ್ಟು ನಿರೀಕ್ಷಿಸಿ...

ಒನ್ಸ್ ಅಪನ್ ಎ ಟೈಮ್ ಇನ್ ಮುಂಬೈ

ಅಜಯ್ ದೇವಗನ್, ಇಮ್ರಾನ್ ಹಶ್ಮಿ, ಪ್ರಾಚಿ ದೇಸಾಯಿ ಹಾಗೂ ಕಂಗನಾ ರಾನೌತ್ ಅಭಿನಯದ ಈ ಚಿತ್ರ 1993 ಮುಂಬೈ ಸ್ಫೋಟ ಗ್ಯಾಂಗ್ ಸ್ಟರ್ ಹಾಜಿ ಮಸ್ತಾನ್ ಜೀವನ ಆಧರಿಸಿದೆ. ಈ ಚಿತ್ರದ ಎರಡನೇ ಅವತರಣಿಕೆ ತೆರೆಗೆ ಬರುತ್ತಿದ್ದು, ತಾರಾಗಣದಲ್ಲಿ ಬದಲಾವಣೆ ಮಾಡಲಾಗಿದೆ.

ನೇತಾಜಿ ಸುಭಾಷ್ ಚಂದ್ರ ಬೋಸ್

ಶ್ಯಾಮ್ ಬೆನಗಲ್ ಅವರ ನೇತಾಜಿ ಸುಭಾಷ್ ಚಂದ್ರ ಬೋಸ್: ದಿ ಫರ್ಗಾಟನ್ ಹೀರೋ ಎಂಬ ಚಿತ್ರ ವೀರ ಭಾರತೀಯ ಸೇನಾನಿಯ ಕಥೆಯನ್ನು ಹೇಳಲು ಹೊರಟ್ಟಿತ್ತು. ಸಚಿನ್ ಖೆಡೆಕರ್ ಅವರು ನೇತಾಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಎರಡು ರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಚಿತ್ರ ಹಣ ಗಳಿಕೆ ಮಾತ್ರ ಮಾಡಲಿಲ್ಲ.

ಬಾಕ್ಸರ್ ಮೇರಿ ಕೋಮ್

ಪ್ರಿಯಾಂಕಾ ಛೋಪ್ರಾ ಅಭಿನಯದ ಬಾಕ್ಸರ್ ಮೇರಿ ಕೋಮ್ ಜೀವನ ಚರಿತ್ರೆ ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ತೆರೆಗೆ ತರುತ್ತಿದ್ದಾರೆ.

ಕಿಶೋರ್ ಕಥೆ ತೆರೆಗೆ?

ಗಾಯಕ, ನಟ ಕಿಶೋರ್ ಕುಮಾರ್ ಅವರ ವೈಯಕ್ತಿಕ ಬದುಕು ಆಧರಿಸಿದ ಚಿತ್ರವನ್ನು ಅನುರಾಗ್ ಬಸು ತೆರೆಗೆ ತರಲು ಸಿದ್ಧರಾಗುತ್ತಿದ್ದಾರೆ. ರಣಬೀರ್ ಕಪೂರ್ ಕಿಶೋರ್ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದು, ಕಿಶೋರ್ ಅವರ ನಾಲ್ಕು ಮದುವೆ, ಪ್ರೇಮ ವೈಫಲ್ಯ ಎಲ್ಲವೂ ನೈಜವಾಗಿ ಬಿಂಬಿಸಲು ಹೊರಟ್ಟಿದ್ದಾರೆ ನಿರ್ದೇಶಕ ಬಸು

ಎಂಎಸ್ ಸುಬ್ಬಲಕ್ಷ್ಮಿ

ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಎಂಎಸ್ ಸುಬ್ಬಲಕ್ಷ್ಮಿ ಅವರ ಜೀವನ ಕುರಿತ ಚಿತ್ರದಲ್ಲಿ ವಿದ್ಯಾ ಬಾಲನ್ ಅವರು ನಟಿಸುತ್ತಿದ್ದಾರೆ.

ದಶರಥ್ ಮಾನ್ಜಿ

ದಶರಥ್ ಮಾನ್ಜಿ ಬಗ್ಗೆ ಒಲವೇ ಮಂದಾರ ಕನ್ನಡ ಚಿತ್ರದಲ್ಲಿ ಉಪಕಥೆಯಾಗಿ ತೋರಿಸಲಾಗಿದೆ. ಪ್ರೇಮಕ್ಕಾಗಿ ಬೆಟ್ಟವನ್ನು ಕಡಿದು ದಂತಕಥೆಯಾದ ಮೌಂಟೇನ್ ಮ್ಯಾನ್ ಎಂದು ಬಣ್ಣಿಸಲಾಗಿದೆ. ಕೇತನ್ ಮೆಹ್ತಾ ಅವರು ಪ್ರತಿಭಾವಂತ ನಟ ನಾವಾಜುದ್ದೀನ್ ಸಿದ್ದಿಕಿ ನಾಯಕತ್ವದಲ್ಲಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.

ಭಾಗ್ ಮಿಲ್ಕಾ ಭಾಗ್

ಗಳಿಕೆ, ಜನಪ್ರಿಯತೆ ಎಲ್ಲದರಲ್ಲೂ ಟಾಪ್ ಸ್ಥಾನಕ್ಕೇರಿ ಹೊಸ ಟ್ರೆಂಡ್ ಹುಟ್ಟುಹಾಕಿರುವ ಮಿಲ್ಕಾಸಿಂಗ್ ಚಿತ್ರಕ್ಕೆ ಸ್ವತಃ ಮಿಲ್ಕಾ ಸಿಂಗ್ ಅವರು ಕೂಡಾ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಫರ್ಹಾನ್ ಅಖ್ತರ್ ಅಭಿನಯದ ಚಿತ್ರವನ್ನು ಓಂಪ್ರಕಾಶ್ ಮೆಹ್ರಾ ಸಮರ್ಥವಾಗಿ ತೆರೆಗೆ ತಂದಿದ್ದಾರೆ. ಚಿತ್ರದ ವಿಮರ್ಶೆ ಓದಿ

English summary
After legendary athlete Milkha Singh and ace boxer Mary Kom, its time for Mohammad Azharuddin's life to feature on celluloid. Here is list of biopics appeared in Hindi cinema arena

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada