For Quick Alerts
  ALLOW NOTIFICATIONS  
  For Daily Alerts

  ವೇದಿಕೆ ಮೇಲೆ ಗನ್ ತೋರಿಸಿ ಚುಂಬಿಸಿದ ದೀಪಿಕಾ!

  By ಉದಯರವಿ
  |

  ವೇದಿಕೆ ಮೇಲೆ ಗನ್ ತೋರಿಸಿ ಚುಂಬಿಸುವುದನ್ನು ಯಾರಾದರೂ ನೋಡಿದ್ದೀರಾ? ಬಹುಶಃ ನೋಡಿರಲಿಕ್ಕಿಲ್ಲ. ಆದರೆ ಗುಳಿಕೆನ್ನೆ ಸುಂದರಿ ದೀಪಿಕಾ ಪಡುಕೋಣೆಯ ಈ ಸಾಹಸವನ್ನು ಮಾಡಿದ್ದಾರೆ. ಅಯ್ಯೋ ರಾಮಾ ಇದೇನಪ್ಪಾ ಲೀಲೆ ಅಂತೀರಾ. ಅದೇ ರೀ 'ರಾಮ್ ಲೀಲಾ'.

  ದೀಪಿಕಾ ಮತ್ತು ರಣವೀರ್ ಸಿಂಗ್ ಜೊತೆಯಾಗಿ ಅಭಿನಯಿಸುತ್ತಿರುವ 'ರಾಮ್ ಲೀಲಾ' ಚಿತ್ರಕ್ಕೆ ಸಂಜಯ್ ಲೀಲಾ ಭನ್ಸಾಲಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ಮಾಪಕ, ಸಂಗೀತ ನಿರ್ದೇಶಕ, ಚಿತ್ರಕಥೆ ರಚನೆ ಹೀಗೆ ಮುಕ್ಕಾಲು ಭಾಗದ ಜವಾಬ್ದಾರಿಯನ್ನು ಭನ್ಸಾಲಿ ತಮ್ಮ ತಲೆ ಮೇಲೆ ಹೊತ್ತಿದ್ದಾರೆ.

  ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಮುಂಬೈನಲ್ಲಿ ನಡೆಯಿತು. ಶೇಕ್ಸ್ ಪಿಯರ್ ಅವರ ರೋಮಿಯೋ ಜೂಲಿಯಟ್ ಪಾತ್ರಗಳು ಎಷ್ಟು ಜನಪ್ರಿಯವೋ ತಮ್ಮ 'ರಾಮ್ ಲೀಲಾ' ಚಿತ್ರವೂ ಅಷ್ಟೇ ಜನಪ್ರಿಯವಾಗಲಿದೆ ಎನ್ನುತ್ತಿದ್ದಾರೆ ಭನ್ಸಾಲಿ.

  ಚಿತ್ರದಲ್ಲಿ ತಮ್ಮ ಮತ್ತು ದೀಪಿಕಾ ನಡುವಿನ ಆನ್ ಸ್ಕ್ರೀನ್ ರೊಮ್ಯಾನ್ಸ್ ಹೈ ರೇಂಜ್ ನಲ್ಲಿರುತ್ತದೆ. ಈ ಚಿತ್ರ ಅತಿದೊಡ್ಡ ಚಿತ್ರವಾಗಿ ಹೊರಹೊಮ್ಮಲಿದೆ ಎಂದಿದ್ದಾರೆ ರಣವೀರ್ ಸಿಂಗ್. ನವೆಂಬರ್ 15ರಂದು ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿದೆ. ಸ್ಲೈಡ್ ಶೋಗಳಲ್ಲಿ ಟ್ರೇಲರ್ ಬಿಡುಗಡೆ ಸಮಾರಂಭದ ದೃಶ್ಯಗಳನ್ನು ವೀಕ್ಷಿಸಿ.

  ವೇದಿಕೆ ಮೇಲೆ ಗನ್ ತೋರಿಸಿದ ದೀಪಿಕಾ

  ವೇದಿಕೆ ಮೇಲೆ ಗನ್ ತೋರಿಸಿದ ದೀಪಿಕಾ

  ರಣವೀರ್ ಸಿಂಗ್ ಎದೆಗೆ ಗುರಿಯಿಟ್ಟು ಕಣ್ಣಲ್ಲಿ ಕಣ್ಣು ನೆಟ್ಟಿದ ದೀಪಿಕಾ. 'ರಾಮ್ ಲೀಲಾ' ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಗಮನಸೆಳೆದ ಪರಿ.

  ಮತ್ತೆ ಇನ್ನೆಲ್ಲಿಗೋ ಗುರಿಯಿಟ್ಟ ದೀಪಿಕಾ

  ಮತ್ತೆ ಇನ್ನೆಲ್ಲಿಗೋ ಗುರಿಯಿಟ್ಟ ದೀಪಿಕಾ

  ಮೊದಲು ಎದೆಗೆ ಬಳಿಕ ಇನ್ನೆಲ್ಲಿಗೋ ಗುರಿಯಿಟ್ಟು ದೀಪಿಕಾ ಗನ್ ತೋರಿಸಿ ವೇದಿಕೆ ಮೇಲೆ ಎಲ್ಲರ ಗಮನಸೆಳೆದರು. ವೇದಿಕೆ ಮೇಲೆ ಇಬ್ಬರೂ ಈ ರೀತಿ ಚೆಲ್ಲಾಟವಾಡಿ ಎಲ್ಲರನ್ನೂ ನಕ್ಕು ನಲಿಸಿದರು. ಅದಕ್ಕೆ ಸಂಬಂಧಿಸಿದ ದೃಶ್ಯವಿದು.

  ಚುಮ್ಮಾ ದೇ ದೇ ಚುಮ್ಮಾ

  ಚುಮ್ಮಾ ದೇ ದೇ ಚುಮ್ಮಾ

  ಸಂಜಯ್ ಲೀಲಾ ಭನ್ಸಾಲಿ ಅವರಿಗೆ ಒಂದು ಕೆನ್ನೆಗೆ ರಣವೀರ್ ಸಿಂಗ್ ಇನ್ನೊಂದು ಕೆನ್ನೆಗೆ ದೀಪಿಕಾ ಚುಂಬಿಸಿದರು. ದೀಪಿಕಾ ಚುಂಬನದ ಲಿಪ್ ಸ್ಟಿಕ್ ಗುರುತು ಮಾತ್ರ ಭನ್ಸಾಲಿ ಕೆನ್ನೆ ಮೇಲೆ ಹಾಗೆ ಉಳಿಯಿತು.

  ಇಬ್ಬರ ಮುಖದಲ್ಲೂ ಲಾಸ್ಯವಾಡಿದ ಆತ್ಮವಿಶ್ವಾಸ

  ಇಬ್ಬರ ಮುಖದಲ್ಲೂ ಲಾಸ್ಯವಾಡಿದ ಆತ್ಮವಿಶ್ವಾಸ

  ಇವರಿಬ್ಬರ ಮುಖದಲ್ಲಿ ಲಾಸ್ಯವಾಡುತ್ತಿರುವ ಆತ್ಮವಿಶ್ವಾಸ ನೋಡಿದರೆ ಚಿತ್ರದ ಗೆಲುವಿನ ಬಗ್ಗೆ ಸಾಕಷ್ಟು ವಿಶ್ವಾಸವಿದ್ದಂತೆ ಕಾಣುತ್ತದೆ.

  ರಣಬೀರ್ ಜೊತೆ ದೀಪಿಕಾ ಡೇಟಿಂಗ್?

  ರಣಬೀರ್ ಜೊತೆ ದೀಪಿಕಾ ಡೇಟಿಂಗ್?

  'ರಾಮ್ ಲೀಲಾ' ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಇಬ್ಬರ ಚೆಲ್ಲಾಟ, ಜೂಟಾಟ ನೋಡಿದರೆ ಇಬ್ಬರ ನಡುವೆ ಪ್ರೇಮಾಂಕುರವಾಗಿದೆಯೇ ಎಂಬ ಅನುಮಾನ ಬಾಲಿವುಡ್ ನಲ್ಲಿ ವ್ಯಕ್ತವಾಗುತ್ತಿದೆ.

  ಭನ್ಸಾಲಿ ಕೆನ್ನೆ ಮೇಲೆ ಮುದ್ರೆ ಒತ್ತಿದ ದೀಪಿಕಾ

  ಭನ್ಸಾಲಿ ಕೆನ್ನೆ ಮೇಲೆ ಮುದ್ರೆ ಒತ್ತಿದ ದೀಪಿಕಾ

  ರಾಮ್ ಲೀಲಾ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ದೀಪಿಕಾ, ರಣವೀರ್, ಭನ್ಸಾಲಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡದ್ದು ಹೀಗೆ.

  ದೀಪಿಕಾ ಅಂದಚೆಂದಕ್ಕೆ ಮರುಳಾಗವರುಂಟೇ?

  ದೀಪಿಕಾ ಅಂದಚೆಂದಕ್ಕೆ ಮರುಳಾಗವರುಂಟೇ?

  ಬ್ಯೂಟಿಫುಲ್ ಆಗಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ. ಆಕೆಯ ಅಂದಚೆಂದಕ್ಕೆ ಮರುಳಾಗದರುಂಟೆ?

  ಪಾತ್ರಕ್ಕಾಗಿ ಸಾಕಷ್ಟು ಶ್ರಮಿಸಿದ ರಣವೀರ್

  ಪಾತ್ರಕ್ಕಾಗಿ ಸಾಕಷ್ಟು ಶ್ರಮಿಸಿದ ರಣವೀರ್

  ರಣವೀರ್ ಸಿಂಗ್ ಸಹ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಸ್ಮಾರ್ಟ್ ಆಗಿ ಬಂದು ಎಲ್ಲರ ಗಮನಸೆಳೆದರು. ಈ ಚಿತ್ರಕ್ಕಾಗಿ ರಣವೀರ್ ತುಂಬಾ ಕಷ್ಟಪಟ್ಟಿದ್ದಾರಂತೆ. ತನ್ನ ಪಾತ್ರಕ್ಕೆ ತಕ್ಕಂತೆ ದೇಹದ ಆಕೃತಿಯನ್ನೂ ಬದಲಾಯಿಸಿಕೊಂಡಿದ್ದಾರೆ.

  ಕಿರುತೆರೆ ತಾರೆ ಬರ್ಖಾ ಬಿಸ್ತ್ ಸಹ ಹಾಜರು

  ಕಿರುತೆರೆ ತಾರೆ ಬರ್ಖಾ ಬಿಸ್ತ್ ಸಹ ಹಾಜರು

  ಹಿಂದಿ ಕಿರುತೆರೆ ತಾರೆ ಬರ್ಖಾ ಬಿಸ್ತ್ ಸಹ ರಾಮ್ ಲೀಲಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಅದಕ್ಕೆ ಸಂಬಂಧಿಸಿದ ದೃಶ್ಯವನ್ನು ಇಲ್ಲಿ ಕಾಣಬಹುದು.

  ಚಿತ್ರವನ್ನು ತಮ್ಮ ತಾಯಿಗೆ ಅರ್ಪಿಸಿದ ಭನ್ಸಾಲಿ

  ಚಿತ್ರವನ್ನು ತಮ್ಮ ತಾಯಿಗೆ ಅರ್ಪಿಸಿದ ಭನ್ಸಾಲಿ

  ಈ ಚಿತ್ರವನ್ನು ತಮ್ಮ ತಾಯಿಗೆ ಅರ್ಪಿಸುತ್ತಿರುವುದಾಗಿ ಸಂಜಯ್ ಲೀಲಾ ಭನ್ಸಾಲಿ ಪ್ರಕಟಿಸಿದರು. ಭನ್ಸಾಲಿ ಜೊತೆ ತನ್ನ ತಾಯಿ, ಸಹೋದರಿ ಸಹ ಇದ್ದಾರೆ.

  English summary
  People often say "One love, one heart, one destiny". Bollywood has an epic love story in store for us. This will be in an upcoming movie titled Ram Leela which follows this saying. Lead actor Ranveer Singh says that he and Deepika Padukone were destined to do Ram Leela.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X