»   » 'ಇಂದು ಸರ್ಕಾರ್' ಸಿನಿಮಾಕ್ಕೆ ಕಾಂಗ್ರೆಸ್ ಕಾರ್ಯಕರ್ತರ ವಿರೋಧ

'ಇಂದು ಸರ್ಕಾರ್' ಸಿನಿಮಾಕ್ಕೆ ಕಾಂಗ್ರೆಸ್ ಕಾರ್ಯಕರ್ತರ ವಿರೋಧ

Posted By:
Subscribe to Filmibeat Kannada

ಬಾಲಿವುಡ್ ನ 'ಇಂದು ಸರ್ಕಾರ್' ಸಿನಿಮಾಗೆ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 'ಇಂದು ಸರ್ಕಾರ್' ಸಿನಿಮಾದ ವಿರುದ್ಧ ಇಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪುಣೆಯಲ್ಲಿ ಪ್ರತಿಭಟನೆ ನಡೆಸಿದರು.

'ಇಂದು ಸರ್ಕಾರ್' ಚಿತ್ರವನ್ನು ಮಧುರ್ ಭಂಡಾರ್ಕರ್ ನಿರ್ದೇಶನ ಮಾಡುತ್ತಿದ್ದಾರೆ. 1975ರ ಇಂದಿರಾ ಗಾಂಧಿ ಅವರ ಸರ್ಕಾರದ ಸಮಯದಲ್ಲಿ ಹೊರಡಿಸಿದ್ದ ತುರ್ತು ಪರಿಸ್ಥಿತಿಯ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ

'ಕಾಂಗ್ರೆಸ್ ಗೂಂಡಾಗಿರಿ ಅನುಮೋದಿಸ್ತೀರಾ?' ರಾಹುಲ್‌ಗೆ ಮಧುರ್ ಪ್ರಶ್ನೆ

Congress workers stage protest over 'Indu Sarkar' in Pune.

ಈ ಸಿನಿಮಾದಲ್ಲಿ ಇಂದಿರಾ ಗಾಂಧಿ ಮತ್ತು ಸಂಜಯ್ ಗಾಂಧಿ ಅವರನ್ನು ಚಿತ್ರೀಕರಿಸಿರುವ ರೀತಿ ಸರಿಯಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪುಣೆಯ ಖಾಸಗಿ ಹೋಟೆಲ್ ನಲ್ಲಿ ನಡೆಯಬೇಕಿದ್ದ ಚಿತ್ರದ ಸುದ್ದಿಗೋಷ್ಠಿ ಇದೇ ಕಾರಣದಿಂದ ರದ್ದಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಚಿತ್ರಕ್ಕೆ ವಿರೋಧ ವ್ಯಕ್ತ ಪಡಿಸಿದ ವಿಷಯವನ್ನು ಚಿತ್ರ ನಿರ್ದೇಶಕ ಮಧುರ್ ಭಂಡಾರ್ಕರ್ ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ತಿಳಿಸಿದ್ದಾರೆ.

English summary
Congress workers stage protest over 'Indu Sarkar' Movie in Pune.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada