For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕಿಯ ಕಾರು ಕದ್ದ ನಟ! ದೂರು ದಾಖಲು

  |

  'ಗ್ಯಾಂಗ್ಸ್ ಆಫ್ ವಸೇಪುರ್' ಸಿನಿಮಾದಲ್ಲಿ ಡೆಫನೆಟ್ ಪಾತ್ರದಲ್ಲಿ ನಟಿಸಿ ಖ್ಯಾತಿ ಗಳಿಸಿರುವ ಜಿಶಾನ್ ಖ್ವಾದ್ರಿ ಮೇಲೆ ಈಗ ಕಳ್ಳತನದ ಹಾಗೂ ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ.

  ಹಿಂದಿ ಸಿನಿಮಾದ ಕಲ್ಟ್ ಕ್ಲಾಸಿಕ್ ಎಂದೇ ಕರೆಯಲಾಗಿರುವ 'ಗ್ಯಾಂಗ್ಸ್ ಆಫ್ ವಸೇಪುರ್' ಸಿನಿಮಾದಲ್ಲಿ ನಟಿಸುವ ಜೊತೆಗೆ ಕತೆ ಸಹ ಬರೆದಿರುವ ಜಿಶಾನ್ ಖ್ವಾದ್ರಿ ಮೇಲೆ ನಿರ್ಮಾಪಕಿ ಶಾಲಿನಿ ಚೌಧರಿ ತಮ್ಮ ಕಾರು ಕದ್ದ ಆರೋಪ ಹೊರಿಸಿದ್ದಾರೆ.

  ಮುಂಬೈನ ಮಲಾಡ್ ಪೊಲೀಸ್ ಠಾಣೆಗೆ ದೂರು ನೀಡಿರುವ ನಿರ್ಮಾಪಕಿ ಶಾಲಿನಿ ಚೌಧರಿ, ನಟ ಜಿಶಾನ್ ಖ್ವಾದ್ರಿ ತಮ್ಮ 38 ಲಕ್ಷ ಮೌಲ್ಯದ ಆಡಿ ಕಾರು ಕದ್ದಿರುವುದಲ್ಲದೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.

  ಜನಪ್ರಿಯ ಟಿವಿ ಶೋ 'ಕ್ರೈಮ್ ಪೆಟ್ರೋಲ್'ನ ನಿರ್ಮಾಪಕಿ ಆಗಿರುವ ಶಾಲಿನಿ ಚೌಧರಿ, ಜಿಶಾನ್ ಖ್ವಾದ್ರಿ ವಿರುದ್ಧ ವಿವರವಾದ ದೂರು ಸಲ್ಲಿಸಿದ್ದು, ತಾವು 2017ರಲ್ಲಿ ಜಿಶಾನ್ ಖ್ವಾದ್ರಿಯನ್ನು ಭೇಟಿಯಾಗಿದ್ದಾಗಿಯೂ ಆಗ ಅವರು 'ಫ್ರೈಡೆ ಟು ಫ್ರೈಡೆ' ಹೆಸರಿನ ಸಂಸ್ಥೆಯನ್ನು ಪತ್ನಿಯೊಂದಿಗೆ ನಡೆಸುತ್ತಿದ್ದರು. ನಾನು ಅವರೊಟ್ಟಿಗೆ ಸೇರಿ ಕ್ರೈಂ ಪ್ಯಾಟ್ರೋಲ್ ಶೋ ನಡೆಸಿದೆ ಎಂದಿದ್ದಾರೆ.

  2021 ರ ಜೂನ್ ತಿಂಗಳಲ್ಲಿ ಪತ್ನಿಯೊಟ್ಟಿಗೆ ನನ್ನ ಮನೆಗೆ ಬಂದಿದ್ದ ಜಿಶಾನ್, ತಮಗೆ ಸೋನಿ ಚಾನೆಲ್‌ನಲ್ಲಿ ಏಪ್ರಿಲ್ ಹೆಸರಿನ ಕಾಮಿಡಿ ಶೋ ನಡೆಸಲು ಆಹ್ವಾನ ಬಂದಿದ್ದು, ಇದಕ್ಕಾಗಿ ನಾನು ಪದೇ ಪದೇ ಸೋನಿ ಆಫೀಸ್‌ಗೆ ಹೋಗಬೇಕಿದೆ. ಹಾಗಾಗಿ ನನಗೆ ಒಳ್ಳೆಯ ಕಾರು ಬೇಕೆಂದು ಹೇಳಿದರು. ಅದಾಗಲೇ ಅವರೊಟ್ಟಿಗೆ ಸಿನಿಮಾ ಹಾಗೂ 'ಹಾಲಾಹಲ್' ಹೆಸರಿನ ಸಿನಿಮಾ ಮಾಡಿದ್ದರಿಂದ ಅವರನ್ನು ನಂಬಿ ನನ್ನ 36 ಲಕ್ಷ ಬೆಲೆಯ ಆಡಿ ಕಾರನ್ನು ನೀಡಿದೆ.

  ಅದಾದ ಕೆಲವು ದಿನಗಳ ಬಳಿಕ ಅವರಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ. ನನ್ನ ವಿರುದ್ಧ ಯಾರೋ 1.40 ಕೋಟಿಯ ವಂಚನೆ ಪ್ರಕರಣ ದಾಖಲಿಸಿದ್ದಾರೆ, ಹಾಗಾಗಿ ದೆಹಲಿ ಹೈಕೋರ್ಟ್‌ಗೆ ಬಂದಿದ್ದೇನೆ ಎಂದರು. ಅದಾದ ಕೆಲವು ದಿನಗಳ ಬಳಿಕ ಕರೆ ಮಾಡಿದಾಗ ಮತ್ತೆ ಅವರು ಕರೆ ಸ್ವೀಕರಿಸಲಿಲ್ಲ, ಅವರ ಪತ್ನಿಯೂ ಕರೆ ಸ್ವೀಕರಿಸಲಿಲ್ಲ. ಆ ನಂತರ ಗೊತ್ತಾಯಿತು ನನ್ನ ಕಾರನ್ನು ಕೇವಲ 12 ಲಕ್ಷ ರುಪಾಯಿಗೆ ಮಾರಾಟ ಮಾಡಿದ್ದಾರೆಂದು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ನಿರ್ಮಾಪಕಿ ಶಾಲಿನಿ ಚೌಧರಿ.

  ಈ ಬಗ್ಗೆ ದೂರು ನೀಡುತ್ತೇನೆ ಎಂದು ಜಿಶಾನ್‌ಗೆ ಸಂದೇಶ ಕಳಿಸಿದಾಗ ಆತ ಕರೆ ಮಾಡಿ ನನಗೆ ಜೀವ ಬೆದರಿಕೆ ಹಾಕಿದ. ಆತ ಮಾತ್ರವೇ ಅಲ್ಲದೆ ಬೇರೆಯವರುಗಳಿಂದ ಕರೆ ಮಾಡಿಸಿ ಬೆದರಿಕೆ ಹಾಕಿಸಿದ. ಹಲವು ಕಾರಣಗಳಿಂದ ನನಗೆ ಜೀಶಾನ್ ವಿರುದ್ಧ ದೂರು ನೀಡಲು ಆಗಿರಲಿಲ್ಲ ಈಗ ದೂರು ನೀಡುತ್ತಿದ್ದೇನೆ ಎಂದಿದ್ದಾರೆ ಶಾಲಿನಿ ಚೌಧರಿ.

  English summary
  FIR filed against actor Zeishan Quadri in Mumbai's Malad police station for cheating a producer and threatening her.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X