ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ವೇಶ್ಯಾವಾಟಿಕೆಗೆ ನೂಕುತ್ತಿದ್ದವನ ಬಂಧನ
ಮೀ ಟೂ ಅಭಿಯಾನ ಎಷ್ಟೇ ತೀವ್ರವಾಗಿ ನಡೆದರೂ ಕಾಸ್ಟಿಂಗ್ ಕೌಚ್ ಪದ್ಧತಿ ಸಿನಿಮಾ ರಂಗದಿಂದ ದೂರ ಹೋಗುವುದು ಕಾಣುತ್ತಿಲ್ಲ.
ಮಾಡೆಲ್‌ಗಳಿಗೆ ಸಿನಿಮಾ ಅವಕಾಶ ಕೊಡಿಸುವುದಾಗಿ ನಂಬಿಸಿ ಅವರೊಟ್ಟಿಗೆ ಲೈಂಗಿಕ ವಾಂಚೆ ತೀರಿಸಿಕೊಂಡು ನಂತರ ಅವರನ್ನು ವೇಶ್ಯಾವಾಟಿಕೆಗೆ ದೂರುತ್ತಿದ್ದ ತಂಡವೊಂದನ್ನು ಮುಂಬೈ ನಲ್ಲಿ ನಿನ್ನೆ (ಜನವರಿ 21) ಬಂಧಿಸಲಾಗಿದೆ.
ಒಬ್ಬ ಕಾಸ್ಟಿಂಗ್ ಏಜೆಂಟ್ ಸೇರಿದಂತೆ ಮೂರು ಮಂದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದು, ವಂಚನೆಗೆ ಒಳಗಾಗಿದ್ದ ಎಂಟು ಮಂದಿ ಮಾಡೆಲ್‌ಗಳನ್ನು ರಕ್ಷಿಸಿದ್ದಾರೆ.

ಪ್ರೇಮ್ ಅಡ್ಡಹೆಸರಿನ ಸಂದೀಪ್ ಇಂಗ್ಲೆ, ಹನುಫಾ ಸರ್ದಾರ್, ತಾನ್ಯಾ ಶರ್ಮಾ ಬಂಧಿತರು. ಇವರಲ್ಲಿ ಸಂದೀಪ್ ಇಂಗ್ಲೆ ಅಲಿಯಾಸ್ ಪ್ರೇಮ್ ಪ್ರಮುಖ ಆರೋಪಿ ಆಗಿದ್ದಾನೆ.
ಕಾಸ್ಟಿಂಗ್ ಏಜೆಂಟ್ ಹಾಗೂ ಸಣ್ಣ ಮಟ್ಟದ ನಿರ್ಮಾಪಕ ಸಹ ಆಗಿರುವ ಈತ ಮಾಡೆಲ್‌ಗಳನ್ನು ಪರಿಚಯ ಮಾಡಿಕೊಂಡು ಅವರಿಗೆ ವೆಬ್ ಸರಣಿಗಳಲ್ಲಿ, ಸಿನಿಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಅವರೊಟ್ಟಿಗೆ ದೈಹಿಕ ಸಂಪರ್ಕ ಬೆಳೆಸುತ್ತಿದ್ದ. ನಂತರ ಅವರನ್ನು ವೇಶ್ವಾವಾಟಿಕೆಗೆ ಬಳಸಿಕೊಳ್ಳುತ್ತಿದ್ದ. ವೇಶ್ವಾವಾಟಿಕೆಯಿಂದ ಬಂದ ಹಣವನ್ನು ತಾನು ಇಟ್ಟುಕೊಂಡು ತುಸು ಹಣವನ್ನು ಮಾಡೆಲ್‌ಗಳಿಗೆ ಸಹ ನೀಡುತ್ತಿದ್ದ.
ಗಿರಾಕಿಗಳನ್ನು ವೆಬ್‌ಸೈಟ್‌ಗಳ ಮೂಲಕ ಈ ಗುಂಪು ಸಂಪರ್ಕ ಮಾಡುತ್ತಿದ್ದು, ಬಂಧಿತರ ಮೊಬೈಲ್‌ಗಳಲ್ಲಿ ಗಿರಾಕಿಗಳೊಂದಿಗೆ ಮಾಡಿರುವ ಮಾತುಕತೆ. ಮಾಡೆಲ್‌ಗಳ ಫೊಟೊಗಳು, ಹಣಕಾಸಿನ ವ್ಯವಹಾರ ಇತರೆ ವಿಷಯಗಳ ಬಗ್ಗೆ ಮಾತನಾಡಿರುವುದು ತಿಳಿದು ಬಂದಿದೆ.
Recommended Video
ಮುಂಬೈ ಪೊಲೀಸರ ಕ್ರೈಂ ಬ್ರ್ಯಾಂಚ್‌ನಿಂದ ಮಾಹಿತಿ ಪಡೆದು ಜುಹುನ ಹೋಟೆಲ್ ಒಂದರ ಮೇಲೆ ದಾಳಿ ಮಾಡಿ ಮಾಡೆಲ್‌ಗಳನ್ನು ರಕ್ಷಿಸಲಾಗಿದೆ. ಆರೋಪಿಗಳನ್ನು ಸಹ ಬಂಧಿಸಲಾಗಿದೆ.


Click it and Unblock the Notifications










