For Quick Alerts
  ALLOW NOTIFICATIONS  
  For Daily Alerts

  ಯಶ್ ಬಗ್ಗೆ ಬಾಲಿವುಡ್‌ ನಿರ್ದೇಶಕ ಅನುರಾಗ್ ಕಶ್ಯಪ್ ಆಸಕ್ತಿಕರ ಅಭಿಪ್ರಾಯ

  |

  ನಟ ಯಶ್ ಈಗ ಕನ್ನಡ ಚಿತ್ರರಂಗದ ಸ್ಟಾರ್ ಆಗಿ ಮಾತ್ರ ಉಳಿದಿಲ್ಲ. ಅದಾಗಲೇ ರಾಜ್ಯಗಳ ಗಡಿದಾಟಿ ಭಾರತದ ಸಿನಿಮಾ ಸ್ಟಾರ್ ಎನಿಸಿಕೊಂಡಿದ್ದಾರೆ. ಅದೂ ಕೇವಲ ಎರಡೇ ಸಿನಿಮಾಗಳ ಮೂಲಕ.

  ಯಶ್ ಈಗ ರಾಕಿಭಾಯ್ ಎಂದೇ ಎಲ್ಲೆಡೆ ಪರಿಚಿತರು. ಬಾಲಿವುಡ್‌ನಲ್ಲಿಯೂ ಯಶ್‌ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಆದರೆ ಕುತೂಹಲ ಕೆರಳಿಸಿರುವುದು ಬಾಲಿವುಡ್‌ನ ಅರೆ ಪರ್ಯಾಯ ಸಿನಿಮಾಗಳ ನಿರ್ದೇಶಕ ಎನಿಸಿಕೊಂಡಿರುವ ಅನುರಾಗ್ ಕಶ್ಯಪ್, ಯಶ್ ಬಗ್ಗೆ ಆಡಿರುವ ಮಾತುಗಳು.

  ''ಸಿಎಂ ಬೊಮ್ಮಾಯಿ, ಸಚಿವ ಅಶ್ವತ್ಥ್ ಅನ್ನು ಕಾಪಾಡಿದ್ದಾರೆ ಯಶ್''''ಸಿಎಂ ಬೊಮ್ಮಾಯಿ, ಸಚಿವ ಅಶ್ವತ್ಥ್ ಅನ್ನು ಕಾಪಾಡಿದ್ದಾರೆ ಯಶ್''

  ಅನುರಾಗ್ ಕಶ್ಯಪ್ 'ಹೀರೋ'ಗಿರಿಯನ್ನು ಇಷ್ಟಪಡದ, ಒಪ್ಪದ, ತನ್ನ ಸಿನಿಮಾಗಳಲ್ಲಿಯೂ ಹೀರೋಯಿಸಂ ಗೆ ಅವಕಾಶ ಕೊಡದ ಒಂದು ಮಾದರಿಯ ರಿಯಲಿಸ್ಟಿಕ್ ಸಿನಿಮಾ ನಿರ್ದೇಶಕ. ಅಂಥಹವರು ಹೀರೋಯಿಸಂ ಅನ್ನು ಹೆಚ್ಚಾಗಿ ನಂಬಿಕೊಂಡಿರುವ ಯಶ್ ಬಗ್ಗೆ ಮಾತನಾಡಿರುವುದು ಅಭಿಮಾನಿಗಳಿಗೆ ಮಾತ್ರವಲ್ಲ ಸಿನಿಮಾ ವಿಮರ್ಶಕರಿಗೂ, ಆಸಕ್ತರಿಗೂ ಕುತೂಹಲ ತಂದಿದೆ.

  ''ರಾಕಿಭಾಯ್, ಪುಷ್ಪರಾಜ್, ಫಹಾದ್ ಫಾಸಿಲ್ ಎಲ್ಲರಿಗೂ ಗೊತ್ತು''

  ''ರಾಕಿಭಾಯ್, ಪುಷ್ಪರಾಜ್, ಫಹಾದ್ ಫಾಸಿಲ್ ಎಲ್ಲರಿಗೂ ಗೊತ್ತು''

  'ಗಲಾಟಾ ಪ್ಲಸ್' ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಅನುರಾಗ್ ಕಶ್ಯಪ್, ''ಆಮಿರ್ ಖಾನ್, ಶಾರುಖ್ ಖಾನ್ ಅವರ ಮೇಲಿದ್ದ ಮೋಹವೆಲ್ಲ ಇಲ್ಲಿನ ಜನರಿಗೆ ಹೊರಟು ಹೋಗಿದೆ. ಈಗ ಅದೇ ಅಭಿಮಾನ ಫಹಾದ್ ಫಾಸಿಲ್, 'ಪುಷ್ಪ' ಸಿನಿಮಾದ ಹೀರೋ ಬಗ್ಗೆ ಇದೆ. ರಾಕಿಭಾಯ್ ಈಗ ಭಾರತದ ದೊಡ್ಡ ಸ್ಟಾರ್. ರಾಕಿಭಾಯ್ ಹಾಗೂ ಪುಷ್ಪರಾಜ್ ಹೆಸರುಗಳು ಜನರಿಗೆ ಚೆನ್ನಾಗಿ ಗೊತ್ತಿವೆ. ಅವರ ಮೂಲ ಹೆಸರು ಉತ್ತರ ಭಾರತದ ಮೂಲೆಯ ಹಳ್ಳಿಯ ಜನರಿಗೆ ಗೊತ್ತಿಲ್ಲದಿದ್ದರೂ ಅವರ ಪಾತ್ರದ ಹೆಸರು ಅವರ ಬಾಯಲ್ಲಿವೆ'' ಎಂದಿದ್ದಾರೆ ಅನುರಾಗ್.

  ಇನ್ನೊಂದೆರಡು ಹಿಟ್ ಕೊಟ್ಟರೆ ಮುಗಿಯಿತು ಕತೆ: ಅನುರಾಗ್ ಕಶ್ಯಪ್

  ಇನ್ನೊಂದೆರಡು ಹಿಟ್ ಕೊಟ್ಟರೆ ಮುಗಿಯಿತು ಕತೆ: ಅನುರಾಗ್ ಕಶ್ಯಪ್

  ''ಆ ನಟರು ಇನ್ನೊಂದು ಎರಡು ಮೂರು ಸಿನಿಮಾಗಳು ಹಿಟ್‌ ಮೇಲೆ ಹಿಟ್ ಕೊಟ್ಟುಬಿಟ್ಟರೆ ಮುಗಿಯಿತು. ಅವರ ಹೆಸರನ್ನು ಜನ ಹೇಳಲು ಆರಂಭಿಸುತ್ತಾರೆ. ಅವರಿಗೆ ಗೊತ್ತಾಗುತ್ತದೆ ರಾಕಿಭಾಯ್ ಎಂದರೆ ಯಶ್, ಪುಷ್ಪರಾಜ್ ಎಂದರೆ ಅಲ್ಲು ಅರ್ಜುನ್ ಎಂಬುದು ಗೊತ್ತಾಗುತ್ತದೆ. ಈಗ ನೀವು ಹಳ್ಳಿಗೆ ಹೋದರೆ ಅಲ್ಲಿನ ಜನರಿಗೆ ರಾಕಿಭಾಯ್ ಗೊತ್ತಿದೆ, ಪುಷ್ಪರಾಜ್ ಗೊತ್ತಿದೆ. ರಾಕಿಭಾಯ್ ಅಂತೂ ಕೆಜಿಎಫ್ 1 ಬಂದಾಗಲೇ ಜನಪ್ರಿಯವಾಗಿಟ್ಟಿದ್ದ'' ಎಂದಿದ್ದಾರೆ ಅನುರಾಗ್ ಕಶ್ಯಪ್.

  ಚೆನ್ನೈನಲ್ಲಿ ಯಶ್‌ಗೆ ಪ್ರತಿಕ್ರಿಯೆ ಹೇಗಿತ್ತು?

  ಚೆನ್ನೈನಲ್ಲಿ ಯಶ್‌ಗೆ ಪ್ರತಿಕ್ರಿಯೆ ಹೇಗಿತ್ತು?

  ಆಗ ಸಂದರ್ಶಕ, ಹಿರಿಯ ಸಿನಿಮಾ ವಿಮರ್ಶಕ ಭಾರಧ್ವಜ ರಂಗನ್, ''ಹೌದು, ನಾನು 'ಕೆಜಿಎಫ್ 2' ಸಿನಿಮಾವನ್ನು ಎರಡನೇ ಬಾರಿ ನೋಡಿದೆ. ಮೊದಲಿಗೆ ವಿಜಯ್ ಸಿನಿಮಾ ನೋಡಿದೆ ಸಾಮಾನ್ಯವಾಗಿ ವಿಜಯ್ ಸಿನಿಮಾಕ್ಕೆ ವಿಶಲ್‌, ಚಪ್ಪಾಳೆ, ಸ್ಕ್ರೀನ್ ಮುಂದೆ ಡ್ಯಾನ್ಸ್ ಮಾಡುವುದು ಸಾಮಾನ್ಯ. ಆದರೆ ಯಶ್‌ಗೆ ಚೆನ್ನೈನಲ್ಲಿ ಈ ರೀತಿಯ ಫ್ಯಾನ್ ಬೇಸ್ ಇರುವುದು ನನಗೆ ಆಶ್ಚರ್ಯ ತಂದಿತ್ತು. ಸ್ಕ್ರೀನ್‌ ಮೇಲೆ ಯಶ್ ಹೆಸರು ಬರುತ್ತಿದ್ದಂತೆ ಜನ ಶಿಳ್ಳೆ, ಚಪ್ಪಾಳೆಗಳನ್ನು ಹಾಕಿದರು. ಅದನ್ನು ನೋಡಿ ನನಗೆ ಬಹಳ ಆಶ್ಚರ್ಯವಾಯಿತು'' ಎಂದಿದ್ದಾರೆ.

  ಬಾಲಿವುಡ್ಡಿಗರನ್ನು ಮೀರಿಸಿ ಮುನ್ನಡೆಯುತ್ತಿರುವ ನಮ್ಮ ನಟರು

  ಬಾಲಿವುಡ್ಡಿಗರನ್ನು ಮೀರಿಸಿ ಮುನ್ನಡೆಯುತ್ತಿರುವ ನಮ್ಮ ನಟರು

  ಭಾರತದೆಲ್ಲೆಡೆ ನಟ ಯಶ್‌ಗೆ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವಿದೆ ಎಂಬುದಕ್ಕೆ ಇದೇ ಸಾಕ್ಷಿ. ಅನುರಾಗ್ ಕಶ್ಯಪ್, ಯಶ್‌ಗೆ ಇರುವ ಅಥವಾ ರಾಕಿಭಾಯ್‌ಗೆ ಇರುವ ಉತ್ತರ ಭಾರತದ ಅಭಿಮಾನಿಗಳ ಬಗ್ಗೆ ಮಾತನಾಡಿದರೆ, ಭಾರಧ್ವಜ ರಂಗನ್ ತಮಿಳುನಾಡಿನಲ್ಲಿ ಯಶ್‌ಗೆ ಇರುವ ಫ್ಯಾನ್‌ ಬೇಸ್‌ನ ಪರಿಚಯ ಮಾಡಿಕೊಟ್ಟರು. ಒಟ್ಟಿನಲ್ಲಿ ಬಾಲಿವುಡ್‌ ಸ್ಟಾರ್ ನಟರನ್ನು ಬೀಟ್ ಮಾಡಿ ದಕ್ಷಿಣ ಭಾರತದ ನಟರು ಮುನ್ನುಗ್ಗುತ್ತಿರುವುದು ಖುಷಿಯ ವಿಚಾರ.

  English summary
  Bollywood director Anurag Kashyap and movie critic Baradwaj Rangan talks about Yash. Anurag said every small town in North India know Rocky Bhai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X