For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಪಾಸಿಟಿವ್ ನಂತರವೂ ಚಿತ್ರೀಕರಣದಲ್ಲಿ ಪಾಲ್ಗೊಂಡ ನಟಿ: ದೂರು ದಾಖಲು

  |

  ಕೊರೊನಾ ಪಾಸಿಟಿವ್ ವರದಿ ಬಂದಿದ್ದರೂ ಸಹ ಮನೆಯಲ್ಲಿ ಅಥವಾ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಆಗದೆ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಂಡ ಬಾಲಿವುಡ್ ನಟಿಯ ವಿರುದ್ಧ ಮುಂಬೈ ಮಹಾನಗರ ಪಾಲಿಕೆಯು ದೂರು ದಾಖಲಿಸಿದೆ.

  ಬಾಲಿವುಡ್ ನಟಿ ಗೌಹಾರ್ ಖಾನ್‌ಗೆ ಕೊರೊನಾ ಪಾಸಿಟಿವ್ ವರದಿ ನೀಡಲಾಗಿತ್ತು. ಆದರೆ ನಟಿಯು ಮನೆಯಲ್ಲಿ ಇರದೆ ಸಿನಿಮಾ ಒಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.ಕೊರೊನಾ ನಿಯಮ ಉಲ್ಲಂಘನೆ ಮಾಡಿರುವ ಕಾರಣ ಹಾಗಾಗಿ ಆಕೆಯ ವಿರುದ್ಧ ದೂರು ದಾಖಲಾಗಿದೆ. ದೂರಿನ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ ಬಿಎಂಸಿ. ಪ್ರತಿಯಲ್ಲಿ ನಟಿಯ ಹೆಸರನ್ನು ಬ್ಲರ್ ಮಾಡಲಾಗಿದೆ.

  'ನಗರದ ರಕ್ಷಣೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ' ಎಂದು ಬಿಎಂಸಿ ಹೇಳಿದೆ. ಬಿಎಂಸಿಯ ಅಧಿಕಾರಿ ಚೈತನ್ಯ ಮಾತನಾಡಿ, 'ಕೊರೊನಾ ನಿಯಮ ಉಲ್ಲಂಘನೆ ಮಾಡಿರುವ ಕಾರಣ ಗೌಹಾರ್ ಖಾನ್ ವಿರುದ್ಧ ಪ್ರಕರಣ ದಾಖಲಿಸಾಗಿದೆ. ಅವರ ಆರೋಗ್ಯ ಚೇತರಿಕೆ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ' ಎಂದಿದ್ದಾರೆ.

  ಯಾರಿಗೂ ಗೊತ್ತಾಗದಂತೆ ಅಭಿಮಾನಿಗಳ ಮಧ್ಯೆ ಕುಳಿತು ರಾಬರ್ಟ್ ನೋಡಿದ ದರ್ಶನ್ | Filmibeat Kannada

  ಗೌಹಾರ್ ಖಾನ್ ಅವರು ಬಾಲಿವುಡ್‌ನ 'ರಾಕೆಟ್ ಸಿಂಗ್', 'ಇಷಕ್‌ಜಾದೆ', 'ಬೇಗಮ್ ಜಾನ್' ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  English summary
  BMC register case against Gauhar Khan for violating COVID 19 rules. She participated in a movie shoot while she tested positive.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X