For Quick Alerts
  ALLOW NOTIFICATIONS  
  For Daily Alerts

  ಬಿಪಿನ್ ರಾವತ್ ನಿಧನ: ಸಂತಾಪ ವ್ಯಕ್ತಪಡಿಸಿದ ಬಾಲಿವುಡ್ ಸೆಲೆಬ್ರಿಟಿಗಳು

  |

  ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಇಂದು ನಡೆದ ಹೆಲಿಕಾಪ್ಟರ್ ಅವಘಡದಲ್ಲಿ ನಿಧನ ಹೊಂದಿದ್ದಾರೆ.

  ಬಿಪಿನ್ ರಾವತ್ ಅವರ ಹಠಾತ್ ನಿಧನಕ್ಕೆ ಪ್ರಧಾನಿ ಮೋದಿ ಆದಿಯಾಗಿ ಹಲವರು ಸಂತಾಪ ಸೂಚಿಸಿದ್ದಾರೆ. ಹಲವು ರಾಜಕೀಯ ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಬಿಪಿನ್ ರಾವತ್ ನಿಧನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು ಸಹ ಬಿಪಿನ್ ರಾವತ್ ನಿಧನಕ್ಕೆ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

  ಸೇನೆಯ ಕುರಿತು ಹಲವು ಸಿನಿಮಾಗಳು ದಶಕಗಳಿಂದಲೂ ಬಾಲಿವುಡ್‌ನಲ್ಲಿ ನಿರ್ಮಿಸಲ್ಪಡುತ್ತಾ ಬಂದಿವೆ. ಹಾಗಾಗಿ ಇತರ ಚಿತ್ರರಂಗಗಳಿಗೆ ಹೋಲಿಸಿದರೆ ಬಾಲಿವುಡ್ ಮಂದಿಗೆ ಭಾರತೀಯ ಸೇನೆಯೊಂದಿಗೆ ನಂಟು ಹೆಚ್ಚು.

  ಸೇನೆಯ ಕುರಿತಾದ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟ ಅಜಯ್ ದೇವಗನ್, ಬಿಪಿನ್ ರಾವತ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ''ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಹಾಗೂ ವಾಯುಪಡೆಯ ಸಿಬ್ಬಂದಿ ನಿಧನ ಹೊಂದಿದ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಅವರೆಲ್ಲರ ಕುಟುಂಬಕ್ಕೆ ದೇವರು ಶಾಂತಿ ನೀಡಲಿ'' ಎಂದಿದ್ದಾರೆ.

  ''ಇದು ದೇಶಕ್ಕೆ ಬಹಳ ದುಃಖದ ದಿನ. ಈ ಆಘಾತಕಾರಿ ಸುದ್ದಿಯನ್ನು ಅರಗಿಸಿಕೊಳ್ಳಲು ಇನ್ನೂ ನಾವು ಯತ್ನಿಸುತ್ತಿದ್ದೇವೆ. ನನ್ನ ತೀವ್ರ ಸಂತಾಪಗಳು'' ಎಂದು ನಟಿ ಯಾಮಿ ಗೌತಮ್ ಟ್ವೀಟ್ ಮಾಡಿದ್ದಾರೆ.

  ''ಬಿಪಿನ್ ರಾವತ್ ಹಾಗೂ ಅವರ ಪತ್ನಿ ಹಾಗೂ ಇನ್ನೂ 11 ಮಂದಿ ಸೈನ್ಯಾಧಿಕಾರಿಗಳು ನಿಧನ ಹೊಂದಿದ ಸುದ್ದಿ ಕೇಳಿ ತೀವ್ರ ದುಃಖಿತನಾದೆ. ಬಿಪಿನ್ ರಾವತ್ ಅವರನ್ನು ಕೆಲವು ಬಾರಿ ಭೇಟಿ ಮಾಡುವ ಅದೃಷ್ಟ ನನ್ನದಾಗಿತ್ತು. ಅವರು ತಮಾಷೆಯ ವ್ಯಕ್ತಿಯಾಗಿದ್ದರು, ಜೊತೆಗೆ ತೀವ್ರವಾದ ದೇಶಪ್ರೇಮವನ್ನು ಹೊಂದಿದ್ದರು. ಅವರೊಟ್ಟಿಗೆ ಹಸ್ತ ಲಾಘವ ಮಾಡಿದರೆ 'ಜೈ ಹಿಂದ್' ಘೋಷಣೆ ತನ್ನಂತಾನೆ ಹೃದಯದಿಂದ, ಬಾಯಿಂದ ಹೊರಗೆ ಬರುತ್ತಿತ್ತು'' ಎಂದಿದ್ದಾರೆ ನಟ, ಬಿಜೆಪಿ ವಕ್ತಾರ ಅನುಪಮ್ ಖೇರ್. ಬಿಪಿನ್ ರಾವತ್ ಅವರೊಟ್ಟಿಗೆ ತೆಗೆಸಿಕೊಂಡಿರುವ ಕೆಲವು ಚಿತ್ರಗಳನ್ನು ಸಹ ಅವರು ಹಂಚಿಕೊಂಡಿದ್ದಾರೆ.

  'ಪಿಎಂ ನರೇಂದ್ರ ಮೋದಿ' ಸಿನಿಮಾದಲ್ಲಿ ನರೇಂದ್ರ ಮೋದಿ ಪಾತ್ರದಲ್ಲಿ ನಟಿಸಿರುವ ವಿವೇಕ್ ಒಬೆರಾಯ್, ''ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ನಿಧನ ತೀವ್ರ ದುಃಖ ತರಿಸಿದೆ. ದಶಕಗಳ ಕಾಲ ಅವರು ಮಾಡಿರುವ ನಿಸ್ವಾರ್ಥ ಸೇವೆಗೆ ನಾನು ಗೌರವ ಸಲ್ಲಿಸುತ್ತೇನೆ. ಅವರು ಭಾರತದ ನಿಜವಾದ ಯೋಧ'' ಎಂದಿದ್ದಾರೆ.

  ನಟಿ ಲಾರಾ ದತ್ತಾ ಟ್ವೀಟ್ ಮಾಡಿ, ''ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಹಾಗೂ ಅವರೊಟ್ಟಿಗೆ ಪ್ರಾಣ ಬಿಟ್ಟ ಇತರ ಸೈನ್ಯಾಧಿಕಾರಿಗಳಿಗೆ ನನ್ನ ಸಂತಾಪಗಳು. ಈ ದಿನ ಭಾರತೀಯ ಸೇನೆಗೆ ಹಾಗೂ ಇಡೀಯ ದೇಶಕ್ಕೆ ದುಃಖದ ದಿನ'' ಎಂದು ಟ್ವೀಟ್ ಮಾಡಿದ್ದಾರೆ.

  ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ತಮ್ಮ ಪತ್ನಿ ಹಾಗೂ ಇತರ ಕೆಲವು ಸೈನ್ಯಾಧಿಕಾರಿಗಳೊಟ್ಟಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವಾಗ ತಮಿಳುನಾಡಿನ ಕೂನೂರು ಬಳಿ ವಿಮಾನವು ಪಥನಗೊಂಡು ನಿಧನ ಹೊಂದಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಬಿಪಿನ್ ರಾವತ್ ಸೇರಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು. ಅದರಲ್ಲಿ 13 ಮಂದಿ ನಿಧನ ಹೊಂದಿದ್ದಾರೆ. ಪ್ರತೀಕೂಲ ಹವಾಮಾನದಿಂದ ಹೆಲಿಕಾಪ್ಟರ್‌ ಪತನಗೊಂಡಿದೆ ಎಂದು ಹೇಳಲಾಗುತ್ತಿದೆ.

  English summary
  Bollywood celebrities express condolence over Indian Army general Bipin Rawat. Ajay Devagan, Paresh Rawal, Anupan Kher and many others express sadness over Bipin Rawat's death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X