For Quick Alerts
  ALLOW NOTIFICATIONS  
  For Daily Alerts

  ಕನ್ನಡಿಗರ ಮನಸ್ಸು ಗೆದ್ದ ವಿರಾಟ್ ಪತ್ನಿ ಅನುಷ್ಕಾ ಶರ್ಮಾ

  |

  ಬಾಲಿವುಡ್ ಖ್ಯಾತ ನಟಿ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯ. ತಮ್ಮ ಹಾಗೂ ಪತಿ ವಿರಾಟ್ ಕೊಹ್ಲಿಯ ಚಿತ್ರಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ ಅವರು.

  Sushant ತಂದೆ ಪ್ರಕಾರ ಕೊಲೆ , Police report ಪ್ರಕಾರ ಆತ್ಮಹತ್ಯೆ | Filmibeat Kannada

  ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ತಮ್ಮ್ ಅಭಿಮಾನಿಗಳೋಂದಿಗೆ ಸಂವಾದ ನಡೆಸುತ್ತಿರುತ್ತಾರೆ ಅನುಷ್ಕಾ ಶರ್ಮಾ. ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರ ಸಹ ನೀಡುತ್ತಿರುತ್ತಾರೆ.

  ಹಿಂಸಾಚಾರಕ್ಕೆ ಪ್ರಚೋದನೆ ಆರೋಪ: ಅನುಷ್ಕಾ ಶರ್ಮಾಗೆ ಕೋರ್ಟ್ ನೋಟಿಸ್ಹಿಂಸಾಚಾರಕ್ಕೆ ಪ್ರಚೋದನೆ ಆರೋಪ: ಅನುಷ್ಕಾ ಶರ್ಮಾಗೆ ಕೋರ್ಟ್ ನೋಟಿಸ್

  ಇಂದು ಅನುಷ್ಕಾ ಶರ್ಮಾ ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದು, ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ ಸಂವಾದದಲ್ಲಿ ಅನುಷ್ಕಾ ಶರ್ಮಾ ನೀಡಿದ ಉತ್ತರ ಕನ್ನಡಿಗರ ಮನಸ್ಸು ಗೆದ್ದಿದೆ.

  ಕನ್ನಡ ಮಾತನಾಡುತ್ತಾರಂತೆ ಅನುಷ್ಕಾ ಶರ್ಮಾ

  ಕನ್ನಡ ಮಾತನಾಡುತ್ತಾರಂತೆ ಅನುಷ್ಕಾ ಶರ್ಮಾ

  ಬೆಂಗಳೂರಿನ, ಕನ್ನಡಿಗ ಹುಡುಗಿಯರೇ ಕನ್ನಡ ಮಾತನಾಡಲು ಹಿಂದು-ಮುಂದು ನೋಡುತ್ತಿರುವ ಸಮಯದಲ್ಲಿ ಅನುಷ್ಕಾ ಶರ್ಮಾ ಗೆ ಕನ್ನಡ ಬರುತ್ತದೆ ಎಂದರೆ ಆಶ್ಚರ್ಯ ಪಡಲೇಬೇಕಲ್ಲವೆ. ಹೌದು, ಅನುಷ್ಕಾ ಶರ್ಮಾ ಗೆ ಕನ್ನಡ ಮಾತನಾಡಲು ಬರುತ್ತದೆಯಂತೆ.

  ಅನುಷ್ಕಾ ಶರ್ಮಾಗೆ ಕನ್ನಡ ಬರುತ್ತದೆಯಾ?

  ಅನುಷ್ಕಾ ಶರ್ಮಾಗೆ ಕನ್ನಡ ಬರುತ್ತದೆಯಾ?

  ಇನ್‌ಸ್ಟಾಗ್ರಾಂ ನಲ್ಲಿ ನಡೆದ ಪ್ರಶ್ನೋತ್ತರದಲ್ಲಿ ಒಬ್ಬಾತ, 'ಮೇಡಂ ನಿಮಗೆ ಕನ್ನಡ ಬರುತ್ತದೆಯೇ?' ಎಂಬ ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ಉತ್ತರಿಸಿದ ಅನುಷ್ಕಾ ಶರ್ಮಾ, 'ಸ್ವಲ್ಪ, ಸ್ವಲ್ಪ' ಎಂದಿದ್ದಾರೆ. ಅನುಷ್ಕಾ ಅವರ ಈ ಉತ್ತರದ ಸ್ಕ್ರೀನ್ ಶಾಟ್‌ ಈಗ ಸಖತ್ ವೈರಲ್ ಆಗಿದೆ.

  ದರ್ಶನ್ ಸಿನಿಮಾದ ಶೀರ್ಷಿಕೆಯನ್ನೇ ಇಟ್ಟ ಅನುಷ್ಕಾ: ಹೇಗಿದೆ ನೋಡಿ ಫಸ್ಟ್ ಲುಕ್ದರ್ಶನ್ ಸಿನಿಮಾದ ಶೀರ್ಷಿಕೆಯನ್ನೇ ಇಟ್ಟ ಅನುಷ್ಕಾ: ಹೇಗಿದೆ ನೋಡಿ ಫಸ್ಟ್ ಲುಕ್

  ಅನುಷ್ಕಾ ಬೆಳೆದಿದ್ದೆಲ್ಲಾ ಬೆಂಗಳೂರಲ್ಲೇ

  ಅನುಷ್ಕಾ ಬೆಳೆದಿದ್ದೆಲ್ಲಾ ಬೆಂಗಳೂರಲ್ಲೇ

  ಅನುಷ್ಕಾ ಶರ್ಮಾ ಗೆ ಕನ್ನಡ ಬರುವುದರಲ್ಲಿ ಹೆಚ್ಚಿನ ಆಶ್ಚರ್ಯವಿಲ್ಲ. ಅನುಷ್ಕಾ ಶರ್ಮಾ ಹುಟ್ಟಿದ್ದು ಉತ್ತರ ಪ್ರದೇಶದಲ್ಲಾದರೂ ಬೆಳೆದಿದ್ದು, ಓದಿದ್ದು ಎಲ್ಲವೂ ಬೆಂಗಳೂರಿನಲ್ಲಿಯೇ. ಪದವಿ ವರೆಗಿನ ಶಿಕ್ಷಣವನ್ನು ಅವರು ಬೆಂಗಳೂರಿನಲ್ಲಿಯೇ ಮಾಡಿದ್ದಾರೆ.

  ಸಸ್ಯಾಹಾರಿ ಆದ ಅನುಷ್ಕಾ ಶರ್ಮಾ

  ಸಸ್ಯಾಹಾರಿ ಆದ ಅನುಷ್ಕಾ ಶರ್ಮಾ

  ಇನ್ನೂ ಹಲವು ಪ್ರಶ್ನೆಗಳಿಗೆ ಉತ್ತರಿಸಿರುವ ಅನುಷ್ಕಾ ಶರ್ಮಾ, ತಾವು ಕಳೆದ ಐದು ವರ್ಷದಿಂದ ಮಾಂಸಾಹಾರವನ್ನು ತ್ಯಜಿಸಿ ಸಸ್ಯಾಹಾರಿ ಆಗಿರುವುದಾಗಿ ಹೇಳಿದ್ದಾರೆ. ಇದು ತಮ್ಮ ಜೀವನದ ಉತ್ತಮ ನಿರ್ಣಯಗಳಲ್ಲಿ ಒಂದು ಎಂದು ಸಹ ಹೇಳಿದ್ದಾರೆ.

  ಇದೇನಿದು ವಿರುಷ್ಕಾ ಡೈವೋರ್ಸ್?: ಟ್ರೆಂಡ್ ಆಗುತ್ತಿದೆ ಕೊಹ್ಲಿ-ಅನುಷ್ಕಾ ವಿಚ್ಚೇದನದ ಸುದ್ದಿ!ಇದೇನಿದು ವಿರುಷ್ಕಾ ಡೈವೋರ್ಸ್?: ಟ್ರೆಂಡ್ ಆಗುತ್ತಿದೆ ಕೊಹ್ಲಿ-ಅನುಷ್ಕಾ ವಿಚ್ಚೇದನದ ಸುದ್ದಿ!

  English summary
  Actress Anushka Sharma knew Kannada language little bit. She raised in Bengaluru so she knows the language.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X