For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರಾಗೆ ಮಧ್ಯಂತರ ರಿಲೀಫ್: ಆಗಸ್ಟ್ 25ಕ್ಕೆ ಜಾಮೀನು ಅರ್ಜಿ ವಿಚಾರಣೆ

  |

  ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ, ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್ ಅಗಿದ್ದು, ಜೈಲಿನಲ್ಲಿದ್ದಾರೆ. ಈ ನಡುವೆ 2020ರಲ್ಲಿ ಮುಂಬೈ ಸೈಬರ್ ಪೊಲೀಸರು ದಾಖಲಿಸಿಕೊಂಡಿದ್ದ ಕೇಸ್ ಕುಂದ್ರಾಗೆ ಸಂಕಷ್ಟ ತಂದಿತ್ತು. ಈ ಕೇಸ್ ಸಂಬಂಧ ಬಾಂಬೆ ಹೈ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಕುಂದ್ರಾ ಮನವಿಯನ್ನು ಪುರಸ್ಕರಿಸಿರುವ ಹೈ ಕೋರ್ಟ್ ಒಂದು ವಾರಗಳ ಕಾಲ ರಿಲೀಫ್ ಕೊಟ್ಟಿದೆ.

  ಸೈಬರ್ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣದಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಆಗಸ್ಟ್ 25 ರಂದು ವಿಚಾರಣೆ ಮಾಡಲಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

  ರಾಜ್ ಕುಂದ್ರಗೆ ಮತ್ತೊಂದು ಸಂಕಷ್ಟ: ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮೊರೆರಾಜ್ ಕುಂದ್ರಗೆ ಮತ್ತೊಂದು ಸಂಕಷ್ಟ: ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮೊರೆ

  ರಾಜ್ ಕುಂದ್ರಾ ಸಲ್ಲಿಸಿರುವ ಅರ್ಜಿಯಲ್ಲಿ, "ಕಳೆದ ವರ್ಷ ಸೈಬರ್ ಪೊಲೀಸರು ಸಲ್ಲಿಸಿದ ಎಫ್ ಐ ಆರ್ ನಲ್ಲಿ ತನ್ನ ಹೆಸರು ಪ್ರತಿಫಲಿಸುವುದಿಲ್ಲ" ಎಂದು ಮನವಿ ಮಾಡಿರುವುದಾಗಿ ತಿಳಿದು ಬಂದಿದೆ. ಅಲ್ಲದೆ "ಪೊಲೀಸರಿಗೆ ವಿವರವಾದ ಹೇಳಿಕೆಯನ್ನು ನೀಡಿದ್ದೆ, ತನಿಖೆಗೆ ಸಹಕರಿಸಲು ಅನೇಕ ಸಂದರ್ಭಗಳಲ್ಲಿ ತನಿಖಾಧಿಕಾರಿ ಕಚೇರಿಗೆ ಭೇಟಿ ನೀಡಿದ್ದೆ, ಸಂಬಂಧಪಟ್ಟ ಅಧಿಕಾರಿಯಿಂದ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಒದಗಿಸಿರುವುದಾಗಿ" ಹೇಳಿದ್ದಾರೆ ಹಾಗೂ ಪ್ರಾಸಿಕ್ಯೂಷನ್ ಸಾಕ್ಷಿಗಳ ಹೇಳಿಕೆಗಳನ್ನು ಸಹ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

  ಕುಂದ್ರಾ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಸಂದೀಪ್ ಕೆ ಶಿಂಧೆ ಅವರ ಏಕಸದಸ್ಯ ಪೀಠವು 2020ರ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಕುಂದ್ರಾ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಲಿದ್ದಾರೆ.

  ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ರಾಜ್ ಕುಂದ್ರಾಗೆ ಸೆಷನ್ ಕೋರ್ಟ್‌ನಲ್ಲಿ ಜಾಮೀನು ನಿರಾಕರಿಸಿತ್ತು. ನಂತರ ಹೈ ಕೋರ್ಟ್‌ ಮೊರೆ ಹೋಗಿದ್ದರು. ಕುಂದ್ರಾ ಇತರೆ 11 ಜನರನ್ನು ಜುಲೈ 19 ರಂದು ಬಂಧಿಸಲಾಯಿತು. ಒಂದು ವಾರ ಪೊಲೀಸ್ ಕಸ್ಟಡಿಯಲ್ಲಿಟ್ಟುಕೊಂಡು ವಿಚಾರಣೆ ಮಾಡಿದರು. ನಂತರ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.

  2020 ಫೆಬ್ರವರಿಯಲ್ಲಿ ಆರ್ಮ್ ಸ್ಪ್ರೈಮ್ ಮೀಡಿಯಾ ಪ್ರೈವೆಟ್ ಲಿಮಿಟೆಡ್ ಹೆಸರಿನಲ್ಲಿ ಹೂಡಿಕೆ ಮಾಡಲು ಪರಿಚಯಸ್ಥರೊಬ್ಬರು ಅವರನ್ನು ಸಂಪರ್ಕಿಸಿದ್ದರು. ಇದು ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಗ್ರಾಹಕರೊಂದಿಗೆ ಸಂವಹನ ನಡೆಸಲು ಡಿಜಿಟಲ್ ವೇದಿಕೆಯನ್ನು ಒದಗಿಸುವಲ್ಲಿ ನಿರತವಾಗಿತ್ತು. ಬಳಿಕ ಹೂಡಿಕೆ ಮಾಡಿದರು. 2019 ರಿಂದ 2020ರ ವರೆಗೂ ಮಾತ್ರ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದೇನೆ. ಆದರೆ ಯಾವುದೇ ಕಟ್ಟಡ ಮತ್ತು ಸ್ಕ್ರಿಪ್ಟ್ ಕೆಲಸದಲ್ಲಿ ಭಾಗಿಯಾಗಿಲ್ಲ ಎಂದು ರಾಜ್ ಕುಂದ್ರಾ ಹೇಳಿರುವುದಾಗಿ ತಿಳಿದು ಬಂದಿದೆ.

  ರಾಜ್ ಕುಂದ್ರಾ ಜೊತೆಗಿನ ಹಳೆಯ ಫೋಟೋ ಹಂಚಿಕೊಂಡ ಶೆರ್ಲಿನ್ ಚೋಪ್ರಾ ರಾಜ್ ಕುಂದ್ರಾ ಜೊತೆಗಿನ ಹಳೆಯ ಫೋಟೋ ಹಂಚಿಕೊಂಡ ಶೆರ್ಲಿನ್ ಚೋಪ್ರಾ

  ಈ ಪ್ರಕರಣದಲ್ಲಿ ನಟಿ ಶೆರ್ಲಿನ್ ಚೋಪ್ರಾ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ದೂರು ನೀಡಿದ್ದಾರೆ. 2020ರಲ್ಲಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಈಗ ಮುಂಬೈ ಕ್ರೈಂ ವಿಭಾಗದ ಪೊಲೀಸರ ಮುಂದೆ ವಿಚಾರಣೆಗೆ ಸಹ ಒಳಪಟ್ಟಿದ್ದರು. ವಿಚಾರಣೆ ವೇಳೆ ಕುಂದ್ರಾ ವಿರುದ್ಧ ಸಾಕಷ್ಟು ಮಾಹಿತಿ ಒದಗಿಸಿದ್ದು, ಗಂಭೀರ ಆರೋಪಗಳನ್ನು ಮಾಡಿದ್ದಾರೆ ಎಂದು ವರದಿಯಾಗಿದೆ.

  ಸುಮಾರು 8 ಗಂಟೆಗಳ ಕಾಲ ವಿಚಾರಣೆಗೆ ಒಳಪಟ್ಟಿದ್ದ ನಟಿಯ ಬಳಿ ಪೊಲೀಸರು ಸಾಕಷ್ಟು ವಿಚಾರಗಳನ್ನು ಪ್ರಶ್ನಿಸಿದ್ದರು. ''ರಾಜ್ ಕುಂದ್ರಾ ಅವರ ಆರ್ಮ್ಸ್‌ಪ್ರೈಮ್ ಸಂಸ್ಥೆ ಜೊತೆಗಿನ ಒಪ್ಪಂದ ಹೇಗಾಯಿತು ಮತ್ತು ಆ ಒಪ್ಪಂದಲ್ಲಿ ಯಾವೆಲ್ಲ ಅಂಶಗಳಿವೆ ಎಂದು ಶೆರ್ಲಿನ್ ಚೋಪ್ರಾಗೆ ಪೊಲೀಸರು ಪ್ರಶ್ನಿಸಿದ್ದಾರೆ. ಈ ಕೇಸ್‌ನಲ್ಲಿ ರಾಜ್ ಕುಂದ್ರಾ ಅವರ ಜೊತೆ ನಿಮ್ಮ ಸಂಬಂಧವೇನು? ಅವರ ಸಂಸ್ಥೆಯಲ್ಲಿ ಎಷ್ಟು ವಿಡಿಯೋಗಳಲ್ಲಿ ನೀವು ಪಾಲ್ಗೊಂಡಿದ್ರಿ'' ಎಂದು ವಿಚಾರಣೆಯಲ್ಲಿ ಕೇಳಿದ್ರು ಎಂದು ಶೆರ್ಲಿನ್ ಇ-ಟೈಮ್ಸ್‌ಗೆ ಪ್ರತಿಕ್ರಿಯಿಸಿದ್ದರು.

  English summary
  Bombay High Court grants interim relief to businessman and Shilpa Shetty's husband Raj Kundra and keeps his anticipatory bail application for hearing next Wednesday, 25th August.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X