For Quick Alerts
  ALLOW NOTIFICATIONS  
  For Daily Alerts

  'ಬೇವಾಚ್'ಗೆ ಕಳಪೆ ವಿಮರ್ಶೆ, ಡ್ವೇನ್ ಜಾನ್ಸನ್ ಟ್ವೀಟ್ ಗುದ್ದು..

  By Suneel
  |

  ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮೊಟ್ಟ ಮೊದಲ ಬಾರಿಗೆ ಹಾಲಿವುಡ್ ನಲ್ಲಿ ಬಣ್ಣಹಚ್ಚಿರುವ 'ಬೇವಾಚ್‌' ಚಿತ್ರ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ದಿ ರಾಕ್ ಎಂದೇ ಹೆಸರಾಗಿರುವ ಹಾಲಿವುಡ್ ನ ಆಕ್ಷನ್ ಕಿಂಗ್ ಡ್ವೇನ್ ಜಾನ್ಸನ್ ಅಭಿನಯಿಸಿರುವುದು ನಿಮಗೆಲ್ಲಾ ತಿಳಿದಿರುವ ವಿಷಯ.[ಪ್ರಿಯಾಂಕ ಚೋಪ್ರಾ ಈಗ ವಿಶ್ವದ 2ನೇ ಅತ್ಯಂತ ಸುಂದರ ಮಹಿಳೆ]

  ಅಂದಹಾಗೆ ಟ್ರೈಲರ್ ಮತ್ತು ಮೇಕಿಂಗ್ ದೃಷ್ಟಿಯಿಂದ ಎಲ್ಲರ ಕುತೂಹಲ ಕೆರಳಿಸಿದ್ದ 'ಬೇವಾಚ್' ಸಿನಿಮಾ ಕೆಲವು ಮಾಧ್ಯಮಗಳಿಂದ ಕಳಪೆ ವಿಮರ್ಶೆ ಪಡೆದಿದೆ. ಈ ಹಿನ್ನೆಲೆಯಲ್ಲಿ, ಡ್ವೇನ್ ಜಾನ್ಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  'ಬೇವಾಚ್' ಅತೀ ಕಳಪೆ ವಿಮರ್ಶೆ ಪಡೆದಿದ್ದು, 'Rotten Tomatoes' ಎಂಬ ವೆಬ್ ಸೈಟ್ ನಲ್ಲಿ ಚಿತ್ರಕ್ಕೆ ಕೇವಲ ಶೇಕಡ 19 ರೇಟಿಂಗ್ ನೀಡಲಾಗಿತ್ತು. ಅಲ್ಲದೇ ಚಿತ್ರವು ಪ್ರಯೋಜನಕಾರಿಯಲ್ಲ, ದಾರಿ ತಪ್ಪಿಸುವ ಸಿನಿಮಾ, ಸ್ಟುಪಿಡ್ ಚಿತ್ರ, ಬೇಜವಾಬ್ದಾರಿಯಿಂದ ನಿರ್ಮಿಸಲಾದ ಸಿನಿಮಾ ಎಂದು ವಿಮರ್ಶೆ ಮಾಡಲಾಗಿತ್ತು. ಇದರಿಂದ ಕೋಪಗೊಂಡ ಡ್ವೇನ್ ಜಾನ್ಸನ್ ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳಪೆ ವಿಮರ್ಶೆ ವಿರುದ್ಧ ಅವರು ಹೇಳಿದ್ದಾದರೂ ಏನು ಗೊತ್ತಾ?

  ಚಿತ್ರ ಸಕಾರಾತ್ಮಕವಾಗಿದೆ

  ಚಿತ್ರ ಸಕಾರಾತ್ಮಕವಾಗಿದೆ

  "ಅಭಿಮಾನಿಗಳು ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಆದರೆ ವಿಮರ್ಶಕರು ಸಿನಿಮಾವನ್ನು ದ್ವೇಷಿಸಿ ಚಿತ್ರವನ್ನು ಕಡೆಗಾಣಿಸಿದ್ದಾರೆ. ಜನರು ಜಸ್ಟ್ 'ಬೇವಾಚ್' ಚಿತ್ರ ನೋಡಿ ನಗಬೇಕು ಮತ್ತು ಎಂಜಾಯ್ ಮಾಡಬೇಕು." - ಡ್ವೇನ್ ಜಾನ್ಸನ್

  ವಿಮರ್ಶಕರು ಮತ್ತು ಜನರ ನಡುವೆ ಭಾರಿ ವ್ಯತ್ಯಾಸ

  ವಿಮರ್ಶಕರು ಮತ್ತು ಜನರ ನಡುವೆ ಭಾರಿ ವ್ಯತ್ಯಾಸ

  " ವಿಮರ್ಶಕರು ತಮ್ಮದೇ ಆದ ವಿಷ ಮತ್ತು ಚೂರಿಹಾಕುವ ಗುಣಗಳಿಂದ ಸಿದ್ಧರಿರುತ್ತಾರೆ. ಆದರೆ ಅಭಿಮಾನಿಗಳು ಚಿತ್ರವನ್ನು ಹೆಚ್ಚು ಇಷ್ಟಪಟ್ಟಿದ್ದು, ಪಾಸಿಟಿವ್ ಸ್ಕೋರ್ ಮಾಡಿದೆ. ಇದರಿಂದಲೇ ತಿಳಿಯುತ್ತದೆ ಬೇವಾಚ್ ಬಗ್ಗೆ ವಿಮರ್ಶಕರು ಮತ್ತು ಜನರ ನಡುವೆ ಎಷ್ಟು ಸಂಪರ್ಕ ಕಡಿತಗೊಳ್ಳುತ್ತದೆ ಎಂದು" - ಡ್ವೇನ್ ಜಾನ್ಸನ್

  ಸಿನಿಮಾ ನೋಡಿದವರ ವಿಮರ್ಶೆ ಇದು ನೋಡಿ..

  ಸಿನಿಮಾ ನೋಡಿದವರ ವಿಮರ್ಶೆ ಇದು ನೋಡಿ..

  " ಬೇವಾಚ್ ಸಿನಿಮಾ ನೋಡಿದವರ ಉತ್ತಮ ವಿಮರ್ಶೆ ಇದು. ಆದರೆ ಇತರೆ ವಿಮರ್ಶಕರು ಚಿತ್ರ ನೋಡದೇ ಕಳಪೆ ವಿಮರ್ಶೆ ಮಾಡಿದ್ದಾರೆ. ಅವರು ಚಿತ್ರ ನೋಡಿದ ನಂತರವಷ್ಟೇ ಸಾರ್ವಜನಿಕವಾಗಿ ಕಳಪೆ ಎನ್ನಬೇಕು" ಎಂದು ಡ್ವೇನ್ ಜಾನ್ಸನ್ ವಿಮರ್ಶಕರೊಬ್ಬರ ಟ್ವೀಟ್ ಅನ್ನು ಉಲ್ಲೇಖಿಸಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

  'ಬೇವಾಚ್' ಸಿನಿಮಾ

  'ಬೇವಾಚ್' ಸಿನಿಮಾ

  'ಬೇವಾಚ್' ಸಿನಿಮಾದಲ್ಲಿ ಪ್ರಿಯಾಂಕ ಚೋಪ್ರಾ, ಡ್ವೇನ್ ಜಾನ್ಸನ್ ಸೇರಿದಂತೆ ಜ್ಯಾಕ್ ಎಫ್ರಾನ್, ಅಲೆಕ್ಸಾಂಡ್ರಾ ಡಾಡೇರಿಯಾ, ಕೆಲ್ಲಿ ರೋಬ್ರಾಚ್ ಮತ್ತು ಇತರರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ Seth Gordon ಆಕ್ಷನ್ ಕಟ್ ಹೇಳಿದ್ದು, ಮೇ 13 ರಂದು ಮಿಯಾಮಿಯಲ್ಲಿ ಮತ್ತು ಮೇ 25 ರಂದು ಅಮೆರಿಕ ಸೇರಿದಂತೆ ಮುಂತಾದ ಕಡೆಗಳಲ್ಲಿ ಬಿಡುಗಡೆ ಆಗಿತ್ತು.

  English summary
  Bollywood Actress Priyanka Chopra and Dwane Johnson starrer hollywood movie 'Baywatch' released recently and got poor reviews by some media. Due to get nagative reviews Dwayne Johnson hits back at the 'Baywatch' film's poor reviews.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X