For Quick Alerts
  ALLOW NOTIFICATIONS  
  For Daily Alerts

  ಯಾರೀ ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್, ಊಹಿಸಿ?

  By ಉದಯರವಿ
  |

  ಸೆಲೆಬ್ರಿಟಿಗಳ ಮಕ್ಕಳು ಎಂದರೆ ಅಭಿಮಾನಿಗಳಿಗೆ ವಿಶೇಷ ಅಕ್ಕರೆ, ಪ್ರೀತಿ, ಕುತೂಹಲ ಇದ್ದೇ ಇರುತ್ತದೆ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ಸಾರ್ವಜನಿಕವಾಗಿ ತೋರಿಸುವುದೇ ಅಪರಾಧ ಎಂಬಂತಿರುತ್ತಾರೆ. ಐಶ್ವರ್ಯಾ ರೈ ಅವರ ಪುತ್ರಿ ಆರಾಧ್ಯಾ ಬಚ್ಚನ್ ಅವರನ್ನು ಅಭಿಮಾನಿಗಳಿಗೆ ತೋರಿಸಲು ಸಾಕಷ್ಟು ಸಮಯ ತೆಗೆದುಕೊಂಡದ್ದು ಗೊತ್ತೇ ಇದೆ.

  ಅದೆಲ್ಲಾ ಹಳೆಯ ಕಥೆಯಾಯಿತು. ಈಗ ಈ ಚಿತ್ರದ ಕಡೆಗೆ ಗಮನಹರಿಸೋಣ. ಈ ಚಿತ್ರದಲ್ಲಿರುವುದು ಅಕ್ಷಯ್ ಕುಮಾರ್ ಹಾಗೂ ಟ್ವಿಂಕಲ್ ಖನ್ನಾ ಅವರ ಮುದ್ದಿನ ಮಗಳು ನಿತಾರಾ. ಇಷ್ಟು ದಿನ ಅಷ್ಟಾಗಿ ಯಾರ ಕಣ್ಣಿಗೂ ಬಿದ್ದಿರಲಿಲ್ಲ ಈ ಲಿಟ್ಲ್ ಸ್ಟಾರ್.

  ಇತ್ತೀಚೆಗಷ್ಟೇ ಅಕ್ಷಯ್ ಅವರ ಪುತ್ರ ಆರವ್ ಮಾಧ್ಯಮಗಳ ಕ್ಯಾಮೆರಾ ಕಣ್ಣಿನಲ್ಲಿ ಬಂಧಿಯಾಗಿದ್ದರು. ಇದೀಗ ಅವರ ಮುದ್ದಿನ ಮಗಳು ನಿತಾರಾ ಅವರನ್ನು ನೋಡುವ ಅವಕಾಶ ಸಿಕ್ಕಿದೆ. ಸ್ವತಃ ಅಕ್ಷಯ್ ಅವರು ತಮ್ಮ ಮಗಳು ನಿತಾರಾ ಫೋಟೋಗಳನ್ನು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

  ಬಹಳಷ್ಟು ತಾರೆಗಳು ತಮ್ಮ ಮಕ್ಕಳನ್ನು ಸಭೆ ಸಮಾರಂಭಕ್ಕೆ ಆಗಾಗ ಕರೆದುಕೊಂಡು ಬರುತ್ತಿರುತ್ತಾರೆ. ಆದರೆ ಅಕ್ಷಯ್ ದಂಪತಿಗಳು ಮಾತ್ರ ಹಾಗಲ್ಲ. ಇದುವರೆಗೂ ತಮ್ಮ ಮಗಳನ್ನು ಯಾವುದೇ ಸಭೆ ಸಮಾರಂಭಕ್ಕೆ ಕರೆದುಕೊಂಡು ಬಂದ ನಿದರ್ಶನವಿಲ್ಲ.

  English summary
  Akshay Kumar and Twinkle Khanna have always kept their kids away from the paparazzi. Only recently we have been able to see his son Aarav getting spotted by the media shutterbugs. When it comes to their daughter, Nitara, the parents have not let media get anywhere near her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X