»   » ಕ್ರಿಕೆಟ್ ಪ್ರಾಕ್ಟೀಸ್ ವೇಳೆ ಗಾಯಗೊಂಡ ಇಮ್ರಾನ್ ಹಸ್ಮಿ

ಕ್ರಿಕೆಟ್ ಪ್ರಾಕ್ಟೀಸ್ ವೇಳೆ ಗಾಯಗೊಂಡ ಇಮ್ರಾನ್ ಹಸ್ಮಿ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಬಾಲಿವುಡ್ ನಟ ಇಮ್ರಾನ್ ಹಸ್ಮಿ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಹೊಳೆಯುವುದು ಅವರ ರೋಚಕ ಚುಂಬನ ದೃಶ್ಯಗಳು. ಆದರೆ ಕ್ರಿಕೆಟ್ ಗೂ ಅವರಿಗೂ ಏನು ಸಂಬಂಧ ಎನ್ನುತ್ತೀರಾ. ಈ 'ಸೀರಿಯಲ್ ಕಿಸ್ಸರ್' ಕ್ರಿಕೆಟ್ ಪ್ರಾಕ್ಟೀಸ್ ವೇಳೆ ಗಾಯಗೊಂಡಿದ್ದಾರೆ. ಕ್ರಿಕೆಟರ್ ಅಜರುದ್ದೀನ್ ಕುರಿತ ಕಥೆಯಾಧಾರಿತ ಚಿತ್ರಕ್ಕಾಗಿ ತರಬೇತಿ ಪಡೆಯುತ್ತಿರಬೇಕಾದರೆ ಅವರ ಕೈಗೆ ಪೆಟ್ಟಾಗಿದೆ.

  ಕಳೆದ ವರ್ಷವೇ ಈ ಚಿತ್ರ ಆರಂಭವಾದರೂ ಮಗನ ಅನಾರೋಗ್ಯದ ಕಾರಣ ಚಿತ್ರ ಮುಂದೂಡಲ್ಪಟ್ಟಿತ್ತು. ಈ ವರ್ಷವೂ ಚಿತ್ರ ತಡವಾಗಿ ಸೆಟ್ಟೇರುತ್ತಿದೆ. "ಅಜರುದ್ದೀನ್ ಅವರ ಪಾತ್ರ ಪೋಷಣೆಗಾಗಿ ಇಮ್ರಾನ್ ಅವರು ಸಾಕಷ್ಟು ಶ್ರಮಿಸುತ್ತಿದಾರೆ. ಜೊತೆಗೆ ಕ್ರಿಕೆಟ್ ನ ಅ ಆ ಇ ಈ ಕೂಡ ಕಲಿಯುತ್ತಿದ್ದು, ಈ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ" ಎನ್ನುತ್ತವೆ ಮೂಲಗಳು. [ಇಷಾ ಗುಪ್ತಾ ಜೊತೆ 20 ನಿಮಿಷ ಹಷ್ಮಿ ಹಾಟ್ ಕಿಸ್]

  Emraan Hashmi Injured during cricket practice

  ಅಜರುದ್ದೀನ್ ಅವರು ಬಿರುಸಿನ ಆಟಕ್ಕೆ ಹೆಸರಾದವರು. ತೆರೆಯ ಮೇಲೆ ಅದೇ ರೀತಿ ಪ್ರದರ್ಶನ ನೀಡಬೇಕೆಂದು ಇಮ್ರಾನ್ ಅವರು ಸಾಕಷ್ಟು ಪ್ರಿಪೇರ್ ಆಗುತ್ತಿದ್ದಾರಂತೆ. ಈ ಸಂದರ್ಭದಲ್ಲಿ ಅವರ ಕೈಗೆ ಪೆಟ್ಟಾಗಿದ್ದು ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.

  ಈ ಚಿತ್ರದ ನಿರ್ದೇಶಕ ಟೋನಿ ಡಿಸೋಜಾ ಅವರು ಮಾತನಾಡುತ್ತಾ, "ಅಜರುದ್ದೀನ್ ಅವರು ಒಬ್ಬ ಯಶಸ್ವಿ ಕ್ರಿಕೆಟರ್. ಅವರ ಜೀವನ ಚರಿತ್ರೆಯನ್ನು ಎರಡೂವರೆ ಗಂಟೆಗಳಲ್ಲಿ ತೆರೆಗೆ ತರುವುದು ಸವಾಲಿನ ಕೆಲಸ. ವಿವಾದಗಳು, ವೃತ್ತಿಬದುಕಿನ ಏರಿಳಿತಗಳು, ಮ್ಯಾಚ್ ಫಿಕ್ಸಿಂಗ್, ಆರೋಪ, ಬಿರುಕುಗಳಿಂದ ಕೂಡಿದೆ. ಇವೆಲ್ಲವನ್ನೂ ತೆರೆಗೆ ತರುವುದು ಸವಾಲಿನ ಕೆಲಸ" ಎನ್ನುತ್ತಾರೆ.

  ಇಮ್ರಾನ್ ಹಸ್ಮಿ ಅವರು ದಿನಕ್ಕೆ ಅಂದಾಜು 300 ರಿಂದ 400 ಬಾಲ್ ಗಳ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ಜೀವತುಂಬಲು ಸಾಕಷ್ಟು ಬೆವರರಿಸುತ್ತಿದ್ದು ಅವರ ವೃತ್ತಿಪರತೆಯನ್ನು ನಿರ್ದೇಶಕರು ಕೊಂಡಾಡಿದ್ದಾರೆ. ಅಜರುದ್ದೀನ್ ಅವರನ್ನು ಅನುಕರಿಸುವುದು ನಿಜಕ್ಕೂ ಸವಾಲಿನ ಕೆಲಸ. ಈ ಕೆಲಸದಲ್ಲಿ ಇಮ್ರಾನ್ ಹಸ್ಮಿ ಹಂತಹಂತವಾಗಿ ಮುನ್ನುಗ್ಗುತ್ತಿದ್ದಾರೆ. (ಏಜೆನ್ಸೀಸ್)

  Read in English: Emraan Hashmi Injured!
  English summary
  Emraan Hashmi has injured himself at the sets of his upcoming film which is about cricketer Azharuddin. Last year, his films got pushed due to his son's bad health and it looks like even the start of this year is not so great for the actor. The Ungli has injured himself now while training for the biopic.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more