For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಪಡುಕೋಣೆಯನ್ನು ಹಿಗ್ಗಾ-ಮುಗ್ಗಾ ಹೊಗಳಿದ ಹೊಸ ನಟಿ

  |

  ಬಾಲಿವುಡ್‌ನಲ್ಲಿ ಹೊಸ 'ನೀರಿನ' ಆಗಮನವಾಗಿದೆ. ಒಂದು ಕಾಲದ ಸ್ಟಾರ್ ನಟಿಯರಾಗಿದ್ದ ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ, ಕರೀನಾ ಕಪೂರ್ ಅವರುಗಳು ನಿಧಾನಕ್ಕೆ ನೇಪತ್ಯಕ್ಕೆ ಸರಿಯುತ್ತಿದ್ದಾರೆ. ನಟಿ ದೀಪಿಕಾ ಪಡುಕೋಣೆಗೆ ಸಹ ಈಗ ಹಿರಿಯ ನಟಿಯ ಪಟ್ಟ ಹತ್ತಿರದಲ್ಲಿದೆ.

  ಹೊಸ ನಟಿಯರಾದ ಸಾರಾ ಅಲಿ ಖಾನ್, ಕಿಯಾರಾ ಅಡ್ವಾಣಿ, ಅನನ್ಯಾ ಪಾಂಡೆ ಅವರುಗಳು ನಿಧಾನಕ್ಕೆ ಬಾಲಿವುಡ್‌ ಅನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ಆದರೆ ಹೊಸ ನಟಿಯರು- ತುಸು ಹಿರಿಯ ನಟಿಯರಲ್ಲಿನ ಸಂಬಂಧ ಚೆನ್ನಾಗಿಯೇ ಇದೆ. ಇದಕ್ಕೆ ತಾಜಾ ಉದಾಹರಣೆ ದೀಪಿಕಾ ಪಡುಕೋಣೆ-ಅನನ್ಯಾ ಪಾಂಡೆ.

  ಶಕುನ್ ಭಾಟ್ರಾ ನಿರ್ದೇಶನದ ಹೆಸರಿಡದ ಸಿನಿಮಾದಲ್ಲಿ ಅನನ್ಯಾ ಪಾಂಡೆ ಮತ್ತು ದೀಪಿಕಾ ಪಡುಕೋಣೆ ಒಟ್ಟಿಗೆ ನಟಿಸುತ್ತಿದ್ದಾರೆ. ದೀಪಿಕಾ ರನ್ನು ಅತಿಯಾಗಿ ಹಚ್ಚಿಕೊಂಡಿದ್ದಾರಂತೆ ಅನನ್ಯಾ ಪಾಂಡೆ. ಈ ಬಗ್ಗೆ ಕರೀನಾ ಕಪೂರ್ ಅವರ ಟಾಕ್ ಶೋ ನಲ್ಲಿ ಮಾತನಾಡಿದ್ದಾರೆ ಅನನ್ಯಾ.

  ದೀಪಿಕಾ ಪಡುಕೋಣೆ ನನ್ನ ಸ್ವಂತ ಅಕ್ಕನಂತೆ: ಅನನ್ಯಾ

  ದೀಪಿಕಾ ಪಡುಕೋಣೆ ನನ್ನ ಸ್ವಂತ ಅಕ್ಕನಂತೆ: ಅನನ್ಯಾ

  'ದೀಪಿಕಾ ಪಡುಕೋಣೆ ನನ್ನ ಸ್ವಂತ ಅಕ್ಕನಂತೆ. ಆಕೆಯ ಬಾಹ್ಯ ಸೌಂದರ್ಯದಂತೆಯೇ ಆಕೆಯ ಆಂತರಿಕ ಸೌಂದರ್ಯವೂ ಅಷ್ಟೇ ಸುಂದರ. ಮಾನವೀಯ ಹೃದಯವುಳ್ಳ ಅದ್ಭುತವಾದ ವ್ಯಕ್ತಿ ದೀಪಿಕಾ ಪಡುಕೋಣೆ. ನಾವಿಬ್ಬರೂ ಅದ್ಭುತವಾದ ಸಂಬಂಧ ಹೊಂದಿದ್ದೇವೆ' ಎಂದಿದ್ದಾರೆ ಅನನ್ಯಾ.

  ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ ದೀಪಿಕಾ: ಅನನ್ಯಾ

  ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ ದೀಪಿಕಾ: ಅನನ್ಯಾ

  ಸೆಟ್‌ನಲ್ಲಿ ನನ್ನ ಬಗ್ಗೆ ಬಹಳ ಕಾಳಜಿವಹಿಸುತ್ತಾರೆ ದೀಪಿಕಾ, ನಟಿಸುವಾಗ ನಾನು ಆತಂಕಕ್ಕೆ ಒಳಗಾಗದಂತೆ ನೋಡಿಕೊಳ್ಳುತ್ತಾರೆ. ಸಲಹೆಗಳನ್ನು ಕೊಡುತ್ತಾರೆ. ಸಿನಿಮಾಕ್ಕಾಗಿ ವಿಶೇಷ ಕಾರ್ಯಾಗಾರದಲ್ಲಿ ನಾವು ಭಾಗವಹಿಸಿದ್ದೆವು ಆಗಲೂ ಸಾಕಷ್ಟು ಸಲಹೆಗಳನ್ನು ಕೊಟ್ಟಿದ್ದರು ದೀಪಿಕಾ ಎಂದಿದ್ದರೆ ಅನನ್ಯಾ.

  'ಪೂ' ಪಾತ್ರ ನಿನಗೆ ಚೆನ್ನಾಗಿ ಹೊಂದುತ್ತದೆ: ಕರೀನಾ

  'ಪೂ' ಪಾತ್ರ ನಿನಗೆ ಚೆನ್ನಾಗಿ ಹೊಂದುತ್ತದೆ: ಕರೀನಾ

  ಕರೀನಾ ಕಪೂರ್ ಸಹ ಅನನ್ಯಾರನ್ನು ಹೊಗಳಿದ್ದಾರೆ. 'ಒಂದೊಮ್ಮೆ ಕಭಿ ಖುಷಿ ಕಭಿ ಗಂ' ಸಿನಿಮಾದ 'ಪೂ' ಪಾತ್ರ ಮತ್ತೆ ತೆರೆ ಮೇಲೆ ಬರುವಂತಾದರೆ ಆ ಪಾತ್ರ ನಿನಗೆ ಚೆನ್ನಾಗಿ ಹೊಂದುತ್ತದೆ, ಆ ಪಾತ್ರವನ್ನು ಈಗಿನ ನಟಿಯರಲ್ಲಿ ನೀನು ಮಾತ್ರ ಮಾಡಲು ಸಾಧ್ಯ' ಎಂದಿದ್ದಾರೆ ಅನನ್ಯಾ.

  ಇದನ್ನು ಕರಣ್ ಜೋಹರ್ ನೋಡಲಿ: ಅನನ್ಯಾ

  ಇದನ್ನು ಕರಣ್ ಜೋಹರ್ ನೋಡಲಿ: ಅನನ್ಯಾ

  ಇದಕ್ಕೆ ಪ್ರತಿಕ್ರಿಯಿಸಿರುವ ಅನನ್ಯಾ, 'ಪೂ' ಪಾತ್ರ ನನ್ನ ಅಚ್ಚು-ಮೆಚ್ಚಿನ ಪಾತ್ರ. ನಾನು ಆ ಪಾತ್ರ ಮಾಡಬಲ್ಲೆ ಎಂದು ಹೇಳಿದ್ದನ್ನು, ಕರಣ್ ಜೋಹರ್ ನೋಡಿದರೆ ಅಥವಾ ಎಲ್ಲಿಯಾದರೂ ಓದಿದರೆ ಚೆನ್ನಾಗಿರುತ್ತದೆ ಎಂದು ನಕ್ಕಿದ್ದಾರೆ ಅನನ್ಯಾ. ಅನನ್ಯಾ ಪಾಂಡೆ, ವಿಜಯ್ ದೇವರಕೊಂಡ ಜೊತೆಗೆ 'ಫೈಟರ್' ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಲವು ಬಾಲಿವುಡ್ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

  English summary
  Actress Ananya Pande said Deepika Padukone is like my own sister. Kareena Kapoor said Ananya is most suitable actress for Poo character.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X