»   » 'ಗ್ರ್ಯಾಂಡ್ ಮಸ್ತಿ' ನೋಡಿ ಸಾವಪ್ಪಿದ ಹರೆಯದ ಯುವಕ

'ಗ್ರ್ಯಾಂಡ್ ಮಸ್ತಿ' ನೋಡಿ ಸಾವಪ್ಪಿದ ಹರೆಯದ ಯುವಕ

Posted By:
Subscribe to Filmibeat Kannada

ಬಾಲಿವುಡ್ ಬಾಕ್ಸ್ ಆಫೀಸಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಚಿತ್ರ 'ಗ್ರ್ಯಾಂಡ್ ಮಸ್ತಿ'. ಇದೊಂದು ವಯಸ್ಕರ ಕಾಮಿಡಿ ಚಿತ್ರವಾಗಿದ್ದು ಪ್ರೇಕ್ಷಕರಿಂದ ಉತ್ತರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ ವಿಮರ್ಶಕರಿಂದ ಕಟು ಟೀಕೆಗೆ ಗುರಿಯಾದ ಚಿತ್ರ.

ಶೀಘ್ರದಲ್ಲೇ ಈ ಚಿತ್ರದ ಕಲೆಕ್ಷನ್ ರು.100 ಕೋಟಿ ಮುಟ್ಟುವ ಎಲ್ಲ ಸೂಚನೆಗಳು ಇವೆ. ಇದೊಂದು ಪಕ್ಕಾ ಕಾಮಿಡಿ ಚಿತ್ರವಾಗಿದ್ದು ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತಹ ಸನ್ನಿವೇಶಗಳು ಇವೆ. ಈ ಚಿತ್ರವನ್ನು ನೋಡಿದ 22ರ ಹರೆಯದ ಯುವಕನೊಬ್ಬ ನಕ್ಕು ನಕ್ಕು ಥಿಯೇಟರ್ ನಲ್ಲೇ ಸಾವಪ್ಪಿದ್ದಾನೆ.

ಮೃತಪಟ್ಟ ಯುವಕನನ್ನು ಮಂಗೇಶ್ ಭೋಗಲ್ ಎಂದು ಗುರುತಿಸಲಾಗಿದೆ. ತನ್ನ ಗರ್ಲ್ ಫ್ರೆಂಡ್ ಜೊತೆ ಈ ಚಿತ್ರವನ್ನು ವೀಕ್ಷಿಸಲು ಹೋಗಿದ್ದ. ಚಿತ್ರ ನೋಡಿ ಈಗ ಹೊಟ್ಟೆ ಹುಣ್ಣಾಗುವಂತೆ ನಗುತ್ತಲೇ ಇದ್ದ. ಕಡೆಗೆ ಈತನ ನಗು ತಡೆದುಕೊಳ್ಳಲು ಸಾಧ್ಯವಾಗದೆ ಹೃದಯಾಘಾತದಿಂದ ಸಾವಪ್ಪಿದ್ದಾನೆ.

ಕೂಡಲೆ ಭೋಗಲ್ ಅವರನ್ನು ಮಹಾರಾಷ್ಟ್ರದ ವಾಸೈ ಪಶ್ವಿಮ ಪ್ರದೇಶದಲ್ಲಿರುವ ಕಾರ್ಡಿನಲ್ ಗ್ರಾಸಿಯಾಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟೊತ್ತಿಗಾಗಲೆ ಆತ ಇಹಲೋಹ ತ್ಯಜಿಸಿದ್ದ. 'ನಗುವೇ ಸ್ವರ್ಗ ಅಳುವೇ ನರಕ' ಎಂಬ ಮಾತಿಗೆ ಈತ ಅಪವಾದವಾಗಿದ್ದಾನೆ.

ಕೆಟಿ ವಿಷನ್ ಎಂಬ ಮಲ್ಟಿಪ್ಲ್ಲೆಕ್ಸ್ ಚಿತ್ರಮಂದಿರದಲ್ಲಿ ಈ ಚಿತ್ರವನ್ನು ಭೋಗಲ್ ಮತ್ತು ಆತನ ಗರ್ಲ್ ಫ್ರೆಂಡ್ ವೀಕ್ಷಿಸಿದ್ದರು. ಈತ ನಕ್ಕು ನಕ್ಕು ಮೃತಪಟ್ಟಿದ್ದು ಇತರೆ ವೀಕ್ಷಕರನ್ನೂ ದಂಗುಬಡಿಸಿದೆ. ಈತ ಸಂಜೆ 6 ಗಂಟೆ ಶೋ ನೋಡಲು ಬಂದಿದ್ದ ಎಂದು ಚಿತ್ರಮಂದಿರದ ಮಾಲೀಕರು ತಿಳಿಸಿದ್ದಾರೆ. ಇನ್ನು ಗ್ರ್ಯಾಂಡ್ ಮಸ್ತಿ ಚಿತ್ರದಲ್ಲಿ ಅಂತಹದ್ದೇನಿದೆಯಪ್ಪಾ ಅಂದ್ರೆ...

ಬಹಳಷ್ಟು ಮಂದಿಗೆ ಗ್ರ್ಯಾಂಡ್ ಮಸ್ತಿ ಇಷ್ಟವಾಗಿಲ್ಲ

2004ರಲ್ಲಿ ತೆರೆಕಂಡ ಮಸ್ತಿ ಚಿತ್ರದ ಮುಂದುವರಿದ ಭಾಗ ಗ್ರ್ಯಾಂಡ್ ಮಸ್ತಿ. ಈ ಚಿತ್ರ ಬಹಳಷ್ಟು ಮಂದಿಗೆ ಇಷ್ಟಪಟ್ಟಿಲ್ಲವಾದರೂ ಬಾಕ್ಸ್ ಆಫೀಸಲ್ಲಿ ಮಾತ್ರ ಸಖತ್ ಸುದ್ದಿ ಮಾಡುತ್ತಿದೆ.

ಪಾತ್ರವರ್ಗದಲ್ಲಿ ವಿವೇಕ್ ಒಬೆರಾಯ್

ಚಿತ್ರದ ಪಾತ್ರವರ್ಗದಲ್ಲಿ ವಿವೇಕ್ ಒಬೆರಾಯ್, ಅಫ್ತಬ್ ಶಿವದಾಸಾನಿ ಹಾಗೂ ರಿತೇಶ್ ದೇಶ್ ಮುಖ್ ಅವರು ಪ್ರಮುಖ ಪಾತ್ರಗಳನ್ನು ಪೋಷಿಸಿದ್ದಾರೆ.

ಮೂವರು ಕಾಲೇಜು ಗೆಳೆಯರ ಸುತ್ತ ಸುತ್ತುವ ಕಥೆ

ಸೆಪ್ಟೆಂಬರ್ 13ರಂದು ಬಿಡುಗಡೆಯಾದ 'ಗ್ರ್ಯಾಂಡ್ ಮಸ್ತಿ' ಚಿತ್ರದ ಕಥೆ ಮೂವರು ಕಾಲೇಜು ಗೆಳೆಯರ ಸುತ್ತ ಸುತ್ತುತ್ತದೆ.

ತಮಾಷೆ ಮಾಡುತ್ತಾ ಇಕ್ಕಟ್ಟಿಗೆ ಸಿಲುಕುವ ಗೆಳೆಯರು

ಮತ್ತೆ ಒಂದಾಗುವ ಈ ಗೆಳೆಯರು ಸಾಕಷ್ಟು ತಮಾಷೆ ಮಾಡುತ್ತಾ ಸಾಗುತ್ತಿರುತ್ತಾರೆ. ಕೆಲವೊಂದು ಸಮಸ್ಯೆಗಳಿಗೂ ಸಿಲುಕುತ್ತಾರೆ.

ಮೂರನೇ ಭಾಗದ ಸಿದ್ಧತೆಯಲ್ಲಿ ಚಿತ್ರತಂಡ

ಈ ಚಿತ್ರದ ಮೂರನೇ ಭಾಗವೂ ಮಾಡುವ ಬಗ್ಗೆ ಚಿತ್ರದ ನಿರ್ಮಾಪಕರು ಆಲೋಚಿಸಿದ್ದಾರೆ ಎಂಬ ಸುದ್ದಿ ಇದೆ.

English summary
Have you ever laughed so hard that you feel you are going to die? Believe it or not! A 22-year-old boy had a sudden death as he was laughing while he was watching the recently released adult comedy Grand Masti.
Please Wait while comments are loading...