For Quick Alerts
  ALLOW NOTIFICATIONS  
  For Daily Alerts

  30 ಬಾರಿ 'ಏಕ್ತಾ ಕಪೂರ್'ರನ್ನ ಹಿಂಬಾಲಿಸಿದ್ದ ಕ್ಯಾಬ್ ಡ್ರೈವರ್: ಕಾರಣ ಅಚ್ಚರಿ ತಂದಿದೆ.!

  |

  ಬಾಲಿವುಡ್ ನ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಅವರನ್ನು ಕಳೆದ ಕೆಲವು ತಿಂಗಳಿಂದ ಹಿಂಬಾಲಿಸುತ್ತಿದ್ದ ಅಪರಿಚಿತ ವ್ಯಕ್ತಿಯನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ.

  ಏಕ್ತಾ ಕಪೂರ್ ಹೋದ ಕಡೆಯಲ್ಲೆಲ್ಲಾ ಹಿಂಬಾಲಿಸಿಕೊಂಡು ಬಂದು ಅವರನ್ನು ಮಾತನಾಡಿಸುವ ಪ್ರಯತ್ನ ಮಾಡುತ್ತಿದ್ದ ಎಂದು ಹೇಳಲಾಗಿದೆ. ಇದರಿಂದ ಅನುಮಾನಗೊಂಡ ನಿರ್ಮಾಪಕಿ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಆ ವ್ಯಕ್ತಿಯನ್ನ ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

  ಏಕ್ತಾ ಕಪೂರ್ ಸ್ಟೈಲ್ ನೋಡಿ ಆಡಿಕೊಂಡು ನಕ್ಕ ನೆಟ್ಟಿಗರು.! ಏಕ್ತಾ ಕಪೂರ್ ಸ್ಟೈಲ್ ನೋಡಿ ಆಡಿಕೊಂಡು ನಕ್ಕ ನೆಟ್ಟಿಗರು.!

  ಸದ್ಯ ಪೊಲೀಸರ ವಶದಲ್ಲಿರುವ ಈ ಅನುಮಾನಾಸ್ಪದ ವ್ಯಕ್ತಿ ಹರಿಯಾಣ ಮೂಲದ ಸುಧೀರ್ ರಾಜೇಂದರ್ ಸಿಂಗ್ (32 ವರ್ಷ) ಎಂದು ತಿಳಿದು ಬಂದಿದೆ. ವೃತ್ತಿಯಲ್ಲಿ ಕ್ಯಾಬ್ ಡ್ರೈವರ್ ಆಗಿರುವ ಈ ಸುಧೀರ್ ಸಿಂಗ್ ಏಕ್ತಾ ಕಪೂರ್ ಎಲ್ಲಿ ಹೋಗುತ್ತಾರೆ, ಏನು ಮಾಡ್ತಾರೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಅವರನ್ನು ಹಿಂಬಾಲಿಸುತ್ತಿದ್ದ. ಆದ್ರೆ, ಈತ ಹಿಂಬಾಲಿಸುತ್ತಿದ್ದ ಕಾರಣ ನಿಜಕ್ಕೂ ಅಚ್ಚರಿ ಮೂಡಿಸಿದೆ. ಮುಂದೆ ಓದಿ....

  ದೇವಸ್ಥಾನದಲ್ಲಿ ಮಾತನಾಡಿಸುವ ಪ್ರಯತ್ನ

  ದೇವಸ್ಥಾನದಲ್ಲಿ ಮಾತನಾಡಿಸುವ ಪ್ರಯತ್ನ

  ಒಂದು ದಿನ ಏಕ್ತಾ ಕಪೂರ್ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಏಕ್ತ ಅವರನ್ನು ಮಾತನಾಡಿಸುವ ಪ್ರಯತ್ನ ಕೂಡ ಮಾಡಿದ್ದ ಎಂದು ಗೊತ್ತಾಗಿದೆ. ಈ ವೇಳೆ ಏಕ್ತಾ ಅವರ ಬಾಡಿಗಾರ್ಡ್ ಆತನನ್ನು ತಡೆದು ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದ್ದರು.

  ಏಕ್ತಾ ಕಪೂರ್ ತೆರಿಗೆ ವಂಚನೆ ರು.30 ಕೋಟಿ ಏಕ್ತಾ ಕಪೂರ್ ತೆರಿಗೆ ವಂಚನೆ ರು.30 ಕೋಟಿ

  ಜಿಮ್ ನಲ್ಲೂ ಮಾತನಾಡಿಸುವ ಪ್ರಯತ್ನ

  ಜಿಮ್ ನಲ್ಲೂ ಮಾತನಾಡಿಸುವ ಪ್ರಯತ್ನ

  ಅಷ್ಟೇ ಅಲ್ಲದೇ ಏಕ್ತಾ ಕಪೂರ್ ಪ್ರತಿನಿತ್ಯ ಹೋಗುತ್ತಿದ್ದ ಜಿಮ್ ನ ಮಾಹಿತಿ ಪಡೆದು ಅಲ್ಲಿಯ ಮೆಂಬರ್ ಕೂಡ ಆಗಿ, ನಂತರ ಜಿಮ್ ಬಳಿ ಬಂದು ಮಾತನಾಡಿಸುವ ಪ್ರಯತ್ನ ಕೂಡ ಮಾಡಿದ್ದನಂತೆ. ಆಗಲೂ ಏಕ್ತಾ ಬಾಡಿಗಾರ್ಡ್ ಆತನ ಮೇಲೆ ಅನುಮಾನ ಬಂದು ತಡೆದಿದ್ದಾರೆ.

  ಏಕ್ತಾ ಬಳಿ ಕೆಲಸ ಮಾಡುವ ಕಾರಣ

  ಏಕ್ತಾ ಬಳಿ ಕೆಲಸ ಮಾಡುವ ಕಾರಣ

  ಹೀಗೆ ಪದೇ ಪದೇ ಹಿಂಬಾಲಿಸುತ್ತಿದ್ದ ಸುಧೀರ್ ಬಗ್ಗೆ ಆರಂಭದಲ್ಲಿ ನಿರ್ಲಕ್ಷ್ಯ ಮಾಡಿದ್ದರೂ, ನಂತರ ಅನುಮಾನ ಬಂದು ಏಕ್ತಾ ಕಪೂರ್ ದೂರು ದಾಖಲಿಸಿದ್ದಾರೆ. ಅಷ್ಟಕ್ಕೂ ಈತ ಹಿಂಬಾಲಿಸುತ್ತಿದ್ದ ಕಾರಣ ಏಕ್ತ ಕಪೂರ್ ಬಳಿ ಕೆಲಸ ಮಾಡುವ ಉದ್ದೇಶ ಮತ್ತು ಅವರ ಸ್ನೇಹಿತನಾಗಬೇಕೆಂದು ಕೊಂಡಿದ್ದನಂತೆ. ಇದು ನಿಜಕ್ಕೂ ಅಚ್ಚರಿ ಮೂಡಿಸಿದೆ.

  ಬಾಲಾಜಿ ಟೆಲಿ ಫಿಲಂಸ್ ಕಚೇರಿ ಮೇಲೆ ಐಟಿ ದಾಳಿ ಬಾಲಾಜಿ ಟೆಲಿ ಫಿಲಂಸ್ ಕಚೇರಿ ಮೇಲೆ ಐಟಿ ದಾಳಿ

  ಪೊಲೀಸರು ತನಿಖೆ ಮಾಡ್ತಿದ್ದಾರೆ

  ಪೊಲೀಸರು ತನಿಖೆ ಮಾಡ್ತಿದ್ದಾರೆ

  ಕೆಲವು ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಮತ್ತು ದೂರಿನ ಅನ್ವಯ ಐಪಿಸಿ ಸೆಕ್ಷನ್ 354 D ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಿಜಕ್ಕೂ ಅವರ ಬಳಿ ಕೆಲಸ ಮಾಡಬೇಕು ಎಂಬ ಕಾರಣನಾ ಅಥವಾ ಬೇರೆ ಉದ್ದೇಶ ಇತ್ತಾ ಎನ್ನುವುದು ವಿಚಾರಣೆ ಬಳಿಕ ತಿಳಿಯಬೇಕಿದೆ.

  English summary
  Cab driver arrested for stalking Ekta Kapoor over 30 times. The accused idenfied as Sudhir Rajender Singh, a resident of Haryana, he wanted to meet Kapoor to get a job and also to be her friend.
  Wednesday, March 20, 2019, 19:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X