»   » ಬಿಪಾಶಾ ಬಾಳಲ್ಲಿ ಮತ್ತೆ ಚೂರಾದ ಚಂದ್ರ..!

ಬಿಪಾಶಾ ಬಾಳಲ್ಲಿ ಮತ್ತೆ ಚೂರಾದ ಚಂದ್ರ..!

Posted By:
Subscribe to Filmibeat Kannada

ನೋಡೋಕೆ ತುಸು ಕಪ್ಪಾದ್ರೂ, ಹರೆಯದ ಹುಡುಗರ ಮೈಬೆಚ್ಚಗಿಟ್ಟ ಮಾಯಾಂಗನೆ ಬಾಲಿವುಡ್ ಬೆಡಗಿ ಬಿಪಾಶಾ ಬಸು. ಮೋಹಕ ನೋಟ, ಮಾದಕ ಮೈಮಾಟದಿಂದ ಪಡ್ಡೆಗಳ ಹಾಟ್ ಫೇವರಿಟ್ ಆಗಿದ್ದ ಬಿಪಾಶಾ ಅದೇ ಪಡ್ಡೆಗಳಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದು ಹ್ಯಾಂಡ್ಸಮ್ ಹಂಕ್ ಜಾನ್ ಎಬ್ರಹಾಂ ಜೊತೆ ಲವ್ವಲ್ಲಿ ಸೀರಿಯಸ್ ಆದ್ಮೇಲೆ.

ಹೋದಲ್ಲೆಲ್ಲಾ ಜಾನ್ ತೋಳಲ್ಲಿ ಬಂಧಿಯಾಗಿ ಪೋಸ್ ಕೊಡ್ತಿದ್ದ ಬಿಪಾಶಾ, ಇನ್ನೇನು ಜಾನ್ ಜೊತೆ ಹಸೆಮಣೆ ಏರಬೇಕು ಅನ್ನುವಷ್ಟರಲ್ಲಿ ಬ್ರೇಕಪ್ ಸುದ್ದಿ ನೀಡಿದ್ದಳು. ಇತ್ತ ಬಿಪಾಶಾ ತೆಕ್ಕೆಯಿಂದ ಹೊರಬಂದ ಮೇಲೆ ಹಳೇ ಗೆಳತಿ ಪಾದವೇ ಗತಿ ಅಂತ ಜಾನ್, ಪ್ರಿಯಾ ರಾಂಚಲ್ ಜೊತೆ ಬಾಳ ಬಂಧನಕ್ಕೆ ಕಾಲಿರಿಸಿದರು.

Break-up with Harman Baweja-Bipasha Basu is single again

ಇತ್ತ ಕಹಿ ನೆನಪುಗಳನ್ನ ಅಳಿಸಿ ಹಾಕಿ, ಬಿಪಾಶಾ ಹರ್ಮನ್ ಬವೇಜಾ ಜೊತೆ ಪ್ರೀತಿ ಪ್ರೇಮ ಶುರುಹಚ್ಕೊಂಡ್ಳು. 'ಡಿಶ್ಕ್ಯಾವ್' ಚಿತ್ರದಲ್ಲಿ ಒಂದಾಗಿದ್ದ ಬಿಪಾಶಾ ಮತ್ತು ಹರ್ಮನ್, ನಿಜ ಜೀವನದಲ್ಲೂ ಜೋಡಿಯಾಗುವುದಕ್ಕೆ ನಿರ್ಧರಿಸಿದ್ದರು. [ಪ್ರಿಯಕರನ ಜೊತೆ ಬಿಪಾಶಾ ಮದುವೆಗೆ ಗಟ್ಟಿಮೇಳ ]

'ನಾವಿಬ್ಬರು ಕಪಲ್' ಅಂತ ಓಪನ್ ಆಗಿ ಅನೌನ್ಸ್ ಮಾಡಿಕೊಂಡಿದ್ದ ಬಿಪಾಶಾ, ಇದೀಗ ಹರ್ಮನ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾಳೆ. ಮ್ಯಾಗಝೀನ್ ಒಂದಕ್ಕೆ ಸಂದರ್ಶನ ನೀಡಿರುವ ಬಿಪಾಶಾ, ತಮ್ಮ ಬ್ರೇಕಪ್ ಕಹಾನಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

''ನನ್ನ ನಿರ್ಧಾರ ಬೇಸರ ತಂದಿಲ್ಲ. ನೋವಲ್ಲಿ ಬದುಕುವುದಕ್ಕಿಂತ, ಜೀವನ ಸಾಗಿಸುವುದು ಮುಖ್ಯ. ಹರ್ಮನ್ ಒಳ್ಳೆಯ ಹುಡುಗ. ಆದ್ರೆ, ನಾವಿಬ್ಬರು ಜೊತೆಯಾಗಿರುವುದು ಕಷ್ಟ. ನಾನೀಗ ಸಿಂಗಲ್'' ಅಂತ ಬಿಪಾಶಾ ಹೇಳಿದ್ದಾರೆ. ಮರಳಿ ಒಂಟಿಯಾಗಿರುವ ಬಿಪಾಶಾ, ಜೀವನದಲ್ಲಿ ಜಂಟಿಯಾಗುವುದೆಂದೋ..?! (ಏಜೆನ್ಸೀಸ್)

English summary
Bollywood Actress Bipasha Basu is single all over again. According to the reports, The Actress has made it clear the she doesn't regret in breaking up with Harman Baweja.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada