»   » ಬೆಡಗಿ ದೀಪಿಕಾ ಪಡುಕೋಣೆಗೆ ಎಂಟು ಕೋಟಿ ಆಫರ್

ಬೆಡಗಿ ದೀಪಿಕಾ ಪಡುಕೋಣೆಗೆ ಎಂಟು ಕೋಟಿ ಆಫರ್

Posted By:
Subscribe to Filmibeat Kannada

ಬಾಲಿವುಡ್ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆಗೆ ಭರ್ಜರಿ ಆಫರ್ ಸಿಕ್ಕಿದೆ. ತಮ್ಮ ಮುಂದಿನ ಚಿತ್ರಕ್ಕಾಗಿ ಅವರು ಭಾರಿ ಸಂಭಾವನೆ ಪಡೆದಿದ್ದಾರೆ. ಸಂಜಯ್ ಲೀಲಾ ಭನ್ಸಾಲಿ ಅವರ 'ಬಾಜಿರಾವ್ ಮಸ್ತಾನಿ' ಚಿತ್ರಕ್ಕಾಗಿ ಅವರು ರು.8 ಕೋಟಿ ಎಣಿಸಿದ್ದಾರೆ ಎನ್ನುತ್ತವೆ ಮೂಲಗಳು.

ಈ ಮೂಲಕ ಬಾಲಿವುಡ್ ನಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ನಟಿಯಾಗಿ ದೀಪಿಕಾ ಅವರು ಮೊದಲ ಸ್ಥಾನ ಅಲಂಕರಿಸುವಂತಾಗಿದೆ. ಸಾಲು ಸಾಲು ಹಿಟ್ ಚಿತ್ರಗಳು, ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವ ದೀಪಿಕಾ ಅವರ ಕೈಗೆ ಸುಲಭವಾಗಿ ಈ ಭಾರಿ ಬಜೆಟ್ ಚಿತ್ರ ಸಿಕ್ಕಿದೆ. [ದೀಪಿಕಾ ಪಡುಕೋಣೆಗೆ ಅಲ್ಪಸ್ವಲ್ಪ ಕನ್ನಡ ಬರುತ್ತಂತೆ]


ಬಾಲಿವುಡ್ ನ ಬೆಡಗಿಯರಾದ ಅನುಷ್ಕಾ ಶರ್ಮಾ, ಕತ್ರಿನಾ ಕೈಫ್, ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಸಂಭಾವನೆ ಏರಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರಂತೆ. ಅವರು ಏನೇ ತಿಪ್ಪರಲಾಗ ಹಾಕಿದರೂ ನಿರ್ಮಾಪಕರು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂಬ ಸುದ್ದಿಯೂ ಇದೆ.

ಆದರೆ ದೀಪಿಕಾ ವಿಚಾರದಲ್ಲಿ ಮಾತ್ರ ಎಲ್ಲವೂ ಉಲ್ಟಾಪಲ್ಟಾ. ಬಾಲಿವುಡ್ ನ ಹೊಸ ಕ್ವೀನ್ ಗಾಗಿ ದೀಪಿಕಾ ಪಡುಕೋಣೆ ಉದಯಿಸಿದ್ದಾರೆ. ಸಾಮಾನ್ಯವಾಗಿ ಸಂಜಯ್ ಲೀಲಾ ಭನ್ಸಾಲಿ ಚಿತ್ರಗಳೆಂದರೆ ಭಾರಿ ಬಜೆಟ್, ಅದ್ಭುತ ಸೆಟ್ ಗಳು, ಕಣ್ಣು ಕುಕ್ಕುವ ಕಾಸ್ಟ್ಯೂಮ್ ಗಳು ಇರುತ್ತವೆ.

ದೇವದಾಸ್, ಸಾವರಿಯಾ, ಗುಜಾರಿಷ್ ಚಿತ್ರಗಳೇ ಇದಕ್ಕೆ ಸಾಕ್ಷಿ. ಈಗ ಅವರು ಕೈಗೆತ್ತಿಕೊಂಡಿರುವ 'ಬಾಜಿರಾವ್ ಮಸ್ತಾನಿ' ಚಿತ್ರವೂ ಅದ್ದೂರಿತನದಿಂದ ಕೂಡಿರುವುದಾಗಿದೆ. ಇನ್ನು ದೀಪಿಕಾ ಈ ಚಿತ್ರದಲ್ಲಿ ಏನೆಲ್ಲಾ ಮ್ಯಾಜಿಕ್ ಮಾಡುತ್ತಾರೋ ಎಂಬ ಕುತೂಹಲವಂತೂ ಇದ್ದೇ ಇದೆ. (ಏಜೆನ್ಸೀಸ್)

English summary
The latest buzz, the lead actress of Sanjay Leela Bhansali film Bajirao Mastani, Deepika Padukone has charged Rs 8 crore to act in the film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada