»   » ಪ್ರಿಯಾಂಕ ಚೋಪ್ರಾ ಪ್ರೀತಿಯಲ್ಲಿ ಬಿದ್ದ ಹಾಲಿವುಡ್ ನಟ!

ಪ್ರಿಯಾಂಕ ಚೋಪ್ರಾ ಪ್ರೀತಿಯಲ್ಲಿ ಬಿದ್ದ ಹಾಲಿವುಡ್ ನಟ!

Posted By:
Subscribe to Filmibeat Kannada

ಹಾಲಿವುಡ್ ನಟ ಡ್ವೇನ್ ಜಾನ್ಸನ್, ಬಾಲಿವುಡ್ ನ ಹಾಟ್ ಬ್ಯೂಟಿ ಪ್ರಿಯಾಂಕ ಚೋಪ್ರಾ ಪ್ರೀತಿಯಲ್ಲಿ ಬಿದ್ದಿದ್ದಾರೆ. ಮೊದಲ ಭೇಟಿಯಲ್ಲಿಯೇ ನನಗೆ ಪ್ರಿಯಾಂಕ ತುಂಬಾ ಇಷ್ಟವಾದರು. ಬಾಲಿವುಡ್ ದೇಶಿ ಗರ್ಲ್ ರಲ್ಲಿ ಫಸ್ಟ್ ಮೀಟ್ ನಂತರವೇ ಅವರೊಂದಿಗೆ ಏನೋ ಒಂದು ಕನೆಕ್ಷನ್ ಇರುವುದನ್ನು ಕಂಡುಕೊಂಡೆ ಎಂದು ಹೇಳಿದ್ದಾರೆ.['ಬೇವಾಚ್'ಗೆ ಕಳಪೆ ವಿಮರ್ಶೆ, ಡ್ವೇನ್ ಜಾನ್ಸನ್ ಟ್ವೀಟ್ ಗುದ್ದು..]

"ಪ್ರಿಯಾಂಕ ಅಂದ್ರೆ ತುಂಬಾ ಪ್ರೀತಿ. ಇವರು ಅಮೆರಿಕಕ್ಕೆ ಬಂದಾಗ ತುಂಬಾ ಹಾಸ್ಯಮಯವಾಗಿದ್ದು. ಇಲ್ಲಿಗೆ ಬಂದು ನಮ್ಮ ಏಜೆನ್ಸಿಗೆ ಸಹಿ ಮಾಡಿ ಹೋದರು. ನಂತರ ಅವರೊಂದಿಗಿನ ಸಂಪರ್ಕ ಬೆಳೆಯಿತು' ಎಂದು ಡ್ವೇನ್ ಜಾನ್ಸನ್ ರವರು ಸಿಎನ್‌ಎನ್-ನ್ಯೂಸ್ 18 'ನೌ ಶೋಯಿಂಗ್' ಸಂದರ್ಶನದಲ್ಲಿ ಹೇಳಿದ್ದಾರೆ.

Dwane Johnson says 'I Did Fall In Love With Priyanka Chopra' in an interview

"ಮೊದಲು ನಾವು ಫೋನ್ ನಲ್ಲಿ ಮಾತನಾಡಿದ್ದೆವು. ಆ ವೇಳೆ ಕೆಲವು ಒಂದೇ ರೀತಿಯ ಅಲೋಚನೆಗಳನ್ನು ಮತ್ತು ಮಹತ್ವಾಕಾಂಕ್ಷೆಗಳನ್ನು ಹಂಚಿಕೊಂಡಿದ್ದವು. ಇದೇ ವೇಳೆ ಒಂದು ಕ್ರೇಜಿ ಐಡಿಯಾ ಹೊಳೆದು 'ಬೇವಾಚ್' ಚಿತ್ರದಲ್ಲಿ ಪ್ರಿಯಾಂಕ ಅದ್ಭುತ ವಿಲನ್ ಆಗುತ್ತಾರೆ ಎಂದು ಆಲೋಚಿಸಿದೆವು" ಎಂದು ಡ್ವೇನ್ ಜಾನ್ಸನ್ ಪ್ರಿಯಾಂಕ ಬೇವಾಚ್ ಗೆ ಸೆಲೆಕ್ಟ್ ಆದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.[ಪ್ರಿಯಾಂಕ ಚೋಪ್ರಾ ಈಗ ವಿಶ್ವದ 2ನೇ ಅತ್ಯಂತ ಸುಂದರ ಮಹಿಳೆ]

ಪ್ರಿಯಾಂಕ ಚೋಪ್ರಾ ಮೊದಲ ಬಾರಿಗೆ 'ಬೇವಾಚ್' ಚಿತ್ರದ ಮೂಲಕ ಹಾಲಿವುಡ್ ಬಿಗ್‌ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡಿದ್ದಾರೆ. 1990 ರ ದಶಕದ ಪ್ರಖ್ಯಾತ ಟಿವಿ ಶೋ 'ಬೇವಾಚ್' ಅನ್ನು ಅದೇ ಹೆಸರಲ್ಲಿ ಸಿನಿಮಾ ಮಾಡಲಾಗಿದೆ. ಇದರಲ್ಲಿ ಪ್ರಿಯಾಂಕ ಚೋಪ್ರಾ ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದು 'ಬೇವಾಚ್' ಚಿತ್ರತಂಡದವರಿಂದ ಉತ್ತಮ ಪ್ರಶಂಸೆ ಪಡೆದಿದ್ದಾರೆ.

Dwane Johnson says 'I Did Fall In Love With Priyanka Chopra' in an interview

ದಿ ರಾಕ್ ಎಂದೇ ಖ್ಯಾತ ರಾದ ಡ್ವೇನ್ ಜಾನ್ಸನ್, " 'ಬೇವಾಚ್' ಚಿತ್ರಕ್ಕೆ ಬೇಕಿದ್ದ ಅತೀ ಆಳವಾದ ವಿಲನ್ ರೋಲ್ ಗೆ ಇರಬೇಕಿದ್ದ ಎಲ್ಲಾ ಗುಣಗಳು ಪ್ರಿಯಾಂಕ ಚೋಪ್ರಾ ರಲ್ಲಿ ಇದ್ದವು. ಆದ್ದರಿಂದ ಅವರಿಗೆ ತಕ್ಕನಾದ ಸ್ಕ್ರಿಪ್ಟ್ ಬರೆದು ನಟನೆ ಮಾಡಿಸಿದೆವು' ಎಂದು ಪಿಗ್ಗಿ ಬಗ್ಗೆ ಸಂದರ್ಶನದ ವೇಳೆ ಹೇಳಿದ್ದಾರೆ. ಅಲ್ಲದೇ ಡ್ವೇನ್ ಜಾನ್ಸನ್ ಪ್ರಿಯಾಂಕರ ಆಕ್ಟಿಂಗ್ ಕೌಶಲ್ಯದ ಬಗ್ಗೆ ಹೆಚ್ಚು ಪ್ರಭಾವಿತರಾಗಿದ್ದಾರೆ.

ಅಂದಹಾಗೆ ಇತ್ತೀಚೆಗೆ ಡ್ವೇನ್ ಜಾನ್ಸನ್ ಮತ್ತು ಪ್ರಿಯಾಂಕ ಅಭಿನಯದ 'ಬೇವಾಚ್' ಚಿತ್ರದ ಬಗ್ಗೆ ಕೆಲವು ಮಾಧ್ಯಮಗಳು ಕಳಪೆ ವಿಮರ್ಶೆ ಮಾಡಿದ್ದವು. ಆದರೆ ಅದು ಚಿತ್ರತಂಡದವರ ಉತ್ಸಾಹದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. 'ಬೇವಾಚ್' ಸಿನಿಮಾ ಭಾರತದಲ್ಲಿ ಇಂದು(ಜೂನ್ 2) ತೆರೆಕಂಡಿದೆ.

English summary
Hollywood Actor Dwane Johnson says 'I Did Fall In Love With Priyanka Chopra' in an interview for 'Now Showing'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada