»   » ಶಾರುಖ್ 'ಡಿಡಿಎಲ್‌ಜೆ' ಪ್ರದರ್ಶನ 22 ವರ್ಷಗಳಲ್ಲಿ ಮೊದಲ ಬಾರಿಗೆ ರದ್ದು

ಶಾರುಖ್ 'ಡಿಡಿಎಲ್‌ಜೆ' ಪ್ರದರ್ಶನ 22 ವರ್ಷಗಳಲ್ಲಿ ಮೊದಲ ಬಾರಿಗೆ ರದ್ದು

Posted By:
Subscribe to Filmibeat Kannada

ಶಾರುಖ್ ಖಾನ್ ಮತ್ತು ಕಾಜೋಲ್ ಅಭಿನಯದ 90 ರ ದಶಕದ ಚಿತ್ರ 'ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ(ಡಿಡಿಎಲ್‌ಜೆ)' ಚಿತ್ರದ ಮ್ಯಾಟಿನಿ ಶೋ 22 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮುಂಬೈ ನ ಮರಾಠ ಮಂದಿರ್ ಚಿತ್ರಂದಿರದಲ್ಲಿ ರದ್ದುಗೊಂಡಿರುವುದು ವರದಿಯಾಗಿದೆ.

ಮುಂಬೈ ನ ಐಕಾನಿಕ್ 'ಮರಾಠ ಮಂದಿರ್' ಚಿತ್ರಮಂದಿರ ಶಾರುಖ್ ಅಭಿನಯದ 'ಡಿಡಿಎಲ್‌ಜೆ' ಚಿತ್ರವನ್ನು ಎರಡು ದಶಕಗಳಿಂದ ನಿರಂತರವಾಗಿ ಪ್ರದರ್ಶನ ಮಾಡುತ್ತಿದೆ. ಆದರೆ ಇದೇ ಮೊದಲ ಬಾರಿಗೆ 22 ವರ್ಷಗಳ ನಂತರ 'ಡಿಡಿಎಲ್‌ಜೆ' ಚಿತ್ರದ ಮ್ಯಾಟಿನಿ ಶೋವನ್ನು ಮಂಗಳವಾರ ರದ್ದು ಮಾಡಿದ್ದು ಶಾರುಖ್ ಅಭಿಮಾನಿಗಳಿಗೆ ಬೇಸರತರಿಸಿದೆ.

DDLJ matinee show cancelled at Mumbai’s Maratha Mandir for the first time in 22 years

ಅಂದಹಾಗೆ 'ಡಿಡಿಎಲ್‌ಜೆ' ಚಿತ್ರದ ಮ್ಯಾಟಿನಿ ಶೋ ಕ್ಯಾನ್ಸಲ್ ಮಾಡಲು ನಟಿ ಶ್ರದ್ಧಾ ಕಪೂರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಹಸೀನಾ ಪಾರ್ಕರ್' ಚಿತ್ರದ ಟ್ರೈಲರ್ ಪ್ರದರ್ಶನ ಮಾಡಿರುವುದು ಕಾರಣ ಎಂಬುದು ಮೂಲಗಳಿಂದ ತಿಳಿದಿದೆ. ಶ್ರದ್ಧಾ ಅವರ ಈ ಚಿತ್ರವು ಭೂಗತ ಪಾತಕಿ ದಾವೂದ್ ಇಬ್ರಾಹಿಂ ತಂಗಿಯ ಬಯೋಪಿಕ್ ಆಧಾರಿತ ಸಿನಿಮಾ.

ಶ್ರದ್ಧಾ ಕಪೂರ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರಿ ಅಂತೆ.!

'ಮರಾಠ ಮಂದಿರ್ ಸಿನಿಮಾ'ದ ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್ ದೇಸಾಯಿಗೆ 'ಹಸೀನಾ ಪಾರ್ಕರ್' ಸಿನಿಮಾ ನಿರ್ಮಾಣಕಾರರು ಟ್ರೈಲರ್ ಅನ್ನು ಚಿತ್ರಮಂದಿರದಲ್ಲಿ ಲಾಂಚ್ ಮಾಡುವ ಬಗ್ಗೆ ಹೇಳಿದ್ದರಂತೆ. ಪಾರ್ಕರ್ ವಾಸಿಸುತ್ತಿದ್ದ ಡೋಂಗ್ರಿ ಸ್ಥಳ 'ಮರಾಠ ಮಂದಿರ್' ಚಿತ್ರಮಂದಿರಕ್ಕೆ ತೀರ ಹತ್ತಿರವಿದ್ದ ಕಾರಣ ಚಿತ್ರದ ಟ್ರೈಲರ್ ಪ್ರದರ್ಶನ ಮಾಡುವ ನಿರ್ಧಾರ ಮಾಡಿದ್ದರಂತೆ. ಅಲ್ಲದೇ ಚಿತ್ರಮಂದಿರದ ಹೌಸ್ ಫುಲ್ ಟಿಕೆಟ್ ವೆಚ್ಚವನ್ನು ಚಿತ್ರತಂಡ ನೀಡಿತ್ತಂತೆ. ಈ ಕುರಿತು ಮನೋಜ್ ರವರು 'ಡಿಡಿಎಲ್‌ಜೆ' ಚಿತ್ರಕ್ಕೆ ಯಾವುದೇ ಅನ್ಯಾಯ ಮಾಡಿಲ್ಲ. ಈ ಬಗ್ಗೆ ಮೊದಲು 'ಯಶ್ ರಾಜ್ ಫಿಲ್ಮ್ಸ್' ಬಳಿ ಅನುಮತಿ ಪಡೆದು ನಂತರವಷ್ಟೇ ಟ್ರೈಲರ್ ಲಾಂಚ್ ಮಾಡಲಾಗಿದೆ ಎಂದಿದ್ದಾರೆ.

'ಡಿಡಿಎಲ್‌ಜೆ' ಅಭಿಮಾನಿಗಳಿಗೆ ಮಂಗಳವಾರದ ಮ್ಯಾಟಿನಿ ಶೋ ರದ್ದಾಗಲಿರುವ ಬಗ್ಗೆ ಚಿತ್ರಮಂದಿರದ ಹೊರಗೆ ಮಾಹಿತಿಯನ್ನು ಸಹ ನೀಡಲಾಗಿತ್ತಂತೆ.

English summary
Shah Rukh Khan Starrer 'DDLJ' matinee show cancelled at Mumbai’s Maratha Mandir for the first time in 22 years. The Reason is here

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada