For Quick Alerts
  ALLOW NOTIFICATIONS  
  For Daily Alerts

  'ಪದ್ಮಾವತ್' ಬಳಿಕ ಮತ್ತೆ ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ದೀಪಿಕಾ: ನಾಯಕ ಯಾರು?

  |

  ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಕಾಂಬಿನೇಷನ್ ನಲ್ಲಿ ಬಂದ ಸಿನಿಮಾಗಳು ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿ ಮಾಡಿವೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಮೂರು ಸಿನಿಮಾಗಳಲ್ಲಿ ದೀಪಿಕಾ ನಾಯಕಿಯಾಗಿ ಮಿಂಚಿದ್ದಾರೆ.

  ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಸೂಪರ್ ಹಿಟ್ ಸಿನಿಮಾಗಳಾದ ರಾಮ್-ಲೀಲಾ, ಬಾಜಿರಾವ್ ಮಸ್ತಾನಿ ಮತ್ತು ಪದ್ಮಾಪತ್ ಸಿನಿಮಾಗಳಲ್ಲಿ ದೀಪಿಕಾ ನಾಯಕಿಯಾಗಿ ನಟಿಸಿದ್ದಾರೆ. ಈ ಮೂರು ಸಿನಿಮಾಗಳು ದೀಪಿಕಾ ಸಿನಿ ಬದುಕನ್ನೇ ಬದಲಾಯಿಸಿದ ಸಿನಿಮಾಗಳಾಗಿವೆ. ಇದೀಗ ಮತ್ತದೆ ಕಾಂಬಿನೇಷನ್ ಒಂದಾಗುತ್ತಿದೆ. ಬನ್ಸಾಲಿ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ದೀಪಿಕಾ ನಾಯಕಿಯಾಗಿ ಮಿಂಚುತ್ತಿದ್ದಾರೆ. ಮುಂದೆ ಓದಿ...

  ನರೇಗಾ ಅಡಿ ಕೂಲಿ ಹಣ ಪಡೆದಿರುವ ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫರ್ನಾಂಡೀಸ್!

  'ಬೈಜು ಬಾವ್ರಾ' ಸಿನಿಮಾದಲ್ಲಿ ದೀಪಿಕಾ

  'ಬೈಜು ಬಾವ್ರಾ' ಸಿನಿಮಾದಲ್ಲಿ ದೀಪಿಕಾ

  ಸಂಜಯ್ ಲೀಲಾ ಬನ್ಸಾಲಿ 'ಬೈಜು ಬಾವ್ರಾ' ಎನ್ನುವ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ ಚಿತ್ರದಲ್ಲಿ ನಾಯಕನಾಗಿ ರಣಬೀರ್ ಕಪೂರ್ ನಟಿಸುತ್ತಿದ್ದಾರೆ. ನಟಿ ದೀಪಿಕಾ ಜೊತೆಗೆ ಮತ್ತೋರ್ವ ಖ್ಯಾತ ನಟಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ಯಾರು ಅಲ್ಲ ನಟಿ ಅಲಿಯಾ ಭಟ್.

  ಬೈಜುನಾಥ್ ಬಾವ್ರಾ ಜೀವನದ ಕಥೆ

  ಬೈಜುನಾಥ್ ಬಾವ್ರಾ ಜೀವನದ ಕಥೆ

  ಮೊದಲ ಬಾರಿಗೆ ದೀಪಿಕಾ ಮತ್ತು ಅಲಿಯಾ ಭಟ್ ಇಬ್ಬರನ್ನು ಒಂದೇ ಸಿನಿಮಾ ಮೂಲಕ ಕರೆತರುತ್ತಿದ್ದಾರೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ. ಅಂದ್ಹಾಗೆ 'ಬೈಜು ಬಾವ್ರಾ' ಮೊಘಲ್ ಚಕ್ರವರ್ತಿ ಅಕ್ಬರ್ ಕಾಲದಲ್ಲಿದ್ದ ದ್ರುಪದ ಶೈಲಿಯ ಸಂಗೀತಗಾರ ಬೈಜುನಾಥ್ ಬಾವ್ರಾ ಎಂಬ ಅಸಾಧಾರಣ ಪ್ರತಿಭಾವಂತನ ಜೀವನವನ್ನು ಸಂಜಯ್ ಲೀಲಾ ಬನ್ಸಾಲಿ ತೆರೆಮೇಲೆ ತರುತ್ತಿದ್ದಾರೆ.

  ಪ್ರಭಾಸ್-ದೀಪಿಕಾ ಪಡುಕೋಣೆ ಚಿತ್ರಕ್ಕಾಗಿ ಭಾರಿ ದೊಡ್ಡ ಸಂಭಾವನೆ ಪಡೆದ ಬಿಗ್‌-ಬಿ!

  ಬೈಜುನಾಥ್ ಬಾವ್ರಾ ಪಾತ್ರದಲ್ಲಿ ರಣಬೀರ್ ಕಪೂರ್

  ಬೈಜುನಾಥ್ ಬಾವ್ರಾ ಪಾತ್ರದಲ್ಲಿ ರಣಬೀರ್ ಕಪೂರ್

  ಬೈಜುನಾಥ್ ಪಾತ್ರದಲ್ಲಿ ನಟ ರಣಬೀರ್ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಹೃತಿಕ್ ರೋಷನ್ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ರಣಬೀರ್ ಕಪೂರ್ ನಟಿಸುವುದು ಬಹುತೇಕ ಖಚಿತವಾಗಿದೆ. ತಾನ್ ಸೇನನ ವಿರುದ್ಧ ಸಂಗೀತ ಜುಗಲ್ಬಂದಿಯಲ್ಲಿ ಸ್ಪರ್ಧಿಸುವ ಸಂಗೀತಗಾರ ಬೈಜುನಾಥ್ ಆಗಿ ರಣಬೀರ್ ಕಪೂರ್ ನಟಿಸುತ್ತಿದ್ದಾರೆ. ಇನ್ನೂ ತಾನ್ ಸೇನನ ಪಾತ್ರಕ್ಕೆ ಹುಡುಕಾಟ ನಡೆಯುತ್ತಿದೆಯಂತೆ.

  ಚಿರು ನನಗೆ 10 ಸಾವಿರ ಆಡಿಯೋ ಮೆಸೇಜ್ ಕಳಿಸಿದ್ದಾರೆ | Chiranjeevi Sarja | Pratham | Filmibeat Kannada
  1952ರಲ್ಲಿ ರಿಲೀಸ್ ಆಗಿದ್ದ ಬೈಜು ಬಾವ್ರಾ ಸಿನಿಮಾದ ರಿಮೇಕ್

  1952ರಲ್ಲಿ ರಿಲೀಸ್ ಆಗಿದ್ದ ಬೈಜು ಬಾವ್ರಾ ಸಿನಿಮಾದ ರಿಮೇಕ್

  ಅಂದ್ಹಾಗೆ ಬೈಜು ಬಾವ್ರಾ ಸಿನಿಮಾ ಈಗಾಗಲೇ ಹಿಂದಿಯಲ್ಲಿ ತೆರೆಗೆ ಬಂದಿದೆ. 1952ರಲ್ಲಿ ಭರತ್ ಭೂಷಣ್ ಮತ್ತು ಮೀನಾ ಕುಮಾರಿ ಅಭಿನಯದ ಬೈಜು ಬಾವ್ರಾ ಎಂಬ ಚಿತ್ರ ಬಂದಿತ್ತು. ಈಗ ಅದೇ ಸಿನಿಮಾವನ್ನು ಸಂಜಯ್ ಲೀಲಾ ಬನ್ಸಾಲಿ ರಿಮೇಕ್ ಮಾಡುತ್ತಿದ್ದಾರೆ. ಬನ್ಸಾಲಿ ಸದ್ಯ ಗಂಗೂಬಾಯಿ ಕತಿಯಾವಾಡಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲಿಯಾ ಭಟ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮುಗಿದ ಬಳಿಕ ಬೈಜು ಬಾವ್ರಾ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.

  English summary
  Actress Deepika Padukone to star in Sanjay Leela Bhansali's Baiju Bawra

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X