For Quick Alerts
  ALLOW NOTIFICATIONS  
  For Daily Alerts

  ಗಂಡನನ್ನು ಹಿಂಸಿಸಿದ ಆಲಿಯಾ ಭಟ್: ಬಾಯ್‌ಕಾಟ್ ಟ್ರೆಂಡ್ ಶುರು

  |

  ಬಾಯ್‌ಕಾಟ್‌. ಈ ಪದ ಕೇಳಿದರೆ ಬಾಲಿವುಡ್ ಸ್ಟಾರ್ಸ್ ಕನಸಿನಲ್ಲೂ ಬೆಚ್ಚಿ ಬೀಳುವಂತಾಗಿದೆ. 'ಲಾಲ್‌ ಸಿಂಗ್‌ ಚಡ್ಡಾ', 'ರಕ್ಷಾ ಬಂಧನ್' ಚಿತ್ರಗಳನ್ನು ಬಾಯ್‌ಕಾಟ್‌ ಮಾಡುವಂತೆ ಟ್ವಿಟ್ಟರ್‌ನಲ್ಲಿ ಟ್ರೆಂಡ್ ನಡೀತಿದೆ. ಇದೀಗ ಆಲಿಯಾ ಭಟ್ ನಟನೆಯ 'ಡಾರ್ಲಿಂಗ್ಸ್' ಚಿತ್ರಕ್ಕೂ ಇದೇ ಸಂಕಷ್ಟ ಎದುರಾಗಿದೆ.

  ಆಲಿಯಾ ಭಟ್ ನಟಿಸಿರುವ 'ಡಾರ್ಲಿಂಗ್ಸ್' ಸಿನಿಮಾ ನಾಳೆ(ಆಗಸ್ಟ್‌ .5) ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗ್ತಿದೆ. ಆದರೆ ರಿಲೀಸ್ ಹೊಸ್ತಿಲಲ್ಲಿ ಸಿನಿಮಾ ಬಾಯ್‌ಕಾಟ್ ಮಾಡುವಂತೆ ಸೋಶಿಯಲ್ ಮೀಡಿಯಾ ಟ್ರೆಂಡ್ ಶುರುವಾಗಿದೆ. ಚಿತ್ರದಲ್ಲಿ ಪುರುಷರ ಮೇಲಿನ ದೌರ್ಜನ್ಯವನ್ನು ಪ್ರಚೋದಿಸುವ ದೃಶ್ಯಗಳಿವೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಗೃಹ ಹಿಂಸೆಯನ್ನು ಪ್ರೋತ್ಸಾಹಿಸುವ ಇಂತಹ ಸಿನಿಮಾಗಳನ್ನು ಬಾಯ್‌ಕಾಟ್ ಮಾಡಬೇಕು ಅನ್ನುವ ಕೂಗು ಕೇಳಿಬರ್ತಿದೆ. ಸದ್ಯ #BoycottAliaBhatt ಹಾಗೂ #BoycottDarlings ಹ್ಯಾಷ್‌ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ.

  ರಣ್ಬೀರ್ ಕಪೂರ್, ಆಲಿಯಾ ಭಟ್‌ಗೆ ಅವಳಿ ಮಕ್ಕಳು!?ರಣ್ಬೀರ್ ಕಪೂರ್, ಆಲಿಯಾ ಭಟ್‌ಗೆ ಅವಳಿ ಮಕ್ಕಳು!?

  ಕಳೆದ ವಾರವೇ 'ಡಾರ್ಲಿಂಗ್ಸ್' ಸಿನಿಮಾ ಟ್ರೈಲರ್ ರಿಲೀಸ್ ಆಗಿತ್ತು. ಆದರೆ ಈಗ ಬಾಯ್‌ಕಾಟ್‌ ಟ್ರೆಂಡ್ ಶುರುವಾಗಿದೆ. ಅಷ್ಟಕ್ಕೂ ಈ ಸಿನಿಮಾದಲ್ಲಿ ಬರೀ ಪುರುಷರ ಮೇಲಿನ ದೌರ್ಜನ್ಯವನ್ನು ಮಾತ್ರ ತೋರಿಸಿಲ್ಲ. ಯಾರು ತಮ್ಮ ಮಡದಿಯನ್ನಯ ಚಿಕ್ಕ ಚಿಕ್ಕ ವಿಷಯಕ್ಕೂ ಹಿಂಸೆ ಕೊಡುತ್ತಾರೋ, ಅಂತಹವರಿಗೆ ಬುದ್ಧಿ ಹೇಳಲು ಈ ಸಿನಿಮಾ ಮಾಡಿದ್ದಾರೆ. ತನ್ನನ್ನು ಗಂಡ ಹೇಗೆಲ್ಲಾ ಹಿಂಸಿಸಿದನೋ, ಹಾಗೆಯೇ ಆಲಿಯಾ ಭಟ್ ತನ್ನ ಗಂಡನಿಗೆ ಹಿಂಸೆ ಕೊಡುತ್ತಾಳೆ. ಅದನ್ನು ಟ್ರೈಲರ್‌ನಲ್ಲಿ ವಿವರವಾಗಿ ತೋರಿಸಲಾಗಿದೆ.

   ಗಂಡನಿಗೆ ಬುದ್ಧಿ ಕಲಿಸುವ ಆಲಿಯಾ

  ಗಂಡನಿಗೆ ಬುದ್ಧಿ ಕಲಿಸುವ ಆಲಿಯಾ

  ಟ್ರೈಲರ್‌ನಲ್ಲಿ ಗಂಡ ಮನೆ ಬಿಟ್ಟು ಹೋಗಿದ್ದಾನೆ ಅಂತ ಸುಳ್ಳು ದೂರು ನೀಡಿ, ತಾಯಿ ಜೊತೆ ಸೇರಿ ಗಂಡನನ್ನು ಕಿಡ್ನಾಪ್ ಮಾಡಿ ಆತನಿಗೆ ಟಾರ್ಚರ್ ಕೊಡ್ತಾಳೆ ಅಲಿಯಾ. ಸಾಯಿಸಿಬಿಡುವಂತೆ ತಾಯಿ ಹೇಳಿದರೂ ನಾನು ಹಾಗೆ ಮಾಡಲ್ಲ, ನನಗೆ ಕಾಟ ಕೊಟ್ಟಂತೆ ಆತನಿಗೂ ಕೊಡ್ತೀನಿ ಅಂತ ಮನಸೋ ಇಚ್ಛೆ ದಂಡಿಸ್ತಾಳೆ. ಇದನ್ನು ಅರ್ಥ ಮಾಡಿಕೊಳ್ಳದ ಕೆಲವರು ಬಾಯ್‌ಕಾಟ್ ಅಂತ ಬೊಬ್ಬೆ ಹೊಡಿತ್ತಿದ್ದಾರೆ.

   ಆಲಿಯಾ ನಿರ್ಮಾಣದ 'ಡಾರ್ಲಿಂಗ್ಸ್'

  ಆಲಿಯಾ ನಿರ್ಮಾಣದ 'ಡಾರ್ಲಿಂಗ್ಸ್'

  ಈ ಬ್ಲ್ಯಾಕ್ ಕಾಮಿಡಿ ಡ್ರಾಮಾ ಸಿನಿಮಾದಲ್ಲಿ ಆಲಿಯಾ ಭಟ್ ಮಧ್ಯಮ ವರ್ಗದ ಕುಟುಂಬದ ಗೃಹಿಣಿ ಬದ್ರುನ್ನಿಸ್ಸಾ ಆಗಿ ನಟಿಸಿದ್ದಾರೆ. ಗೌರಿ ಖಾನ್ ಹಾಗೂ ಗೌರವ್ ವರ್ಮಾ ಜೊತೆ ಸೇರಿ ಚಿತ್ರಕ್ಕೆ ಬಂಡವಾಳವನ್ನು ಹಾಕಿದ್ದಾರೆ. ಬದ್ರುನ್ನಿಸ್ಸಾ ಗಂಡನ ಪಾತ್ರದಲ್ಲಿ ವಿಜಯ್ ವರ್ಮಾ ನಟಿಸಿದ್ದಾರೆ.

   ಸಿನಿಮಾ ಕೆಲಸಗಳಲ್ಲಿ ಗರ್ಭಿಣಿ ಆಲಿಯಾ ಬ್ಯುಸಿ

  ಸಿನಿಮಾ ಕೆಲಸಗಳಲ್ಲಿ ಗರ್ಭಿಣಿ ಆಲಿಯಾ ಬ್ಯುಸಿ

  ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೆ ತಾವು ಗರ್ಭಿಣಿ ಆಗಿರುವ ವಿಚಾರವನ್ನು ಅವರು ತಿಳಿಸಿದ್ದರು. ಇದೀಗ 'ಡಾರ್ಲಿಂಗ್ಸ್' ಸಿನಿಮಾ ಪ್ರಚಾರ ಕಾರ್ಯಕ್ರಮಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈ ಬಗ್ಗೆ ಕೇಳಿದರೆ "ಫಿಟ್​ ಮತ್ತು ಆರೋಗ್ಯವಾಗಿದ್ದರೆ ಪ್ರೆಗ್ನೆನ್ಸಿ ಸಂದರ್ಭದಲ್ಲಿ ವಿಶ್ರಾಂತಿ ಬೇಕಾಗುವುದಿಲ್ಲ. ಕೆಲಸವೇ ನನಗೆ ಖುಷಿ ಕೊಡುತ್ತದೆ. ನಟನೆ ನನ್ನ ಪ್ಯಾಷನ್. ಇದೇ ನನಗೆ ಸದಾ ಚೈತನ್ಯ ತುಂಬುತ್ತದೆ. ನನಗೆ 100 ವರ್ಷ ಆಗುವವರೆಗೂ ಕೆಲಸ ಮಾಡುತ್ತಲೇ ಇರಬೇಕು" ಎಂದಿದ್ದಾರೆ.

   ಹಾಲಿವುಡ್‌ ಸಿನಿಮಾದಲ್ಲೂ ನಟನೆ

  ಹಾಲಿವುಡ್‌ ಸಿನಿಮಾದಲ್ಲೂ ನಟನೆ

  'ಡಾರ್ಲಿಂಗ್ಸ್' ಸಿನಿಮಾ ರಿಲೀಸ್ ನಂತರ ಆಲಿಯಾ ಭಟ್ ತನ್ನ ಪತಿ ರಣ್‌ಬೀರ್‌ ಕಪೂರ್ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾ ತೆರೆಗೆ ಬರಲಿದೆ. ಆ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲೂ ಭಾಗಿಯಾಗುವ ಸಾಧ್ಯತೆಯಿದೆ. ಇನ್ನು ಕರಣ್ ಜೋಹರ್ ನಿರ್ದೇಶದನ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದ್ಕಡೆ 'ಹಾರ್ಟ್‌ ಆಫ್ ಸ್ಟೋನ್' ಅನ್ನುವ ಹಾಲಿವುಡ್ ಪ್ರಾಜೆಕ್ಟ್‌ ಶೂಟಿಂಗ್ ಮುಗಿಸಿದ್ದಾರೆ.

  English summary
  Boycott Darlings Movie trends on Twitter. Know More.
  Friday, August 5, 2022, 9:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X