For Quick Alerts
  ALLOW NOTIFICATIONS  
  For Daily Alerts

  ಶರ್ಟ್‌ ಜೊತೆ ಶಾರುಕ್ ಖಾನ್ ಮಾತುಕತೆ!: ಹುಬ್ಬೇರಿಸಿದ ಪತ್ನಿ ಗೌರಿ ಖಾನ್!

  |

  'ಜೀರೊ' ನಂತರ ಶಾರುಕ್ ಖಾನ್ ಹೀರೊ ಆಗಿ ನಟಿಸಿದ ಯಾವುದೇ ಸಿನಿಮಾ ಥಿಯೇಟರ್‌ಗೆ ಬಂದಿಲ್ಲ. ಅಭಿಮಾನಿಗಳು ನೆಚ್ಚಿ ನಟನ ಸಿನಿಮಾಗಾಗಿ ಕಾದು ಕಾದು ಸುಸ್ತಾಗಿದ್ದಾರೆ. ಸ್ವತಃ ಕಿಂಗ್ ಖಾನ್ ಕೂಡ ಕಾಯುತ್ತಿದ್ದಾರೆ. ಇದನ್ನು ಸ್ಪೆಷಲ್ ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ. ಶಾರುಕ್ ಖಾನ್ ಶರ್ಟ್‌ಲೆಸ್ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  4 ವರ್ಷಗಳ ಹಿಂದೆ ಶಾರುಕ್ ಖಾನ್ ನಟನೆಯ 'ಜೀರೊ' ಕನ್ನಡದ 'KGF' ಎದುರು ರಿಲೀಸ್ ಆಗಿ ಮುಗ್ಗರಿಸಿತ್ತು. ನಂತರ ಬಹಳ ಗ್ಯಾಪ್ ತಗೊಂಡು ಶಾರುಕ್ 'ಪಠಾಣ್' ಸಿನಿಮಾ ಘೋಷಿಸಿದ್ದರು. ಕೊರೊನಾ ಕಾರಣದಿಂದ ಸಿನಿಮಾ ತಡವಾಗುತ್ತಾ ಬಂದಿತ್ತು. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸ್ತಿದ್ದು, ಮತ್ತೊಂದು ಮುಖ್ಯ ಪಾತ್ರದಲ್ಲಿ ಜಾನ್ ಅಬ್ರಹಾಂ ಬಣ್ಣ ಹಚ್ಚಿದ್ದಾರೆ. ಸದ್ಯ ಚಿತ್ರದ ಲುಕ್‌ವೊಂದು ಸಖತ್ ಸದ್ದು ಮಾಡ್ತಿದೆ.

  ಸಲ್ಮಾನ್ ಖಾನ್ ಮನೆಯಲ್ಲಿ ಗಣೇಶ ಹಬ್ಬ: ವಿಘ್ನ ನಿವಾರಕನಿಗೆ ಆರತಿ ಬೆಳಗಿ ಸಲ್ಲು ಭಜನೆಸಲ್ಮಾನ್ ಖಾನ್ ಮನೆಯಲ್ಲಿ ಗಣೇಶ ಹಬ್ಬ: ವಿಘ್ನ ನಿವಾರಕನಿಗೆ ಆರತಿ ಬೆಳಗಿ ಸಲ್ಲು ಭಜನೆ

  ಶಾರುಕ್ ಖಾನ್ ಮುಖ ತೋರಿಸದೇ ಹುರಿಗಟ್ಟಿದ ದೇಹವನ್ನು ತೋರಿಸುತ್ತಾ ಫೋಟೊವೊಂದನ್ನು ಶೇರ್ ಮಾಡಿದ್ದಾರೆ. ಶರ್ಟ್‌ಲೆಸ್ ಫೋಟೊದಲ್ಲಿ ಕಿಂಗ್‌ಖಾನ್‌ನ ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಉದ್ದನೆಯ ಕೂದಲು ಬಿಟ್ಟು ಸಿಕ್ಸ್‌ಪ್ಯಾಕ್ ಪ್ರದರ್ಶಿಸಿದ್ದಾರೆ. "ನಾನು ನನ್ನ ಶರ್ಟ್ ಜೊತೆ.. ನೀವಿಲ್ಲಿ ಇದ್ದಿದ್ದರೆ ಹೇಗಿರುತ್ತಿತ್ತು, ಇದನ್ನು ಕಂಡು ಆಶ್ಚರ್ಯ ಪಡುತ್ತಿದ್ದಿರಿ, ಇದಕ್ಕೆ ತುಂಬಾ ನಗುತ್ತಿದ್ದಿರಿ, ನೀವು ಅಲ್ಲಿದ್ದರೆ ಹೀಗಾಗುತ್ತಿತ್ತು. ನಾನು ಕೂಡ 'ಪಠಾಣ್‌'ಗಾಗಿ ಕಾಯುತ್ತಿದ್ದೀನಿ". ಎಂದು ಬರೆದುಕೊಂಡಿದ್ದಾರೆ.

  ಜಾವೇದ್ ಅಖ್ತರ್ 'ಸಿಲ್‌ಸಿಲಾ' ಚಿತ್ರಕ್ಕಾಗಿ ಬರೆದ ಪದ್ಯದ ಸಾಲುಗಳನ್ನು ಬಳಸಿ ಪೋಸ್ಟ್‌ ಮಾಡಿದ್ದಾರೆ. ತಮ್ಮ ಶರ್ಟ್‌ ಜೊತೆ ಸಂಭಾಷಣೆ ನಡೆಸುವಂತೆ ಶಾರುಕ್ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಈಗ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ತರಹೇವಾರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇನ್ನು ಶಾರುಕ್ ಪತ್ನಿ ಗೌರಿ ಖಾನ್‌ ಕೂಡ ಕಾಮೆಂಟ್ ಮಾಡಿದ್ದು, "ಅಯ್ಯೋ ದೇವರೇ, ಈಗ ಇವರು ಶರ್ಟ್‌ ಜೊತೆಗೂ ಮಾತನಾಡಿತ್ತಿದ್ದಾರೆ" ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

  Gauri Khan drops a hilarious comment on a recent Post shared by Shah Rukh Khan

  ಅಂದಹಾಗೆ ಸಿದ್ಧಾರ್ಥ್‌ ಆನಂದ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮುಂದಿನ ವರ್ಷ ಗಣರಾಜ್ಯೋತ್ಸವ ಸಂಭ್ರಮದಲ್ಲಿ ತೆರೆಗೆ ಬರಲಿದೆ. ಇನ್ನು 'ಜವಾನ್' ಎನ್ನುವ ಮತ್ತೊಂದು ಚಿತ್ರದಲ್ಲೂ ಕಿಂಗ್ ಖಾನ್ ನಟಿಸ್ತಿದ್ದಾರೆ. ತಮಿಳು ನಿರ್ದೇಶಕ ಅಟ್ಲಿ ಆಕ್ಷನ್ ಕಟ್ ಹೇಳ್ತಿರೋ ಈ ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಶಾರುಕ್ ಈ ಚಿತ್ರದ ಸೈನಿಕನಾಗಿ ನಟಿಸ್ತಿದ್ದು, ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ.

  English summary
  Gauri Khan drops a hilarious comment on a recent Post shared by Shah Rukh Khan.Know More.
  Monday, September 26, 2022, 10:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X