For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಸ್ಟಾರ್ ನಿರ್ದೇಶಕನ ಮುಂದಿನ ಚಿತ್ರದಲ್ಲಿ ದುಲ್ಕರ್ ಸಲ್ಮಾನ್

  |

  ಬಾಲಿವುಡ್ ಯಶಸ್ವಿ ನಿರ್ದೇಶಕ ಆರ್ ಬಲ್ಕಿ ಜೊತೆ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಭಾರಿ ಚರ್ಚೆಯಲ್ಲಿತ್ತು. ಇದೀಗ, ಈ ಪ್ರಾಜೆಕ್ಟ್ ಖಚಿತವಾಗಿ ಎಂದು ಛಾಯಾಗ್ರಾಹಕ ಪಿಸಿ ಶ್ರೀರಾಮ್ ಸ್ಪಷ್ಟಪಡಿಸಿದ್ದಾರೆ.

  ಟ್ವಿಟ್ಟರ್‌ನಲ್ಲಿ ಆರ್ ಬಲ್ಕಿ ಜೊತೆಗಿನ ಫೋಟೋ ಹಂಚಿಕೊಂಡಿರುವ ಛಾಯಾಗ್ರಾಹಕ ಶ್ರೀರಾಮ್ ''ನನ್ನ ಮುಂದಿನ ಸಿನಿಮಾ ಬಲ್ಕಿ ಹಾಗೂ ದುಲ್ಕರ್ ಸಲ್ಮಾನ್ ಜೊತೆ. ಇದು ಸೈಕಲಾಜಿಕಲ್ ಥ್ರಿಲ್ಲರ್, ಸಿನಿಮಾ ಆರಂಭಿಸಲು ಕಾತುರದಿಂದ ಕಾಯುತ್ತಿದ್ದೇನೆ'' ಎಂದು ಪೋಸ್ಟ್ ಹಾಕಿದ್ದಾರೆ.

  ರಾಂಗ್ ಸೈಡ್ ನಲ್ಲಿ ಕಾರ್ ಓಡಿಸಿ ಪೊಲೀಸರ ಬಳಿ ತಗಲಾಕಿಕೊಂಡ ನಟ ದುಲ್ಕರ್ ಸಲ್ಮಾನ್ರಾಂಗ್ ಸೈಡ್ ನಲ್ಲಿ ಕಾರ್ ಓಡಿಸಿ ಪೊಲೀಸರ ಬಳಿ ತಗಲಾಕಿಕೊಂಡ ನಟ ದುಲ್ಕರ್ ಸಲ್ಮಾನ್

  ಪ್ರಸ್ತುತ ದೇಶದಲ್ಲಿ ಹರಡಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದ ಮೇಲೆ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂಬ ಮಾಹಿತಿ ಇದೆ. ಮುಂಬೈನಲ್ಲಿ ಸಿನಿಮಾ ಚಿತ್ರೀಕರಣ ಮಾಡಲು ನಿರ್ದೇಶಕ ಪ್ಲಾನ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಜುಲೈ ಕೊನೆಯಲ್ಲಿ ಚಿತ್ರೀಕರಣ ಆರಂಭಿಸುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ.

  ಇದು ದುಲ್ಕಾರ್ ಸಲ್ಮಾನ್ ಖಾನ್ ಮೊದಲ ಹಿಂದಿ ಸಿನಿಮಾ ಅಲ್ಲ. ಇದಕ್ಕೂ ಮುಂಚೆ 2018ರಲ್ಲಿ ನಟ ಇರ್ಫಾನ್, ಮಿಥಿಲಾ ಪಾಲ್ಕರ್ ಜೊತೆ 'ಕಾರ್ವಾನ್' ಸಿನಿಮಾದಲ್ಲಿ ನಟಿಸಿದ್ದರು. 2019ರಲ್ಲಿ ಸೋನಮ್ ಕಪೂರ್ ಜೊತೆ 'ಜೋಯಾ ಫ್ಯಾಕ್ಟರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

  ಆರ್ ಬಲ್ಕಿ ಹಿಂದಿ ಸಿನಿಮಾ ಜಗತ್ತಿನಲ್ಲಿ ದೊಡ್ಡ ಹೆಸರು. 2007ರಲ್ಲಿ 'ಚೀನಿ ಕಮ್' ಚಿತ್ರದ ಮೂಲಕ ಬಿಟೌನ್ ಪ್ರವೇಶಿಸಿದ ಬಲ್ಕಿ ನಂತರ 'ಪಾ', 'ಶಮಿತಾಭ್', 'ಕಿ ಅಂಡ್ ಕಾ', 'ಪ್ಯಾಡ್‌ಮ್ಯಾನ್' ಹಾಗೂ 'ಮಿಷನ್ ಮಂಗಲ್' ಅಂತಹ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.

  ಮಕ್ಕಳ ಜವಾಬ್ದಾರಿ ಏನು ಅನ್ನೋದನ್ನ ತೋರಿಸಿಕೊಟ್ರು Duniya Vijay | Filmibeat Kannada

  ಸದ್ಯ ದುಲ್ಕರ್ ಸಲ್ಮಾನ್ ಮಲಯಾಳಂ ಭಾಷೆಯಲ್ಲಿ 'ಕುರುಪ್', 'ಸಲ್ಯೂಟ್' ಹಾಗೂ ತಮಿಳಿನಲ್ಲಿ 'ಹೇ ಸಿನಾಮಿಕ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ತೆಲುಗಿನಲ್ಲೂ ಒಂದು ಪ್ರಾಜೆಕ್ಟ್ ಆರಂಭಿಸಿದ್ದಾರೆ.

  English summary
  Malayalam star Dulquer Salman's Next Movie R Balki. its is likely to be start rolling from July.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X