Don't Miss!
- Finance
ಟಾಟಾದ ವಾಹನಗಳಿಗೆ ಬಂಪರ್ ರಿಯಾಯಿತಿ: ಪ್ರತಿ ತಿಂಗಳು ಕಡಿಮೆ ಇಎಂಐ
- Sports
ಅತಿಹೆಚ್ಚು ಬಾರಿ 10 ವಿಕೆಟ್ಗಳ ಗೆಲುವು ಸಾಧಿಸಿರುವ ಐಪಿಎಲ್ ತಂಡ ಯಾವುದು ಗೊತ್ತಾ?
- News
ಕೊರೊನಾ ನೆಗಟಿವ್ ಬಂದಿದ್ದರೂ ಕೂಡ ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ
- Lifestyle
ಹನುಮ ಜಯಂತಿ 2021 :ಪೂಜಾವಿಧಾನ ಹಾಗೂ ಹನುಮನನ್ನು ಒಲಿಸಿಕೊಳ್ಳುವ ಮಾರ್ಗಗಳು ಇಲ್ಲಿದೆ
- Automobiles
ಹೊಸ ಫೀಚರ್ಸ್ ಒಳಗೊಂಡ ಸೊನೆಟ್ ಹೆಚ್ಟಿಎಕ್ಸ್ ಪರಿಚಯಿಸಲಿದೆ ಕಿಯಾ ಮೋಟಾರ್ಸ್
- Education
English Language Day 2021: ಇಂಗ್ಲೀಷ್ ಭಾಷೆ ಕಲಿಯೋದು ಏಕೆ ಮುಖ್ಯ ? ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಮೀರ್ ಖಾನ್ ಹುಟ್ಟುಹಬ್ಬ: 'ಮಿಸ್ಟರ್ ಪರ್ಫೆಕ್ಷನಿಸ್ಟ್' ನಟನೆಯ 7 ಗಮನಾರ್ಹ ಪಾತ್ರಗಳಿವು
ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂತನೆ ಖ್ಯಾತಿಗಳಿಸಿರುವ ನಟ ಆಮೀರ್ ಖಾನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 56ನೇ ವಂಸತಕ್ಕೆ ಕಾಲಿಟ್ಟಿರುವ ನಟ ಆಮೀರ್ ಖಾನ್ ಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.
ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ನಟ ಆಮೀರ್ ಖಾನ್ 50ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಮೀರ್ ಇಂದು ಇಡೀ ವಿಶ್ವವೇ ಮೆಚ್ಚುವ ನಟನಾಗಿ ಬೆಳೆದಿದ್ದಾರೆ. ಪ್ರತಿಯೊಂದು ಚಿತ್ರಗಳಲ್ಲೂ ಹೊಸತನ ಮತ್ತು ಪಾತ್ರಗಳಿಗಾಗಿ ಆಮೀರ್ ನಡೆಸುವ ತಯಾರಿ ಯುವ ಕಲಾವಿದರಿಗೆ ಮಾದರಿ. ಅದ್ಭುತ ಸಿನಿಮಾಗಳನ್ನು ನೀಡಿರುವ ಆಮೀರ್ ಖಾನ್ ಅವರ 7 ಅತ್ಯಂತ ಗಮನಾರ್ಹ ಪಾತ್ರಗಳ ಬಗ್ಗೆ ಒಂದು ವಿವರ ಇಲ್ಲಿದೆ.
ಬಾಯ್ ಫ್ರೆಂಡ್ಗಾಗಿ ಹೇರ್ ಸ್ಟೈಲಿಸ್ಟ್ ಆದ ಆಮೀರ್ ಖಾನ್ ಪುತ್ರಿ

ಜೋ ಜೀತಾ ವಹಿ ಸಿಕಂದರ್
ಆಮೀರ್ ಖಾನ್ ನಟನೆಯ ಜೋ ಜೀತಾ ವಹಿ ಸಿಕಂದರ್ ಸಿನಿಮಾ 1992ರಲ್ಲಿ ತೆರೆಗೆ ಬಂದಿದೆ. ಚಿತ್ರದಲ್ಲಿ ಆಮೀರ್ ಸಂಜು ಪಾತ್ರದ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು. ಟೀನೇಜ್ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಆಮೀರ್ ಚಿತ್ರಪ್ರಿಯರ ಗಮನೆ ಸೆಳೆದಿದ್ದರು. ಈ ಸಿನಿಮಾ ಆಮೀರ್ ಅಭಿಮಾನಿಗಳ ನೆಚ್ಚಿನ ಸಿನಿಮಾಗಳ ಲಿಸ್ಟ್ ನಲ್ಲಿ ಒಂದಾಗಿದೆ.

ಲಗಾನ್ ಸಿನಿಮಾ
ಆಮೀರ್ ಖಾನ್ ವೃತ್ತಿ ಜೀವನದ ಅತ್ಯಂತ ಯಶಸ್ವಿ ಸಿನಿಮಾಗಳಲ್ಲಿ ಒಂದಾಗಿದೆ. 2001ರಲ್ಲಿ ತೆರೆಗೆ ಬಂದ ಈ ಸಿನಿಮಾ ಭಾರತೀಯ ಚಿತ್ರರಂಗದ ಎವರ್ ಗ್ರೀನ್ ಸಿನಿಮಾಗಳಲ್ಲಿ ಒಂದು. ಹಳ್ಳಿಯ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಪಾತ್ರದಲ್ಲಿ ಆಮೀರ್ ನಟಿಸಿದ್ದರು. ಈ ಸಿನಿಮಾಗೆ ಚಿತ್ರಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನು ಈ ಸಿನಿಮಾ ಆಸ್ಕರ್ ರೇಸ್ ನಲ್ಲಿ ಜಾಗಪಡೆದಿತ್ತು.

ತಾರೆ ಜಮೀನ್ ಪರ್
ತಾರೆ ಜಮೀನ್ ಪರ್ ಸಿನಿಮಾದಲ್ಲಿ ರಾಮ್ ಶಂಕರ್ ಪಾತ್ರದಲ್ಲಿ ಆಮೀರ್ ಖಾನ್ ಕಾಣಿಸಿಕೊಂಡಿದ್ದರು. ಪ್ರತಿ ಮಗು ಕೂಡ ವಿಶೇಷ ಎನ್ನುವ ಪ್ರಮುಖ ಸಂದೇಶವನ್ನು ಈ ಸಿನಿಮಾ ಮೂಲಕ ನೀಡಲಾಗಿತ್ತು. ಡಿಸ್ಲಕ್ಸಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಮಗುವನ್ನು ಹೆಚ್ಚಿನ ಕಾಳಜಿ ವಹಿಸಿ ಆತನಲ್ಲಿ ಬದಲಾವಣೆ ತರುವ ಆಮೀರ್ ಪಾತ್ರ ಚಿತ್ರಪ್ರಿಯರ ಹೃದಯಗೆದ್ದಿತ್ತು.
'ಶಾರುಖ್ ಖಾನ್ ನನ್ನ ಕಾಲು ನೆಕ್ಕುತ್ತಿದ್ದಾನೆ' ಎಂದು ಹೇಳಿ ಬೇಷರತ್ ಕ್ಷಮೆ ಕೇಳಿದ್ದ ಆಮೀರ್ ಖಾನ್

ಗಜಿನಿ ಸಿನಿಮಾ
ಆಮೀರ್ ನಟನೆಯ ವಿಭಿನ್ನ ಸಿನಿಮಾಗಳಲ್ಲಿ ಘಜ್ನಿ ಕೂಡ ಒಂದು. ಸಂಜಯ್ ಪಾತ್ರದಲ್ಲಿ ನಟಿಸಿದ್ದ ಆಮೀರ್ ತನ್ನ ಪಾತ್ರಕ್ಕೆ ಸಂಪೂರ್ಣ ಜೀವತುಂಬಿದ್ದರು. ತನ್ನ ಪ್ರೇಯಸಿಯನ್ನು ರೌಡಿಗಳು ಸಾಯಿಸಿದ ಕಾರಣ ಸೇಡು ತೀರಿಸಿಸಿಕೊಳ್ಳಲು ಹೋಗಿ, ರೌಡಿಗಳ ಜೊತೆ ಹೊಡೆದಾಟದಲ್ಲಿ ನೆನಪಿನ ಶಕ್ತಿ ಕಳೆದುಕೊಂಡು, ಶಾರ್ಟ್ ಟೈಂ ಮೆಮೊರಿಯ ಪಾತ್ರದಲ್ಲಿ ಆಮೀರ್ ನಟಿಸಿದ್ದರು.

ಸೂಪರ್ ಹಿಟ್ 'ಪಿಕೆ' ಸಿನಿಮಾ
ಆಮೀರ್ ಖಾನ್ ನಟನೆಯ ಅದ್ಭುತ ಸಿನಿಮಾಗಳಲ್ಲಿ ಇದು ಕೂಡ ಒಂದು. ರಾಜ್ ಕುಮಾರ್ ಹಿರಾನಿ ಸಾರಥ್ಯದಲ್ಲಿ ಬಂದ ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಗಳಿಸಿತ್ತು. ಅನ್ಯಗ್ರಹ ಜೀವಿ ಪಾತ್ರದಲ್ಲಿ ಆಮೀರ್ ಖಾನ್ ನಟಿಸಿದ್ದರು. ಧರ್ಮದ ಹೆಸರಿನಲ್ಲಿ ಮೂಢನಂಬಿಕೆ ಮತ್ತು ದೇವಮಾನವರನ್ನು ಆರಾಧಿಸುವ ಜನರಿಗೆ ಈ ಸಿನಿಮಾ ಕಣ್ಣುತೆರೆಸುವಂತೆ ಮಾಡಿತ್ತು. ಮನರಂಜನೆ ಜೊತೆಗೆ ಉತ್ತಮ ಸಾಮಾಜಿಕ ಸಂದೇಶವನ್ನು ಈ ಸಿನಿಮಾ ನೀಡಿತ್ತು.

3 ಈಡಿಯಟ್ಸ್
ಆಮೀರ್ ಖಾನ್ ನಟಿಸಿದ್ದ ವಿಭಿನ್ನ ಪಾತ್ರದಲ್ಲಿ 3 ಈಡಿಯಟ್ಸ್ ಕೂಡ ಒಂದು. ವಿಶೇಷ ಎಂದರೆಚೀನಾದ ಸಿನಿಮಾರಂಗ ಕೂಡ ರೀಮೆಕ್ ಮಾಡಲು ಬಯಸಿದ್ದ ಮೊದಲ ಬಾಲಿವುಡ್ ಚಿತ್ರವಿದು. ಅಮೀರ್ ಖಾನ್ ಕಾಲೇಜು ಯುವಕನ ಪಾತ್ರದಲ್ಲಿ ಅಚ್ಚರಿ ಮೂಡಿಸಿದ್ದರು. ರಾಂಚೋ ಪಾತ್ರದಲ್ಲಿ ಮಿಂಚಿದ್ದ ಆಮೀರ್ ನನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು.
ಕನಸಿನ 'ಮಹಾಭಾರತ' ಚಿತ್ರದಿಂದ ಹಿಂದೆ ಸರಿದ ಆಮೀರ್: ವರ್ಷಗಳಿಂದ ಸಂಶೋಧನೆ ನಡೆಸಿ ಸಿನಿಮಾ ಕೈಬಿಟ್ಟಿದ್ದೇಕೆ?

ದಂಗಲ್ ಸಿನಿಮಾ
ಮಹವೀರ್ ಪೋಗತ್ ಸಿಂಗ್ ಆಗಿ ಆಮೀರ್ ಮತ್ತೊಮ್ಮೆ ಚಿತ್ರಪ್ರಿಯರ ಹೃದಯ ಗೆಲ್ಲುತ್ತಾರೆ. ಮಹವೀರ್ ಪೋಗತ್ ಸಿಂಗ್ ಅವರ ಜೀವನಾಧಾರಿತ ಸಿನಿಮಾ ಇದಾಗಿದ್ದು, ಆಮೀರ್ ಅದ್ಭುತವಾಗಿ ನಟಿಸಿದ್ದರು. ಕುಸ್ತಿ ಪಟುವಾಗಿ ತೆರೆಮೇಲೆ ಮಿಂಚಿದ್ದರು. ಈ ಪಾತ್ರಕ್ಕಾಗಿ ಅಮೀರ್ ಸಾಕಷ್ಟು ಶ್ರಮಿಸಿದ್ದರು. ಚಿತ್ರದಲ್ಲಿ ಆಮೀರ್ ಖಾನ್ ಬದಲಾವಣೆ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು. ಒಂದು ಸಿನಿಮಾಗಾಗಿ, ಪಾತ್ರಕ್ಕಾಗಿ ಆಮೀರ್ ಖಾನ್ ನಡೆಸುವ ತಯಾರಿ, ಅವರ ಶ್ರಮನಿಜಕ್ಕೂ ಅಚ್ಚರಿ ಮೂಡಿಸುತ್ತೆ.